Advertisements

ಗೆದ್ದರೂ ಸೋತರೂ ಕೆಲಸ ಮಾಡುತ್ತೇನೆ ಎಂದು ವೈರಲ್ ಆಗಿದ್ದ ಗಂಗಮ್ಮನಿಗೆ ಬಿದ್ದ ಒಟ್ಟು ಮತಗಳೆಷ್ಟು ಗೊತ್ತಾ ?

Kannada Mahiti

ಸ್ನೇಹಿತರೇ, ಎಲ್ಲರೂ ಒಂದಾಗಿ ಜೀವನ ಮಾಡಿಕೊಂಡಿದ್ದ ಹಳ್ಳಿಯ ಜನರ ನಡುವೆ ದ್ವೇಷ, ಕೋಪ, ಜಗಳ ಹುಟ್ಟುಹಾಕಲು ಬಂದಿದ್ದೆ ಗ್ರಾಮಪಂಚಾಯಿತಿ ಚುನಾವಣೆ. ಕೊನೆಗೂ ಚುನಾವಣೆ ಫಲಿತಾಂಶ ಪ್ರಕಟವಾಗುವುದರೊಂದಿಗೆ ಈಗ ಎಲ್ಲದಕ್ಕೂ ತೆರೆಬಿದ್ದಂತಾಗಿದೆ. ಇನ್ನು ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ತಾವು ಗೆಲ್ಲುವುದ್ಕಕಾಗಿ ವಿಭಿನ್ನ ರೀತಿಯ ಪ್ರಯತ್ನಗಳನ್ನ ಮಾಡುವುದು ಸಾಮಾನ್ಯವೇ. ಅದೇ ರೀತಿ ತಾನು ಈ ಚುನಾವಣೆಯಲ್ಲಿ ಗೆಲ್ಲಲಿ ಅಥ್ವಾ ಸೋಲಲಿ ಜನರಿಗೋಸ್ಕರ ಕೆಲಸ ಮಾಡುವುದನ್ನ ನಿಲ್ಲಿಸುವುದಿಲ್ಲ ಎಂದು ತಾನು ಗೆದ್ದರೆ ಮಾಡುವ ಕೆಲಸಗಳೇನು ಸೋತರೆ ಮಾಡುವ ಕೆಲಸಗಳೇನು ಏನೆಂಬುದರ ಬಗ್ಗೆ ಪ್ರಣಾಳಿಕೆ ಪ್ರಿಂಟ್ ಮಾಡಿಸಿ ಹಂಚಿದ್ದ ಅಭ್ಯರ್ಥಿ ಗಂಗಮ್ಮನ ಬಗ್ಗೆ ಸುದ್ದಿಗಳು ಸಖತ್ ವೈರಲ್ ಆಗಿದ್ದವು. ಇನ್ನು ಈಗಾಗಲೇ ಫಲಿತಾಂಶ ಹೊರಬಿದ್ದಿದ್ದು ಗಂಗಮ್ಮನಿಗೆ ಬಿದ್ದ ಒಟ್ಟು ಮತಗಳೆಷ್ಟು ಎಂಬುದರ ಗೊತ್ತಾದ್ರೆ..

