Advertisements

ತಂದೆ ನೇಪಾಳಿ ತಾಯಿ ಕನ್ನಡತಿ. ಗಣೇಶ್ 2 ತಮ್ಮಂದಿರು ಹೇಗಿದ್ದಾರೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಗೋಲ್ಡನ್ ಸ್ಟಾರ್ ಗಣೇಶ್ ಅವರು ಬೆಂಗಳೂರಿನಲ್ಲಿ 1978 ರಲ್ಲಿ ಜನಿಸುತ್ತಾರೆ.. ಗಣೇಶ್ ಅವರು ಒಂದು ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿದವರು. ಇವರ ತಂದೆಯ ಸ್ಥಳ ಮೂಲತಃ ನೇಪಾಳಿ.. ಹಾಗೂ ಇವರ ತಾಯಿ ಕನ್ನಡತಿ. ತಂದೆಯ ಹೆಸರು ಕಿಶನ್ ಬಹದ್ದೂರ್, ತಾಯಿ ಸುಲೋಚನ.. ಇನ್ನೂ ಗಣೇಶ್ ಅವರು ಚಿಕ್ಕವರಿದ್ದಾಗ ತುಂಬಾ ತುಂಟ ಹಾಗು ತರ್ಲೆಯಂತೆ ಇದ್ದವರು.. ಇವರು ಸಿನಿಮಾರಂಗಕ್ಕೆ ಬರುವ ಮೊದಲು ತುಂಬಾ ಕಷ್ಟಪಟ್ಟಿದ್ದಾರೆ.. ನಂತರ ಹಲಾವರು ಸಿನಿಮಾಗಳಲ್ಲಿ ಸೈಡ್ ಆ್ಯಕ್ಟರ್ ಆಗಿ ಕೆಲಸ ಮಾಡಿದ್ದಾರೆ.. ಮೊದಲ ಬಾರಿಗೆ ಗಣೇಶ್ ಅವರು ಕಾಮಿಡಿ ಟೈಮ್ ಶೋ ಮೂಲಕ ಕರ್ನಾಟಕ ಜನತೆಗೆ ಪರಿಚಯವಾಗುತ್ತಾರೆ..

Advertisements

ಇನ್ನೂ ಗಣೇಶ್ ಅವರು ಮುಂಗಾರು ಮಳೆ ಸಿನಿಮಾ ಮೂಲಕ ಕರ್ನಾಟಕ ಟಾಪ್ ನಟರ ಲೀಸ್ಟ್ ನಲ್ಲಿ ಸೇರಿಕೊಳ್ಳುತ್ತಾರೆ.. ಗಣೇಶ್ ಅವರಿಗೆ ಇಬ್ಬರು ತಮ್ಮಂದಿರೂ ಕೂಡ ಇದ್ದಾರೆ. ಇವರಿಬ್ಬರ ಹೆಸರು ಉಮೇಶ್ ಹಾಗೂ ಮಹೇಶ್.. ಮಹೇಶ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೆ ಮಹೇಶ್ ಅವರು ಅಣ್ಣ ಗಣೇಶ್ ಅವರಂತೆ ಹೆಸರು ಮಾಡಲು ಸಾಧ್ಯವಾಗಲಿಲ್ಲ.. ಮಹೇಶ್ ಅವರು 2012 ರಲ್ಲಿ ಪ್ರೇಮ ಎಂಬುವರನ್ನು ಮದುವೆಯಾಗಿದ್ದೂ ಈಗ ಇವರಿಗೆ ಒಬ್ಬ ಮಗ ಕೂಡ ಇದ್ದಾನೆ.. ಗಣೇಶ್ ಅವರ ಎರಡನೇ ತಮ್ಮನ ಹೆಸರು ಉಮೇಶ್.. ಇನ್ನೂ ಇವರು ಅಷ್ಟಾಗಿ ಮಾದ್ಯಮದ ಮುಂದೆ ಕಾಣಿಸಿಕೊಂಡಿಲ್ಲ..

ಕುಟುಂಬದವರು ಚೆನ್ನಾಗಿ ಇರಲೆಂದು ಗಣೇಶ್ ಅವರು ಮನೆಯನ್ನು ಕಟ್ಟಿಸಿಕೊಟ್ಟಿದ್ದಾರೆ.. ಇಷ್ಟೇ ಅಲ್ಲದೇ ಮಹೇಶ್ ಅವರಿಗೆ ಸ್ವಂತ ಬ್ಯುಸಿನೆಸ್ ಕೂಡ ಮಾಡಿಕೊಟ್ಟಿದ್ದಾರೆ.. ಇನ್ನೂ ಗಣೇಶ್ ಅವರ ಗಾಳಿಪಟ ಸಿನಿಮಾ ಬಹಳ ಹಿಟ್ ಕಂಡಿತ್ತು ಈಗ ಮತ್ತೊಮ್ಮೆ ಭಾಗ 2 ನಂತೆ ಈ ಸಿನಿಮಾ ಬರಲು ಸಜ್ಜಾಗಿದೆ.. ಮೊದಲ ಸಿನಿಮಾದಂತೆ ಈ ಸಿನಿಮಾ ಕೂಡ ಚೆನ್ನಾಗಿ ಮೂಡಿಬರಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಸ್ನೇಹಿತರೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಟಿಸಿರುವ ಸಿನಿಮಾಗಳಲ್ಲಿ ಯಾವ ಸಿನಿಮಾ ತುಂಬಾ ಬಾರಿ ನೋಡಿದ್ದೀರಾ ಮತ್ತು ಆ ಸಿನಿಮಾ ಯಾವುದು ಎಂದು ನಿಮ್ಮ ಅನಿಸಿಕೆ ತಿಳಿಸಿ..