ನಮಸ್ತೆ ಸ್ನೇಹಿತರೆ, ನಟ ಗೋಲ್ಡನ್ ಸ್ಟಾರ್ ಅವರು ಕೇವಲ 200 ರುಪಾಯಿ ಸಂಭಾವನೆ ಇಂದ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದಿದ್ದಾರೆ.. ಇವರು ಉದಯ ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಟೈಮ್ ಕಾರ್ಯಕ್ರಮದ ಮೂಲಕ ತಮ್ಮ ಬಣ್ಣದ ಬದುಕನ್ನು ಆರಂಭಿಸಿದರು. ನಂತರ ಕಿರುತೆರೆಯ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದರು.. ನಂತರದಲ್ಲಿ ಇವರು ಕೆಲವು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದರು. ಕೊಟ್ಟ ಪಾತ್ರಕ್ಕೆ ನೂರಕ್ಕೆ ನೂರರಷ್ಟು ಜೀವ ತುಂಬುತ್ತಿದ್ದ ಇವರು ನಂತರ ಚೆಲ್ಲಾಟ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಾಯಕನಾದರು.

ಇದಾದ ನಂತರದಲ್ಲಿ ಮುಂಗಾರು ಮಳೆ ಚಿತ್ರಕ್ಕೆ ಆಯ್ಕೆಯಾದರು.. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ದಾಖಲೆಯನ್ನೇ ನಿರ್ಮಿಸಿತು. ಈ ಚಿತ್ರದಲ್ಲಿ ಅದ್ಬುತವಾಗಿ ಅಭಿನಯಿಸಿದ ಗಣೇಶ್ ಅವರು ಸ್ಟಾರ್ ನಟರಾಗಿ ಹೊರ ಹೊಮ್ಮಿದರು.. ಮುಂಗಾರು ಮಳೆ ಚಿತ್ರ ಇವರ ವೃತ್ತಿ ಬದುಕಿನ ದಿಕ್ಕನ್ನೇ ಬದಲಾಯಿಸಿ ಇವರನ್ನು ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಬಿರುದನ್ನು ಪಡೆಯುವಂತೆ ಮಾಡಿತು. ನಂತರದಲ್ಲಿ ಗಾಳಿಪಟ ಚೆಲುವಿನ ಚಿತ್ತಾರ ಈಗೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದರು.. ಗೋಲ್ಡನ್ ಸ್ಟಾರ್ ಗಣೇಶ್ ಅವರು ಸುಮಾರು 30 ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆ ಬಂದ ಗಣೇಶ್ ಅವರು ತಮ್ಮ ವೃತ್ತಿ ಬದುಕಿನಲ್ಲಿ ಕೂಡ ಹಲಾವರು ಏಳು ಬೀಳುಗಳನ್ನ ಕಂಡಿದ್ದಾರೆ.. ಇನ್ನೂ ಗಣೇಶ್ ಅವರು ಶಿಲ್ಪ ಅವರನ್ನು ಮದುವೆಯಾಗಿದ್ದಾರೆ. ಇವರಿಗೆ ಒಂದು ಗಂಡು ಹಾಗು ಒಂದು ಹೆಣ್ಣು ಮಗುವಿದೆ. ಇನ್ನೂ ಗಣೇಶ್ ಅವರು ಕೋಟಿಗಟ್ಟಲೇ ಹಣವನ್ನು ಖರ್ಚು ಮಾಡಿ ರಾಜ ರಾಜೇಶ್ವರಿ ನಗರದಲ್ಲಿ ಒಂದು ಸುಂದರವಾದ ಐಷರಾಮಿ ಮನೆಯೊಂದನ್ನು ಕಟ್ಟಿಸಿದ್ದಾರೆ.. ಈ ಮನೆ ಕಟ್ಟಲು ಸುಮಾರು ಮೂವತ್ತು ಕೋಟಿ ಹಣ ಖರ್ಚಾಗಿದೆ ಎಂದು ತಿಳಿದು ಬಂದಿದೆ. ಈ ಪೊಟೊದಲ್ಲಿ ಗಣೇಶ್ ಅವರ ಸುಂದರವಾದ ಮನೆಯ ಹೊಳ ನೋಟವನ್ನು ನೀವು ನೋಡಬಹುದು.