Advertisements

ಇನ್ನು ಈ ಗಂಗಮ್ಮ ಚುನಾವಣೆಗೆ ಸ್ಪರ್ಧಿಸಿದ್ದು ಕಲ್ಪತರು ನಾಡು ತುಮಕೂರು ಗ್ರಾಮಾಂತರ ಜಿಲ್ಲೆಯ ಹೆಬ್ಬೂರು ಎಂಬ ಗ್ರಾಮಪಂಚಾಯಿತಿಯಲ್ಲಿ. ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ಕೊಟ್ಟಿದ್ದ ಭರವಸೆಗಳ ಕಾರಣದಿಂದಾಗಿಯೇ ಪ್ರಣಾಳಿಕೆಯ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅವರ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಇದಕ್ಕೆ ಕಾರಣ ತಾನು ಗೆದ್ದರೆ ಏನೆಲ್ಲಾ ಕೆಲಸಗಳನ್ನ ಮಾಡಿಸುವೆ, ಒಂದು ವೇಳೆ ಸೋತರೆ ಯಾವೆಲ್ಲಾ ಕೆಲಸಗಳನ್ನೆಲ್ಲಾ ಮಾಡಿಸುವೆ ಎಂಬ ಪ್ರಚಾರ ಪತ್ರ. ಹಾಗಾದ್ರೆ ಆ ಪತ್ರದಲ್ಲಿ ಏನಿತ್ತು ಎಂಬುದನ್ನ ಕೆಳಗಡೆ ಇರುವ ಈ ಫೋಟೋದಲ್ಲಿ ನೋಡಿ..

ಇನ್ನು ಗಂಗಮ್ಮ ಕೊಟ್ಟಿರುವ ಭರವಸೆಗಳ ಕಾರಣದಿಂದ ಹೆಚ್ಚು ಓಟು ಬೀಳುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಗಳನ್ನ ಮಾಡಲಾಗಿತ್ತು. ಆದರೆ ಇದಕ್ಕೆಲ್ಲಾ ತೆರೆ ಬಿದ್ದಿದ್ದು ಗಂಗಮ್ಮನಿಗೆ ಬಿದ್ದ ಒಟ್ಟು ಮತಗಳ ಸಂಖ್ಯೆ ಈಗ ಬಹಿರಂಗವಾಗಿದೆ. ಹೌದು, ಇಷ್ಟೆಲ್ಲಾ ಭರವಸೆಗಳನ್ನ ಜನರಿಗೆ ಗಂಗಮ್ಮ ಕೊಟ್ಟಿದ್ದರೂ ಸಹ ಅವರಿಗೆ ಬಿದ್ದಿರುವುದು ಕೇವಲ ಆರು ಓಟುಗಳ ಅಷ್ಟೇ. ಇನ್ನು ಈ ಮತಗಳು ಅವರ ಮನೆಯರು ಅಥ್ವಾ ಸ್ನೇಹಿತರಿಂದ ಬಂದಿರಬಹುದು. ಆದರೆ ಇದಲ್ಲದೆಯೇ ನಡುವೆ ಬಯಲಾಗಿರುವ ಮತ್ತೊಂದು ವಿಷಯ ಎಂದರೆ ಖುದ್ದು ಗಂಗಮ್ಮನೆ ಮತ ಹಾಕಿಲ್ಲ. ಮತದಾನದ ಕೇಂದ್ರದ ಕಡೆ ತಿರುಗಿಯೂ ಸಹ ನೋಡಿಲ್ಲ. ಆದರೆ ಕಾರಣ ಏನೆಂದು ತಿಳಿದು ಬಂದಿಲ್ಲ. ಆದರೆ ಒಂದಂತೂ ಸತ್ಯ ಸ್ನೇಹಿತರೆ ಈ ಮಾತಿಯಿಂದ ನಮ್ಮ ಬಗ್ಗೆ ತಪ್ಪು ತಿಳಿಯಬೇಡಿ. ಗ್ರಾಮಪಂಚಾಯಿತಿ ಚುನಾವಣೆಗಳಲ್ಲಿ ಯಾರೇ ಮಹಿಳೆಯರು ನಿಂತು ಗೆದ್ದರೂ ಆ ಅಧಿಕಾರ ಹೋಗುವುದು ಮಾತ್ರ ಅವರ ಗಂಡ ಇಲ್ಲವೇ ಅವರ ಅಣ್ಣ ತಮ್ಮನ ಬಳಿ. ಇದು ಎಲ್ಲರಿಗೂ ಗೊತ್ತಿರುವ ಸತ್ಯವೇ.