Advertisements

ರಿಕ್ಷಾ ವಾಲಾ ಮಗ ಐಎಎಸ್ ಅಧಿಕಾರಿಯಾಗಿದ್ದು ಗೊತ್ತಾ? ಇವರ ಕಥೆ ಕೇಳಿದರೆ ಒಂದು ಕಡೆ ಕಣ್ಣೀರು ಇನ್ನೊಂದು ಗ್ರೇಟ್ ಅನಿಸುತ್ತದೆ..

Inspire Kannada Mahiti

ನಮಸ್ತೆ ಸ್ನೇಹಿತರೆ, ರಿಕ್ಷಾ ಕಾರ್ಮಿಕ ಮಗ ಈಗ ಐಎಎಸ್ ಆಪಿಸರ್ ಆಗಿದ್ದಾರೆ.. ಇದರ ಹಿಂದೆ ಇವರು ಪಟ್ಟ ಕಷ್ಟ ಕೇಳಿದರೆ ನಿಮಗೂ ಕೂಡ ಕಣ್ಣೀರು ಬರುತ್ತದೆ. ಈ ಹುಡುಗ ಮತ್ತು ಅವನ ಜೊತೆ ಅಪ್ಪ, ಅಮ್ಮ ಜೊತೆಗೆ ನಾಲ್ಕು ಜನ ಅಣ್ಣ ತಂಗಿಯರು ಇದ್ದಾರೆ.. ಇವರೆಲ್ಲರೂ ಎಂಟಕ್ಕೆ ಹನ್ನೆರಡು ಅಡಿ ಮನೆಯಲ್ಲಿ ವಾಸವಾಗುತ್ತಿದ್ದರು. ಇವರು ಮೂಲತಃ ಉತ್ತರ ಪ್ರದೇಶದ ವಾರಣಾಸಿಗೆ ಸೇರಿದವರು.. ಈ ಹುಡುಗನ ಹೆಸರು ಗೋವಿಂದ್ ಜೈಸ್ವಾಲ್. ಈ ಹುಡುಗ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ.. ಒಂದು ದಿನ ಸ್ಕೂಲ್ ಮುಗಿದ ನಂತರ ಮನೆಯ ಹತ್ತಿರವಿರುವ ಸ್ನೇಹಿತನ ಮನೆಗೆ ಆಟ ಆಡುವುದಕ್ಕೆ ಅಂತಾನೆ ಹೋಗಿದ್ದ.

Advertisements

ಆಗ ಸ್ನೇಹಿತನ ತಂದೆ ಇವನು ರಿಕ್ಷಾ ಎಳೆಯುವವನ ಮಗ ಇವನ ಜೊತೆ ಸೇರಬೇಡ ಎಂದು ಅವನನ್ನ ಅವಮಾನ ಮಾಡಿ ಕಳುಹಿಸಿದರು.‌ ಆಗಲೆ ಈ ಹುಡುಗ ನಾನು ಎನಾದರು ಸಾಧನೆ ಮಾಡ್ಲೇಬೆಕು ಎಂದು ದೃಡ ನಿರ್ಧಾರ ಮಾಡಿಕೊಂಡ.. ಅದು ಕಳೆದ ಒಂದು ವರ್ಷಕ್ಕೆ ಅವನ ತಾಯಿ ತೀರಿ ಹೋದರು. ಒಂದು ಕಡೆ ಬಡತನ, ಇನ್ನೊಂದು ಕಡೆ ಪುಸ್ತಕಗಳಿಗೂ ಹಣವಿಲ್ಲದ ಗೋವಿಂದ್ ಜೈಸ್ವಾಲಾ ಅವರು ಹೇಗೋ ಕಷ್ಟಪಟ್ಟು ಸೈನ್ಸ್ ನಲ್ಲಿ ಡಿಗ್ರಿ ಮಾಡಿ ಮುಗಿಸಿದರು.. ಬಿಎಸ್ಇ ಮುಗಿಸಿದ ನಂತರ ನಾನು ಐಎಎಸ್ ಆಗೆ ಆಗುತ್ತೇನೆ ಎಂದು ಸ್ನೇಹಿತರ ಬಳಿ ಹೇಳಿದ. ಆಗ ಅವರು ಇವನು ಕೆಲಸ ಮಾಡೋದನ್ನ ಬಿಟ್ಟು ಐಎಎಸ್ ಆಗ್ತಾನಂತೆ ಎಂದು ಅವಮಾನ ಮಾಡುತ್ತಾರೆ..

