Advertisements

ಈ ನದಿಯಲ್ಲಿ ಸಿಗುತ್ತದೆ ಬಂಗಾರದ ಕಲ್ಲುಗಳು.. ಯಾವ ನದಿ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನದಿ ಎಷ್ಟೋ ಜನರ ಹೊಟ್ಟೆ ಪಾಡಿನ ಮೂಲ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಬೆಸ್ತರು ಸಹ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.. ಇನ್ನೂ ಈ ಮಾಹಿತಿಯಲ್ಲಿ ಬೆಸ್ತರ ಬಗ್ಗೆ ಆಗಲಿ ಬೇರೆ ಯಾವುದೋ ವಿಷಯದ ಬಗ್ಗೆ ಆಗಲಿ ಹೇಳುತ್ತಿಲ್ಲ ಬದಲಿಗೆ ಒಂದು ನಿರ್ದಿಷ್ಟವಾದ ನದಿಯ ಬಗ್ಗೆ ಹೇಳುತ್ತಿದ್ದೇವೆ. ಹೌದು ಆ ನದಿಯೇ ಸ್ವರ್ಣ ರೇಖಾ ನದಿ.. ಒಂದು ಕಡೆ ನಮ್ಮ ದೇಶದಲ್ಲಿ ಚಿನ್ನದ ಬೆಲೆ ಆಕಾಶಕ್ಕೆ ಮುಟ್ಟಿರುವಾಗ. ಇನ್ನೊಂದು ಕಡೆ ಚಿನ್ನ ಕೇವಲ ಅಕ್ಕಿಯ ಬೆಲೆಗೆ ಸಿಗುತ್ತಿದೆ.. ಅದು ಹೇಗೆ ಅಂದರೆ ಇಲ್ಲಿನ ಸ್ವರ್ಣ ರೇಖಾ ನದಿಯಲ್ಲಿ ಚಿನ್ನ ಹರಿಯುತ್ತಿದೆ.

Advertisements

ಇನ್ನೂ ಇಲ್ಲಿಯ ಜನರು ಅನಕ್ಷರಸ್ಥರು.. ಈಗಾಗಿ ಇವರು ಬೇರೆ ಯಾವ ಕೆಲಸವನ್ನು ಮಾಡದೇ ಈ ನದಿಯಲ್ಲಿ ಹರಿಯುತ್ತಿರುವ ಚಿನ್ನವನ್ನು ಸಂಗ್ರಹಿಸೋದೆ ಇವರೆಲ್ಲರ ಕೆಲಸ‌. ಒರಿಸ್ಸಾ, ಪಶ್ಚಿಮ ಬಂಗಾಳದಿಂದ ಹರಿದು ಬರುವಂತಹ ನದಿ ಜಾರ್ಖಂಡ್ ರಾಜ್ಯದಲ್ಲಿ ಮಾತ್ರ ಬಂಗಾರ ಹೆಚ್ಚಾಗಿ ಸಿಗುತ್ತದೆ.. ಇನ್ನೂ ಇಲ್ಲಿನ ಜನಗಳಿಗೆ ದಿನನಿತ್ಯ ಆ ನದಿಯಲ್ಲಿ ಬಂಗಾರದ ಕಣಗಳನ್ನು ಹುಡುಕೋದೆ ಒಂದು ಕೆಲಸ. ಈ ನದಿಯಲ್ಲಿ ಹರಿಯುವಂತಹ ಚಿನ್ನದ ಕಣಗಳನ್ನು ಮಾರಿ ಕೋಟ್ಯಾಧಿಪತಿಗಳಾಗಿರುವವರು ಸಹ ಇದ್ದಾರೆ..

ಆದರೆ ಅನಕ್ಷರಸ್ಥರಿಗೆ ಮಾತ್ರ ಒಂದು ಬಂಗಾರದ ಕಣಕ್ಕೆ ಕೇವಲ 60 ರಿಂದ 100 ರೂಪಾಯಿಗಳು ಮಾತ್ರ ಸಿಗುತ್ತಿದೆ. ಇಲ್ಲಿ ಮಹಿಳೆಯರು ಮತ್ತು ಗಂಡಸರು ಮತ್ತು ಮಕ್ಕಳು ಎಲ್ಲರೂ ಸಹ ದಿನವಿಡೀ ಇದೇ ಕೆಲಸದಲ್ಲಿ ತೊಡಗಿರುತ್ತಾರೆ.. ಒಂದು ಕುಟುಂಬಕ್ಕೆ ದಿನದಲ್ಲಿ ಒಂದು ಅಥವಾ ಎರಡು ಬಂಗಾರದ ಕಣಗಳು ಮಾತ್ರ ಸಿಗುತ್ತದೆ ಇನ್ನೂ ತಿಂಗಳಿಗೆ 50 ರಿಂದ 60 ಬಂಗಾರದ ಕಣಗಳು ಮಾತ್ರ ಸಿಗುತ್ತದೆ ಇದರಿಂದಾಗಿ ಇವರಿಗೆ ಬರುವ ಹಣದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಆದರೆ ಇವರಿಗೆ ಮೋಸ ಮಾಡಿದ ಸೇಟುಗಳು ಮಾತ್ರ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.