Advertisements

ನಿಮ್ಮ ಸಮಸ್ಯೆಗಳಿಗೆ ಗ್ರಾಮ ಪಂಚಾಯಿತಿ ಸಹಕರಿಸದಿದ್ದರೆ ಈ ರೀತಿ ಮಾಡಿ ಸಾಕು! ನಿಮ್ಮ ಕೆಲಸ ಪಕ್ಕಾ ಆಗುತ್ತೆ..

Kannada Mahiti

ಪ್ರಿಯ ಓದುಗರೆ ನಮ್ಮ ಊರಿನ ಅಥವಾ ಗ್ರಾಮದ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂದು ಇನ್ನೂ ಕೆಲವರಿಗೆ ಮಾಹಿತಿ ಇಲ್ಲ. ಯಾರನ್ನು ನಾವು ಸಂಪರ್ಕಿಸಿದರೆ ಕೆಲಸವಾಗುತ್ತದೆ ಎನ್ನುವುದು ತಿಳಿದಿಲ್ಲ. ಯಾವುದೇ ಒಂದು ಕೆಲಸಕ್ಕಾಗಿ ನಾವು ಗ್ರಾಮ ಪಂಚಾಯಿತಿಗೆ ಹೋದರೆ, ಅಲ್ಲಿ ನಮ್ಮ ಕೆಲಸವನ್ನು ಬೇಗನೆ ಮಾಡುವುದಿಲ್ಲ. ಕೆಲವೊಮ್ಮೆ ಲಂಚ ಕೂಡ ಕೇಳುತ್ತಾರೆ. ಗ್ರಾಮಕ್ಕೆ ಒಳ್ಳೆಯ ಕೆಲಸವಾಗಬೇಕಾದರೆ ಸರ್ಕಾರಿ ಸೌಲಭ್ಯ ಮತ್ತು ಉದ್ಯೋಗ ಖಾತ್ರಿ ಕೆಲಸದ ಬಗ್ಗೆ ಮಾಹಿತಿ ಕೇಳಿದಾಗ ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ. ಆಗ ಏನು ಮಾಡಬೇಕು? ಯಾರಿಗೆ ದೂರು ನೀಡಬೇಕು? ಹೇಗೆ ಸಮಸ್ಯೆ ಪರಿಹರಿಸಿಕೊಳ್ಳಬೇಕು ಗೊತ್ತಾ? ಅದರ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ ಪ್ರಿಯ ಗ್ರಾಮಸ್ಥರೇ ಅಧಿಕಾರಿಗಳಿಗೆ ದೂರು ಸಲ್ಲಿಸುವ ಮೊದಲು ನಾವು ಕೆಲ ಕಾರ್ಯಗಳನ್ನು ಮಾಡಬೇಕು ಅವು ಯಾವುವು ಎಂದರೆ, ನಾವು ಮೊದಲು ಒಂದೇ ಗ್ರಾಮದ ಹತ್ತರಿಂದ ಹದಿನೈದು ಜನರ ಗುಂಪನ್ನು ಸಿದ್ಧಪಡಿಸಿ ಕೊಂಡಿರಬೇಕು. ಎಲ್ಲರೂ ಒಂದೆಡೆ ಸೇರಿ ಸಮಸ್ಯೆ ಕುರಿತು ಚರ್ಚಿಸಬೇಕು. ತದನಂತರ ಆಗಿರುವ ತೊಂದರೆಯನ್ನು ವಿವರಿಸಿ ಲಿಖಿತ ರೂಪದಲ್ಲಿ ಸ್ಪಷ್ಟವಾಗಿ ದೂರನ್ನು ಬರೆಯಬೇಕು.