ಎರಡು ದಿನ ನಿದ್ರೆ ಮಾಡದ ಗೋವಿಂದ್ ಐಎಎಸ್ ಆಗಲೇ ಬೇಕೆಂದು ದೃಡ ನಿರ್ಧಾರ ಮಾಡಿ ತನ್ನ ತಂದೆಯ ಬಳಿ ಹೇಳಿಕೊಳ್ಳುತ್ತಾನೆ. ಆಗ ತಂದೆ ತಮ್ಮ ಬಳಿಯಿದ್ದ ಎರಡು ಎಕರೆ ಜಮೀನನ್ನು 40 ಸಾವಿರ ರೂಪಾಯಿಗಳಿಗೆ ಮಾರಿ ಮಗನಿಗೆ ಡೆಲ್ಲಿಗೆ ಹೋಗಿ ಐಎಎಸ್ ಆಗಿ ಬಾ ಎಂದು ಆ ಹಣವನ್ನು ಕೊಟ್ಟು ಕಳುಹಿಸುತ್ತಾರೆ.. ಈ ಹಣದಿಂದ ಡೆಲ್ಲಿಗೆ  ಹೋದ ಗೋವಿಂದ್ ಅಲ್ಲಿನ ಟ್ಯೂಶನ್ ಪೀಸ್ ಕಟ್ಟುವುದಕ್ಕೆ ಆಗದೆ ತಾನೆ ಮಕ್ಕಳಿಗೆ ಪಾಠ ಮಾಡಿ ಹಣ ಸಂಪಾದನೆ ಮಾಡುತ್ತಾ ತನ್ನ ಖರ್ಚುಗಳನ್ನು ನಿಭಾಯಿಸುತ್ತಾ‌ನೆ.

ಐಎಎಸ್ ಆಗಲೇ ಬೇಕೆಂದು ಹಗಲು ರಾತ್ರಿ ಕಷ್ಟಪಟ್ಟು ಓದಿದ ಗೋವಿಂದ್ ಜೈ ಸ್ವಾಲಾ ಮೊದಲ ಪ್ರಯತ್ನದಲ್ಲೇ ಭಾರತಕ್ಕೆ 48 ನೇ ಸ್ಥಾನದಲ್ಲಿ ಬರುತ್ತಾನೆ.. ಅವರ ತಂದೆಗೆ  ಪ್ರಪಂಚವೇ ಗೆದ್ದಷ್ಟು ಆನಂದವಾಯಿತು. ಈಗ ಗೋವಿಂದ್ ಜೈ ಸ್ವಾಲ್ ಉತ್ತರ ಪ್ರದೇಶದಲ್ಲಿ ದಿಟ್ಟ ಮತ್ತು ನಿಷ್ಠಾವಂತ ಐಎಎಸ್ ಅಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.. ತನ್ನ ತಂದೆ ಅಕ್ಕ, ಅಣ್ಣ, ಮಾತ್ರವಲ್ಲದೇ ಹತ್ತು ಅನಾಥ ಮಕ್ಕಳನ್ನು ಕೂಡ ತಾನೆ ನೋಡಿಕೊಂಡು ಓದಿಸುತ್ತಿದ್ದಾನೆ.. ಗೋವಿಂದ್ ಜೈ ಸ್ವಾಲಾ ಅವರು ಇಡೀ ದೇಶಕ್ಕೆ ಈಗ ಮಾದರಿಯಾಗಿದ್ದಾರೆ.