ನಮಸ್ತೆ ಸ್ನೇಹಿತರೆ, ನಾವು ನಿಮಗೆ ತಿಳಿಸುತ್ತಿರುವ ಈ ಘಟನೆ ಬಗ್ಗೆ ನೀವೆಂದು ಕೇಳಿರಲು ಸಾಧ್ಯವಿಲ್ಲ.. ಹೌದು ಸ್ನೇಹಿತರೆ 93 ವರ್ಷದ ಅಜ್ಜಿಯನ್ನು ಪೋಲಿಸರು ಬಂ’ಧಿಸಿದ್ದಾರೆ. ಇದಕ್ಕೆಲ್ಲಾ ಕಾರಣ ಕೊನೆ ಉಸಿರು ಎಳೆಯುವ ವಯಸ್ಸಿನಲ್ಲಿ ಅಜ್ಜಿಗೆ ಇದ್ದಂತಹ ಕೊನೆ ಆಸೆಯನ್ನು ಕೇಳಿ ಪೋಲಿಸರು ಕೂಡ ಶಾಕ್ ಆಗಿ ಅಜ್ಜಿಯನ್ನು ಬಂ’ಧಿಸಿದ್ದಾರೆ.. ಅಸಲಿಗೆ ಈ ಘಟನೆ ನಡೆದಿರೋದು ಎಲ್ಲಿ, ಅಜ್ಜಿಗೆ ಇದ್ದ ಕೊನೆಯ ಆಸೆ ಏನು. ಎಲ್ಲವನ್ನೂ ತಿಳಿಯೋಣ ಬನ್ನಿ.. ಸಾಮಾನ್ಯವಾಗಿ ವಯಸ್ಸಾದವರಿಗೆ ಕೊನೆಗಾಲ ಬಂದಾಗ ಅವರಿಗೆ ಇಷ್ಟವಾದ ಅಡುಗೆಗಳನ್ನು ತರಿಸಿಕೊಡ್ತೀವಿ ಅಥವಾ ಮಾಡಿಕೊಡ್ತೀವಿ..

ಇನ್ನೂ ಕೆಲವರಿಗೆ ಕಾಶಿ ಯಾತ್ರೆ, ತೀರ್ಥ ಯಾತ್ರೆ ಹೋಗುವ ಆಸೆ ಕೂಡ ಇರುತ್ತೆ. ಅದನ್ನು ಕೂಡ ನಾವು ನೆರವೇರಿಸಿ ಕೊಡುತ್ತೇವೆ.. ಆದರೆ ಇಲ್ಲೊಂದು ಅಜ್ಜಿ ಕೊನೆಯ ಆಸೆ ಕೇಳಿ ಪೋಲಿಸರು ಅ’ರೆಸ್ಟ್ ಮಾಡಿದ್ದಾರೆ. ಈ ಘಟನೆ ನಡೆದಿರುವುದು ಬ್ರಿಟನ್ ದೇಶದಲ್ಲಿ.. 93 ವರ್ಷದ ಗ್ರಾಂಡ್ ಜೋಸಿ ಎಂಬ ವಯಸ್ಸಾದ ಅಜ್ಜಿ ಮ್ಯಾಂಚೆಸ್ಟರ್ ನಲ್ಲಿ ವಾಸ ಮಾಡುತ್ತಿದ್ದಾರೆ. ಇತ್ತೀಚಿಗೆ ತನ್ನ ಆರೋಗ್ಯದಲ್ಲಿ ತುಂಬಾ ಏರುಪೇರಾಗಿದ್ದರಿಂದ ತಾನು ಬದುಕುಳಿಯೋದಿಲ್ಲ ಎಂದು ತಿಳಿದುಬರುತ್ತದೆ.. ಅದಕ್ಕಾಗಿ ತಮ್ಮ ಮನೆಯವರ ಬಳಿ ಆಕೆಯ ಕೊನೆಯ ಆಸೆ ಹೇಳಿಕೊಂಡಿದ್ದಾಳೆ. ಇದನ್ನು ಅವರ ಮೊಮ್ಮಗ ಪ್ಯಾಂಸೆಟ್ ನೆರವೇರಿಸಿದ್ದಾನೆ..

ಅಜ್ಜಿಗಿದ್ದ ಕೊನೆಯ ಆಸೆ ಏನೆಂದರೆ ಅಜ್ಜಿ ಯಾವತ್ತೂ ಕೂಡ, ಯಾವುದೇ ತಪ್ಪುಗಳನ್ನು ಮಾಡಿಲ್ಲ. ಮತ್ತು ಜೈಲಿಗೂ ಕೂಡ ಹೋಗಿಲ್ಲ.. ಅದಕ್ಕಾಗಿ ಒಮ್ಮೆಯಾದರೂ ಅ’ರೆಸ್ಟ್ ಆಗಬೇಕೆಂಬ ಕೊನೆಯ ಆಸೆಯನ್ನು ಹೇಳಿಕೊಂಡಿದ್ದಾರೆ. ಆಕೆಯ ಆಸೆಯಂತೆ ಮ್ಯಾಂಚೆಸ್ಟರ್ ಪೋಲಿಸರು ಆಕೆಯ ಮನೆಗೆ ಬಂದು ಅ’ರೆಸ್ಟ್ ಮಾಡಿ ಐದೇ ನಿಮಿಷಗಳಲ್ಲಿ ಬಿಡುಗಡೆ ಮಾಡಿದ್ದಾರೆ.. ನೋಡಿದರಲ್ವಾ ಸ್ನೇಹಿತರೆ ಕೊನೆಯ ಆಸೆ ಅಂದರೆ ಹೀಗೂ ಇರುತ್ತಾ.. ಕೇಳುವುದಕ್ಕೆ ವಿಚಿತ್ರ ಅನಿಸಿದರೂ ಕೂಡ ಇದು ನಿಜವಾಗಿಯೂ ನಡೆದ ನೈಜ ಘಟನೆ.. ಇದರ ಬಗ್ಗೆ ನೀವೆನು ಹೇಳಲು ಇಷ್ಟಪಡುತ್ತೀರಾ ಎನ್ನುವುದನ್ನು ತಿಳಿಸಿ.