Advertisements

ಸ್ವತಃ ಕೈಯಿಂದ ವಿದ್ಯೆ ಕೊಡುವುದರಲ್ಲಿ ದೇವಿ ಸರಸ್ವತಿಗಿಂತಲೂ ಶಕ್ತಿಶಾಲಿ ಈ ದೇವಿ !

Adyathma

ಹಿಂದೂ ಧರ್ಮದಲ್ಲಿ ಅನೇಕ ದೇವರುಗಳನ್ನು ಆರಾಧಿಸುತ್ತಾರೆ. ವಿದ್ಯೆಗೆ ಗಣಪತಿ, ಸರಸ್ವತಿ, ಐಶ್ವರ್ಯಕ್ಕೆ ಲಕ್ಷ್ಮಿ, ಸೌಭಾಗ್ಯಕ್ಕೆ ಗೌರಿ..ಹೀಗೆ ಅನೇಕ ವಿಷಯಕ್ಕೆ ಅನೇಕ ದೇವರುಗಳ ಬೇರೆ ಬೇರೆ ರೂಪ ಗಳನ್ನ ಆರಾಧಿಸಲಾಗುತ್ತದೆ. ಉದಾಹರಣೆಗೆ ಶೃಂಗೇರಿಯ ದೇವಿ ಶಾರದೆಯ ಮಂದಿರವನ್ನು ವಿಧ್ಯೆ-ಜ್ಞಾನ ಪಡೆಯುವುದಕ್ಕಾಗಿಯೇ ವಿಶೇಷವಾಗಿ ನಮ್ಮ ಪೂರ್ವಜರು ರೂಪಿಸಿದ್ದಾರೆ. ಹೀಗೆ ಬೇರೆ ಬೇರೆ ಕಾರಣಗಳಿಗೆ ವಿವಿಧ ಮಂದಿರವನ್ನು ವೈಜ್ಞಾನಿಕವಾಗಿ ರೂಪಿಸಲಾಗಿದೆ.

Advertisements

ಜ್ಞಾನ ಮತ್ತು ವಿದ್ಯೆಗೆ ಮಾತೆ ಸರಸ್ವತಿಗಿಂತ ಹೆಚ್ಚು ಶಕ್ತಿ ಶಾಲಿ ದೇವರು ಒಬ್ಬರು ಇದ್ದಾರೆ. ಅವರೇ ಕಾಳಿ ಮಾತೆ. ಇದನ್ನು ಕೇಳಿ ಆಶ್ಚರ್ಯ ಎನಿಸಬಹುದು ಆದರೆ ಇದು ಪರಮ ಸತ್ಯ. ಕಾಳಿ ಮಾತೆ ಹೇಗೆ ದು’ಷ್ಟರ ಸಂ’ಹಾರಕ್ಕೆ, ಘೋ’ರ ರೂಪಕ್ಕೆ, ತಂ’ತ್ರ ಮತ್ತು ಮಂ’ತ್ರ ವಿದ್ಯೆಗೆ ಪ್ರತೀಕಳಾಗಿರುವಳೋ ಹಾಗೆ ಜ್ಞಾನ ಮತ್ತು ವಿಧ್ಯೆ ಪ್ರದಾಯಿನಿಯಾಗಿರುವಳು. ಮಾತೆ ಕಾಳಿಯನ್ನು ಒಲಿಸಿಕೊಂಡರೆ ಜ್ಞಾನ, ವೈರಾಗ್ಯ ಪ್ರಾಪ್ತಿ ಯಾಗುವುದು. ಇದಕ್ಕೆ ಸಾಕ್ಷಿ ವಿಶ್ವದ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್. ಕಾಳಿ ದೇವಿಯ ಕೃಪೆಯಿಂದ ಗಣಿತದ ಸಹಸ್ರಾರು ಸೂತ್ರಗಳನ್ನು ಅವರು ರಚಿಸಿದ್ದಾರೆ. ಇದಕ್ಕೆಲ್ಲ ಕಾರಣ ಸಾಕ್ಷಾತ್ ಕಾಳಿ ಮಾತೆ ಎಂದು ಅವರೇ ಸ್ವತಃ ಹೇಳಿ ಕೊಂಡಿದ್ದಾರೆ.

ಜ್ಞಾನ ವೈರಾಗ್ಯದ ಸಾಮ್ರಾಟ ಆದಿ ಶಂಕರಾಚಾರ್ಯ ಕಾಳಿ ದೇವಿಯ ಭಕ್ತರೂ ಹೌದು. ಕಾಳೀ ದೇವತೆಯ ಕೃಪೆಗೆ ಪಾತ್ರರಾದವರು. ರಾಮ ಕೃಷ್ಣ ಪರಮಹಂಸರು ಕಾಳಿ ದೇವಿಯ ಎಂತಹ ಭಕ್ತರೆಂದರೆ ಅವರೇ ಸ್ವತಃ ತಮ್ಮ ಕೈಯಿಂದ ದೇವಿಗೆ ಊಟ ಮಾಡಿಸುತ್ತಿದ್ದರಂತೆ. ಕಾಳೀ ಮಾತೆಯ ಭಕ್ತಿಯಲ್ಲಿ ಅವರು ಅಷ್ಟು ಪರವಶರಾಗಿದ್ದರು. ಇನ್ನು ಕವಿ ರತ್ನ ಕಾಳಿ ದಾಸ, ಕಾಳಿಯ ದಾಸನಾದ ಮೇಲೆ ಮಹಾ ಕವಿಯಾದ. ಹೀಗೆ ಅನೇಕ ಮಹಾಪುರುಷರು ಕಾಳಿಯನ್ನು ಒಲಿಸಿಕೊಂಡವರೇ. ಕಾಳಿ ದೇವಿಯ ಕೃಪೆಗೆ ಪಾತ್ರ ರಾದವರು ಸಾಮಾನ್ಯ ರಾಗಿರಲು ಸಾಧ್ಯವಿಲ್ಲ, ಅವರ ಉದ್ಧಾರ ನಿಶ್ಚಿತ.