Advertisements

ಸತ್ಯ ಧಾರಾವಾಹಿಯ ಆ್ಯಂಗ್ರಿ ಲೇಡಿಯಾಗಿ ನಟಿಸುತ್ತಿರುವ ಈ ಖ್ಯಾತ ನಟಿ ಯಾರು ಗೊತ್ತಾ ?

Entertainment

ನಮಸ್ತೇ ಸ್ನೇಹಿತರೇ, ಲಾಕ್ ಡೌನ್ ಆದ ಬಳಿಕ ಈಗ ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿಗಳ ಅಲೆ ಶುರುವಾಗಿದೆ. ಖ್ಯಾತ ಕನ್ನಡ ಖಾಸಗಿ ವಾಹಿನಿ ಜೀ ಕನ್ನಡದಲ್ಲಿ ವಿಭಿನ್ನ ಕಥಾ ಹಂದರವುಳ್ಳ ಮಹಿಳಾ ಪ್ರಧಾನವಾದ ಹೊಸ ಧಾರವಾಹಿ ‘ಸತ್ಯ’ ವೀಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದೆ. ಇದಕ್ಕೆ ಆ ಸೀರಿಯಲ್ ನ ಪ್ರೊಮೊ ಅಷ್ಟು ಅದ್ಭುತವಾಗಿ ಮೂಡಿಬಂದಿರುವುದೇ ಕಾರಣ. ಇನ್ನು ಈ ಸೀರಿಯಲ್ ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ನಟಿ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ನಟಿ ಮಾಲಾಶ್ರೀ ಶೈಲಿಯಲ್ಲಿ ಎಂಟ್ರಿ ಕೊಟ್ಟಿರುವುದು ಮತ್ತಷ್ಟು ಕುತೂಹಲ ಹೆಚ್ಚುವಂತೆ ಮಾಡಿದೆ. ಖಡಕ್ ಲುಕ್ ನಲ್ಲಿ ಎಂಟ್ರಿ ಕೊಟ್ಟಿರುವ ಆ ನಟಿ ಯಾರೆಂದು ನೋಡೋಣ ಬನ್ನಿ..

Advertisements

ಸತ್ಯ ಧಾರಾವಾಹಿಯಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿಯ ಹೆಸರು ಗೌತಮಿ ಜಾಧವ್. ಇವರು ೨೦೧೨ರಲ್ಲೇ ನಾಗಪಂಚಮಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟವರು. ಇನ್ನು ಇದೆ ಅಲ್ಲದೆ ಕಿನಾರೆ, ಲೂಟಿ ಹಾಗು ಆದ್ಯಾ ಧಾರಾವಾಹಿಗಳಲ್ಲೂ ಕೂಡ ನಟಿಸಿದ್ದಾರೆ. ಇನ್ನು ಗೌತಮಿ ಜಾಧವ್ ಈಗ ಸತ್ಯ ಧಾರಾವಾಹಿಯಲ್ಲಿ ನಿರ್ವಹಿಸುತ್ತಿರುವ ಪಾತ್ರ ಅವರ ನಿಜ ಜೀವನಕ್ಕೆ ತದ್ವಿರುದ್ಧವಂತೆ. ತಮಿಳಿನ ಸಿನಿಮಾವೊಂದರಲ್ಲಿ ಕೂಡ ಕಾಣಿಸಿಕೊಂಡಿರುವ ನಟಿ ಗೌತಮಿ, ಸತ್ಯ ಸೀರಿಯಲ್ ನಲ್ಲಿ ನನ್ನ ಪಾತ್ರವನ್ನ ನಿಭಾಯಿಸೋದು ಸ್ವಲ್ಪ ಕಷ್ಟವೇ ಸರಿ ಎಂದು ಅವರು ಹೇಳಿದ್ದಾರೆ.

ಇನ್ನು ಸತ್ಯ ಧಾರಾವಾಹಿಯಲ್ಲಿ ಜೀನ್ಸ್ ಪ್ಯಾಂಟ್ ಟೀ ಶರ್ಟ್ ನಲ್ಲಿ ಕಾಣಿಸಿಕೊಳ್ಳಲಿರುವ ಗೌತಮಿ ಧಾರಾವಾಹಿಗೋಸ್ಕರ ನಾನು ಬೈಕ್ ಓಡಿಸ ಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಮಹಿಳಾ ಪ್ರಧಾನ ಕತೆ ಆಧಾರಿತ ಈ ಧಾರಾವಾಹಿಯಲ್ಲಿ ಗೌತಮಿ ಜಾಧವ್ ಲೀಡ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಈ ಧಾರಾವಾಹಿಯನ್ನ ಪೈಲ್ವಾನ್ ಚಿತ್ರದ ನಿರ್ಮಾಪಕಿಯಾಗಿರುವ ಸ್ವಪ್ನ ಕೃಷ್ಣ ಅವರು ಇದರ ನಿರ್ಮಾಣ ಮಾಡು ತ್ತಿದ್ದಾರೆ. ಇನ್ನು ಮಹಿಳಾ ಪ್ರಧಾನ ಚಿತ್ರ ಕಥೆಯಾಧಾರಿತ ಈ ಸೀರಿಯಲ್ ಸೂಪರ್ ಹಿಟ್ ಆಗಲಿ ಎಂಬುದು ನಮ್ಮೆಲ್ಲರ ಆಶಯ..