Advertisements

ಒಂದೇ ದಿನಕ್ಕೆ ದಿಢೀರ್ ಕುಸಿದ ಚಿನ್ನದ ಬೆಲೆ! 1 ಗ್ರಾಂ ಚಿನ್ನದ ಬೆಲೆ ಕೇಳಿ, ಕೊಳ್ಳಲು ಮುಂದಾದ ಜನರು..

Kannada Mahiti

ನಮಸ್ತೆ ಸ್ನೇಹಿತರೆ, ಚಿನ್ನದ ಬೆಲೆಯಲ್ಲಿ ಕಳೆದ ಒಂದು ವಾರದಿಂದ ಬೆಲೆ ಕುಸಿತ ಕಾಣುತ್ತಿದೆ. ಇಷ್ಟೊಂದು ಚಿನ್ನದ ಬೆಲೆ ಯಾವತ್ತೂ ಕೂಡ ಇಳಿದಿಲ್ಲ.. ಇನ್ನೂ ಚಿನ್ನವನ್ನು ಖರೀದಿಸಲು ಸೂಕ್ತವಾದ ಸಮಯವಾದ್ರೂ ಯಾವುದು.. ಇವತ್ತು ಒಂದು ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ ಎಂದು‌ ತಿಳಿಯೋಣ. ಚಿನ್ನ ಅಂದರೆ ಯಾರಿಗೆ ತಾನೆ ಇಷ್ಟವಾಗೋದಿಲ್ಲ ಹೇಳಿ. ಅದರಲ್ಲೂ ಕೂಡ ನಮ್ಮ ಭಾರತೀಯರು ಚಿನ್ನವನ್ನ ಖರೀದಿ ಮಾಡೋದ್ರಲ್ಲಿ ಎತ್ತಿದ ಕೈ. ಇನ್ನೂ ಚಿನ್ನದ ಬೆಲೆ ಇಷ್ಟೊಂದು ಇಳಿದಿರೋದು ಎಲ್ಲಾ ಮಧ್ಯಮ ವರ್ಗದ ಕುಟುಂಬದವರಿಗೆ ಸಂತಸದ ಸುದ್ದಿ.

Advertisements

ಇನ್ನೂ ಈ ಮಾರ್ಚ ತಿಂಗಳಿನಲ್ಲಿ ಮದುವೆ ಸೀಸನ್ ಗಳು, ಸಮಾರಂಭಗಳು ಶುರುವಾಗುತ್ತಿದ್ದು ಚಿನ್ನ ಖರೀದಿ ಮಾಡಲು ಇದೊಂದು ಸೂಕ್ತವಾದ ಸಮಯ. ಕಳೆದ ವರ್ಷ ಮಾರ್ಚ್ ನಲ್ಲಿ ಲಾಕ್ ಡೌನ್ ಗೂ ಮುಂಚೆ ಒಂದು ಗ್ರಾಂ ಚಿನ್ನದ ಬೆಲೆ 3800 ರುಪಾಯಿ ಇತ್ತು.. ಆದರೆ ಲಾಕ್ ಡೌನ್ ಆದಮೇಲೆ ಒಂದು ಗ್ರಾಂ ಗೆ 5300 ರುಪಾಯಿ ಕೂಡ ಆಗಿತ್ತು.. ಇದೇ ರೀತಿ ಚಿನ್ನದ ಬೆಲೆ ಏರುತ್ತಾ ಹೋದರೆ ಜನಸಾಮಾನ್ಯರು ಖರೀದಿಸೋದು ಕಷ್ಟ ಅಂದುಕೊಳ್ಳುದ್ದಿಂತೆಯೇ ಚಿನ್ನದ ಬೆಲೆ ದಿನೇ ದಿನೇ ಕುಸಿತ ಕಾಣಲು ಶುರುವಾಯಿತು.

ಇನ್ನೂ 4000 ಚಿನ್ನದ ಬೆಲೆ ಆಗೋದಿಲ್ಲ ಅಂದುಕೊಂಡವರಿಗೆ ಈಗ ಚಿನ್ನ ಅದೇ ಮಟ್ಟಕ್ಕೆ ಬಂದಿಳಿದಿದೆ. ಇಂದು ಬೆಂಗಳೂರಿನಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 4120 ರೂಪಾಯಿ ಆಗಿದೆ. ಇದೇ ರೀತಿ ಇಳಿಯುತ್ತಾ ಹೋದರೆ ಕೇವಲ ಒಂದು ವಾರ ಅಥವಾ ಎರಡು ವಾರದಲ್ಲಿ ಕಳೆದ ವರ್ಷದ ಬೆಲೆಗೆ ಚಿನ್ನದ ಬೆಲೆ ಇಳಿಯಲಿದೆ. ಹೌದು ಆರ್ಥಿಕ ತಜ್ಞರ ಪ್ರಕಾರ ಚಿನ್ನದ ಬೆಲೆ ಮತ್ತೆ 3700 ಅಥವಾ 3600 ಸಮೀಪಕ್ಕೆ ಕೆಲವೇ ತಿಂಗಳುಗಳಲ್ಲಿ ಇಳಿಯುತ್ತದೆ ಎಂದು ಆರ್ಥಿಕ ತಜ್ಞರು ವಿಶ್ಲೆಷಿಸಿದ್ದಾರೆ.. ಇನ್ನೂ ನಿಮಗೆ ಚಿನ್ನದ ಬೆಲೆ ಇಳಿದಿರೋದು ಕುಷಿ ತಂದಿದಿಯಾ ಹಾಗಾದರೆ ಒಂದು ಗ್ರಾಂ ಚಿನ್ನದ ಬೆಲೆ ಎಷ್ಟಾದರೆ ನಿಮಗೆ ಖುಷಿಯಾಗುತ್ತದೆ ಎಂದು ತಿಳಿಸಿ.