Advertisements

ಈ ದೇವಸ್ಥಾನದಲ್ಲಿ ಇರುವ ಹಲ್ಲಿಯನ್ನು ಮುಟ್ಟಲು ಜನಸಾಗರವೇ ಬರುತ್ತದೆ.. ಇದನ್ನು ಮುಟ್ಟಿದರೆ ಏನಾಗುತ್ತದೆ ಗೊತ್ತಾ?

Kannada Mahiti

ಮನೆಗೆ ಬರುವ ಅತಿಥಿ ಎಂದ್ರೆ ಅದು ಹಲ್ಲಿ, ಹಲ್ಲಿಯನ್ನು ಕಂಡಾಕ್ಷಣ ಅದನ್ನು ಓಡಿಸುವ ಪ್ರಯತ್ನ ಮಾಡ್ತೇವೆ. ಹಾಗೇ ಹಲ್ಲಿ ಮೈಮೇಲೆ ಬಿದ್ರೆ ಅದು ಅಪಶುಕನ ಅಂತೆಲ್ಲ ಭಾವಿಸ್ತೇವೆ, ಹಾಗೇ ಹಲ್ಲಿ ಬಿದ್ರೆ ತಕ್ಷಣ ಸ್ನಾನ ಮಾಡಿ ದೇವರಿಗೆ ಪೂಜೆಮಾಡಿಬಿಡ್ತೇವೆ, ಆದರೆ ಈ ದೇವಸ್ಥಾನದಲ್ಲಿ ಭಕ್ತಾದಿಗಳು ಹಲ್ಲಿಯನ್ನು ಮುಟ್ಟುವ ಸಲುವಾಗಿಯೇ ಹೋಗ್ತಾರೆ.. ಅಷ್ಟಕ್ಕೂ ಅದು ಯಾವ ದೇವಸ್ಥಾನ.. ಏನಿದರ ಹಿನ್ನಲೆ ಹೇಳ್ತೀವಿ ನೋಡಿ.. ಹಲ್ಲಿಯನ್ನು ನಾವೆಲ್ಲ ಓಡಿಸುವ ಪ್ರಯತ್ನ ಮಾಡ್ತೇವೆ ವಿನಃ ಹೊಡೆಯಲು ಹೋಗುವುದಿಲ್ಲ, ಯಾಕಂದ್ರೆ ಹಲ್ಲಿಗೆ ಹೊಡೆದ ತಕ್ಷಣ ಅದು ಬಾಲವನ್ನು ಅಲ್ಲಿಯೇ ಬಿಟ್ಟು ಬಚಾವ್ ಆಗುತ್ತೆ, ಆಗ ಆ ಬಾಲ ವಿ’ಲ ವಿ’ಲ ಒದ್ದಾಡುವುದನ್ನು ನೋಡಲು ಅಸಹ್ಯವಾಗುವುದರಿಂದ ಯಾರು ಹಲ್ಲಿಗೆ ಹೊ’ಡೆಯಲು ಹೋಗುವುದಿಲ್ಲ..

[widget id=”custom_html-3″]

