Advertisements

ಶಿವಮೊಗ್ದಲ್ಲಿ ನಡೆದ ಅಚ್ಚರಿ ಘಟನೆ! ದಿನಕ್ಕೆರಡು ಬಾರಿ ಈ ಹಸು ಕಲ್ಲಿನ ಹತ್ತಿರ ಹೋಗಿ ಏನು ಮಾಡುತ್ತೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಪ್ರಕೃತಿಯ ಒಡಲಲ್ಲಿ ಎಷ್ಟೋ ವಿಸ್ಮಯಗಳು ಅಡಗಿವೆ. ಅ’ಗೋಚರ ಶಕ್ತಿ ಪುಂಜದಂತಿರುವ ಭೂ ಮಂಡಲದಲ್ಲಿ ಕಾತುಕಗಳಿಗೆ ಬರವಿಲ್ಲ. ಈಗೊಂದಿ ಅ’ಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿರೋದು ಮುಕ್ಕೋಟಿ ದೇವತೆಗಳ ಆವಾಸ ಸ್ಥಾನವೆಂದೆ ನಂಬಿರುವ ಗೋವು. ಹೌದು ಹೊಸ ನಗರ ತಾಲ್ಲೂಕಿನ ಕೆಂಚನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾದಾಪುರುದ ಪುಂಡಲಿ ಶೇಟ್ ಎಂಬುವವರ ಹಸು ಮಾಲೀಕನಿಗೆ ಹಾಲು ನೀಡದೆ ಭತ್ತದ ಗದ್ದೆಯಲ್ಲಿರುವ ಕಲ್ಲಿನ ಮೇಲೆ ನಿತ್ಯವೂ ಹಾಲು ಸುರಿಸಿ ಅ’ಚ್ಚರಿ ಮೂಡಿಸಿದೆ.. ಎರಡು ತಿಂಗಳ ಹಿಂದೆ ಪುಂಡಲಿ ಶೇಟ್ ಸಹೋದರರ ಮನೆಯ ಹಸುವೊಂದು ಚೊಚ್ಚಲ ಗಂಡು ಕರುವಿಗೆ ಜನ್ಮ ನೀಡಿತ್ತು.

Advertisements

ಆದರೆ ಹುಟ್ಟಿದ ಸಂದರ್ಭದಲ್ಲಿ ಕರು ಮೃ’ತ’ಪಟ್ಟಿತು.. ಇದಾದ ನಂತರ ಮಾಲೀಕರು ಒಂದು ತಿಂಗಳ ಕಾಲ ಗೋವಿನಿಂದ ಬೆಳಗ್ಗೆ ಮತ್ತು ಸಂಜೆ ಹಾಲು ಹಿಂಡಿದ್ದಾರೆ. ನಂತರದ ದಿನಗಳಲ್ಲಿ ಗೋವು ಕೆ’ಚ್ಚಲನ್ನ ಬತ್ತಿಸಿಕೊಂಡು ಹಾಲು ಕೊಡೊದನ್ನೇ ಸ್ಥಗಿತಗೊಳಿಸಿತು.. ಕರುವಿಲ್ಲದ ಕಾರಣ ಈಗೆ ಆಗಿರಬಹುದೆಂದು ಮನೆಯವರು ಭಾವಿಸಿದ್ದರು. ಈಗಿರುವಾಗ ಶೇಟ್ ಅವರ ಅಣ್ಣನ ಮಗ ತಮ್ಮ ಮನೆಯ ಹಸು ಜಮೀನಿನಲ್ಲಿರುವ ಲಿಂಗ ಮುದ್ರೆ ಕಲ್ಲೊಂದಕ್ಕೆ ಹಾಲು ಸುರಿಸುವ ವಿಶಿಷ್ಟ ವರ್ತನೆ ಗಮನಿಸಿದ್ದಾನೆ.

ಬೇರೆಯವರಿಗೆ ತಿಳಿಸಿ ಆಭಾಸವಾಗಬಾರದೆಂಬ ಉದ್ದೇಶದಿಂದ ಇತರರಿಗೆ ತಿಳಿಸದೇ ಮನೆಂದಿಯೆಲ್ಲಾ ಒಂದು ವಾರ ಕಾಲ ಗೋವಿನ ಈ ನಡವಳಿಕೆಯನ್ನು ಗಮನಿಸಿದ್ದಾರೆ.. ಕೊಟ್ಟಿಗೆಯಿಂದ ಬಿಟ್ಟ ತಕ್ಷಣ ನೇರವಾಗಿ ಕಲ್ಲಿನ ಕಡೆಗೆ ತೆರಳುತ್ತಿದ್ದ ಹಸು ಕಲ್ಲಿನ ಬಳಿ ತೆರಳಿ ಸುತ್ತುವರೆದು ಕರುವನ್ನ ಸಂತೈಸುವಷ್ಟೇ ಪ್ರೀತಿಯಿಂದ ಕಲ್ಲನ್ನ ಮುದ್ದಿಸುತ್ತದೆ. ನಂತರ ತನ್ನ ಕೆ’ಚ್ಚಲನ್ನ ಕಲ್ಲಿನ ಮೇಲ್ಭಾಗಕ್ಕೆ ತಾಗಿಸಿಕೊಂಡು ನಿಂತು ಬಿಡುತ್ತದೆ.. ಈ ಸಂದರ್ಭದಲ್ಲಿ ಕರುವಿಗೆ ಹಾಲುಣಿಸುವ ಗೋವಿನ ಚಲನ ವಲನಗಳನ್ನ ಗಮನಿಸಬಹುದಾಗಿದೆ. ಐದಾರು ನಿಮಿಷಗಳ ಹೊಳಗೆ ಈ ಕಾರ್ಯವನ್ನ ಪೂರೈಸಿಕೊಂಡು ಹಾಲಿನ ತೊರೆಯನ್ನ ಇಳಿಸಿಕೊಂಡ ಬಳಿಕ ಮೇಯಲು ತೆರಳುವ ದೃಶ್ಯ ಎಂತವರಲ್ಲಿಯೂ ಅದ್ಬುತ ಎನಿಸುತ್ತದೆ.