Advertisements

ಆ ದೂರು ಹೇಗಿರಬೇಕು ಎಂದರೆ, ದೂರಿನಲ್ಲಿ ನೈತಿಕತೆ, ನಿಜಾಂಶ ಇರಬೇಕು ಹಾಗೂ ದೂರು ನಿಮ್ಮ ಗ್ರಾಮದ ಮತ್ತು ಗ್ರಾಮದ ಜನರ ಹಿತದೃಷ್ಟಿಗಾಗಿ, ಒಳಿತಿಗಾಗಿ ಎನ್ನುವುದನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಬೇಕು. ದೂರು ಸ್ಪಷ್ಟವಾಗಿ ಯಾವುದರ ಬಗ್ಗೆ ಎನ್ನುವ ಉದ್ದೇಶ ಹೊಂದಿರಬೇಕು. ಇದೀಗ ಬರೆದಿರುವ ದೂರಿನ ಕೆಳಗೆ ಗುಂಪಿನ ಎಲ್ಲರೂ ಅಥವಾ ಗ್ರಾಮದ ಮುಖಂಡರಿಂದ ಸಹಿ ಹಾಕಿಸರಬೇಕು. ಈ ದೂರನ್ನು ನಿಮ್ಮ ಗ್ರಾಮ್ ಪಂಚಾಯಿತಿಯ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಗ್ರಾಮ್ ಪಂಚಾಯಿತಿಗೆ ದೂರು ಕೊಟ್ಟ ನಂತರ ಅಪ್ಲಾಯಿಸ್ಮೆಂಟ್ ರಸೀದಿಯನ್ನು ಪಡೆದುಕೊಳ್ಳಬೇಕು. ದೂರು ಕೊಟ್ಟಾಗ ಯಾವುದೇ ಕಾರಣಕ್ಕೂ ಅಪ್ಲಾಯಿಸ್ಮೆಂಟ್ ರಸೀದಿಯನ್ನು ಪಡೆಯಲು ಮರೆಯಬೇಡಿ. ಗ್ರಾಮ ಪಂಚಾಯಿತಿಯವರು ಕೇಳಿದಷ್ಟು ಸಮಯದಲ್ಲಿ ಕೆಲಸ ಪೂರ್ಣಗೊಳಿಸಬೇಕು. ಒಂದು ವೇಳೆ ನಿಮ್ಮ ಕೆಲಸವನ್ನು ಪೂರ್ಣಗೊಳಿಸದೆ ಇದ್ದರೆ ನೀವು ಮುಂದಿನ ಕ್ರಮ ತೆಗೆದುಕೊಳ್ಳಬಹುದು.

ಗ್ರಾಮ ಪಂಚಾಯತ್ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದಿದ್ದಾಗ ಗ್ರಾಮ ಪಂಚಾಯಿತಿ ವಿರುದ್ಧ ತಾಲೂಕು ಪಂಚಾಯತ್ ಗೆ ದೂರು ಕೊಡಬಹುದು. ಅಲ್ಲಿಯೂ ಕೂಡ 5 ರಿಂದ 10 ಜನರ ಗುಂಪು ಸೇರಿ ನಿಮ್ಮ ಗ್ರಾಮ ಪಂಚಾಯಿತಿಗೆ ಕೊಟ್ಟಿರುವ ದೂರನ್ನು ಉಲ್ಲೇಖಿಸಿ ಲಿಖಿತ ರೂಪದಲ್ಲಿ ಬರೆದು ಪುನಃ ತಾಲೂಕು ಪಂಚಾಯತ್ಗೆ ಸಲ್ಲಿಸಬೇಕು. ತಾಲೂಕು ಪಂಚಾಯಿತಿಯಲ್ಲೂ ಕೂಡ ದೂರಿನ ಅಪ್ಲಾಯಿಸ್ಮೆಂಟ್ ರಸೀದಿಯನ್ನು ತಪ್ಪದೇ ಪಡೆಯಬೇಕು. ತಾಲೂಕ ಮಟ್ಟದ ಅಧಿಕಾರಿಗಳು ನಿಮ್ಮ ದೂರನ್ನು ಪರಿಗಣಿಸಿ ಸಮಸ್ಯೆ ನೀವಾರಿಸುವರು. ಗ್ರಾಮ ಪಂಚಾಯತ್ ಅಧಿಕಾರಿಗಳಿಗೂ ತಿಳಿ ಹೇಳುವರು. ಒಂದು ವೇಳೆ ಇಲ್ಲಿಯೂ ಕೆಲಸವಾಗದಿದ್ದಲ್ಲಿ ಜಿಲ್ಲಾ ಪಂಚಾಯಿತಿಗೆ ನೇರವಾಗಿ ದೂರು ಕೊಡಬಹುದು. ಆಗ ಊರಿನ ಕೆಲಸ ತಪ್ಪದೇ ನೆರವೇರುತ್ತದೆ. ಆದರೆ ಯಾರೇ ದೂರು ಕೊಡುವ ಮುಂಚೆ ನಿಮ್ಮ ಊರಿನ ಚುನಾಯಿತ ಸದಸ್ಯರಿಗೆ ದೂರಿನ ವಿಷಯ ಮೊದಲೇ ತಿಳಿಸಿರಬೇಕು. ಅವರ ಒಪ್ಪಿಗೆ ಮತ್ತು ಬೆಂಬಲವಿದ್ದಾಗ ನಿಮ್ಮ್ ಗ್ರಾಮದ ಸಮಸ್ಯೆ ಬೇಗಾ ಪರಿಹಾರವಾಗುತ್ತದೆ. ನೀವು ಹೀಗೆ ಮಾಡಿದ್ದೆ ಆದಲ್ಲಿ ನಿಮ್ಮ್ ಗ್ರಾಮದ ಸಮಸ್ಯೆಗಳು ಬೇಗನೆ ಪರಿಹಾರವಾಗಿ, ಮಾದರಿ ಗ್ರಾಮ ಕೂಡಾ ಆಗಬಹುದು.