Advertisements

ಹಲ್ಲಿ ಮೈ ಮೇಲೆ ಬಿ’ದ್ರೆ ದೋ’ಷ ಎಂಬ ನಂಬಿಕೆಯಿದೆ ಆ ದೋಷ ಪರಿಹಾರಕ್ಕಾಗಿಯೇ ಜನ ಈ ದೇವಸ್ಥಾನಕ್ಕೆ ಹೋಗಿ ಹಲ್ಲಿ ಮುಟ್ಟಿ ಬರುತ್ತಾರೆ. ತಮಿಳುನಾಡಿನ ಕಾಂಚಿಯಲ್ಲಿರುವ ವರದರಾಜ ಪೆರಿಮಾಳ ದೇವಸ್ಥಾನಕ್ಕೆ ಹೋಗಿ ಅಲ್ಲಿರುವ ಚಿನ್ನದ ಹಾಗೂ ಬೆಳ್ಳಿಯ ಹಲ್ಲಿಯನ್ನು ಮುಟ್ಟಿ ಬಂದ್ರೆ ನಮ್ಮ ದೋ’ಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಜನರಲ್ಲಿ ನೂರಾರು ವರ್ಷದಿಂದ ಇದೆ. ಇನ್ನು ಈ ದೇವಸ್ಥಾನದಲ್ಲಿ ಚಿನ್ನದ ಹಾಗೂ ಬೆಳ್ಳಿಯ ಹಲ್ಲಿ ಪ್ರತಿಷ್ಟಾಪನೆ ಮಾಡಲು ಕೂಡ ಒಂದು ಹಿನ್ನಲೆಯಿದೆ. ಒಮ್ಮೆ ಗೌತಮ ಮುನಿಗಳು ದೇವರಿಗೆ ಅಭಿಷೇಕ ಮಾಡಲು ನೀರನ್ನು ತಮ್ಮ ಶಿಷ್ಯರ ಬಳಿ ತರಲು ಹೇಳ್ತಾರೆ, ಆಗ ಶಿಷ್ಯಂದಿರು ತಂದ ನೀರಿನಲ್ಲಿ ಹಲ್ಲಿ ಇರುವುದನ್ನು ಕಂಡು ಅವರಿಬ್ಬರಿಗೆ ಹಲ್ಲಿಯಾಗುವಂತೆ ಶಾ’ಪ ಕೊಡುತ್ತಾರೆ.

[widget id=”custom_html-3″]

ಶಾಪ ವಿಮೋಚನೆ ಮಾಡಲು ಕೇಳಿಕೊಂಡಾಗ ಗುರುವರ್ಯರು ವರದರಾಜ ದೇವಸ್ಥಾನಕ್ಕೆ ಹೋಗಿ ಶಾಪ ವಿಮೋಚನೆ ಮಾಡಿಕೊಳ್ಳಿ ಅಂತಾರೆ. ಇನ್ನು ಅಲ್ಲಿ ಹೋಗಿ ಭಕ್ತಿಯಿಂದ ಕೈ ಮುಗಿದಾಗ ಇವರಿಬ್ಬರ ಶಾ’ಪ ವಿಮೋಚನೆಯಾಗಿ ಅಲ್ಲಿ ಒಬ್ಬರು ಚಿನ್ನದ ಹಲ್ಲಿಯಾಗಿ, ಇನ್ನೊಬ್ಬರು ಬೆಳ್ಳಿಯ ಹಲ್ಲಿಯಾಗಿ ಪ್ರತಿಷ್ಟಾಪನೆಯಾಗ್ತಾರೆ. ಇನ್ನು ಚಿನ್ನ ಸೂರ್ಯನಿಗೆ ಹೋಲಿಕೆಯಾದ್ರೆ ಬೆಳ್ಳಿ ಚಂದ್ರನಿಗೆ ಹೋಲಿಕೆಯಾಗ್ತದೆ. ಈ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಕೈ ಮುಗಿದು ಜನ ಹಲ್ಲಿಯನ್ನು ಮುಟ್ಟಿ ತಮ್ಮ ಪಾ’ಪ ಪರಿಹಾರಕ್ಕಾಗಿ ಭಕ್ತಿಯಿಂದ ಬೇಡಿಕೊಂಡು ಹೋಗ್ತಾರೆ. ತಮಿಳುನಾಡಿನ ಭಕ್ತರು ಮಾತ್ರವಲ್ಲದೇ ಅನ್ಯ ರಾಜ್ಯದ ಜನ ಸಹ ಈ ದೇವಸ್ಥಾನಕ್ಕೆ ದೌಡಾಯಿಸ್ತಾರೆ..

Leave a Reply

Your email address will not be published. Required fields are marked *