Advertisements

ರಾತ್ರಿ ಊಟ ಮಾಡಿ ಮಿಕ್ಕಿದ ಅನ್ನವನ್ನು ಬೆಳಗ್ಗೆ ಒಣಗಿಸಿ ಮತ್ತೆ ಅದರಲ್ಲೆ ಅನ್ನ ಮಾಡಿ ತಿನ್ನುತ್ತಿರುವ ಅಜ್ಜಿ. ಮನಮಿಡಿಯುವ ಸ್ಟೋರಿ ನೋಡಿ.

News

ಈ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಕೂಡ ಕಷ್ಟಗಳು ಅನ್ನೊದು ಇದ್ದೇ ಇರುತ್ತದೆ. ಒಂದಾನೊಂದು ಕಾಲದಲ್ಲಿ ಯಾರಿಗಾದರೂ ಸಮಸ್ಯೆ ಇದ್ದರೆ ಇಡೀ ಊರಿನ ಜನರು ಸೇರಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು. ಕಷ್ಟದಲ್ಲಿ ಇರುವವರಿಗೆ ಕೈ ಜೋಡಿಸುತ್ತಿದ್ದರು. ಆದರೆ ಈಗ ಯಾರಾದರೂ ಸಾವು ನೋವಲ್ಲಿ ಹೊರಡ್ತಾಯಿದ್ದರು. ಕಂಡರು ನೋಡದಂತೆ ಒಂದು ಹನಿ‌ ನೀರು ಕೊಡುವುದಕ್ಕೂ ಹಾಗದೆ ಹಿಂಜರಿಯುವ ಕೆಲಸವನ್ನ ಕೆಲವರು ಮಾಡ್ತಾರೆ.

Advertisements

ನಮಗೆ ಯಾಕೆ ಬೇಕು ಇನ್ನೊಬ್ಬರ ಕಥೆ ಎಂದು ಅಲ್ಲಿಂದ ಮೆಲ್ಲಗೆ ಜಾರಿಕೊಳೊ ಜನರೇ ಹೆಚ್ಚು . ಇನ್ನೂ ಈಗ ಈ ಸೋಷಿಯಲ್‌ ಮೀಡಿಯಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಹಾಗೂ ಪಾಲೋವರ್ಸ್ ಪಡೆಯಲು ತಮ್ಮ ಪಬ್ಲಿಸಿಟಿ‌ಗೋಸ್ಕರ ಮಾತ್ರ ಮಾನವೀಯತೆ ಅನ್ನೋ ನಾಟಕವನ್ನ ಮಾಡುವ ಜನರು ಕೂಡ ಕೆಲವರು ಇದ್ದಾರೆ‌.

ಆದರೆ ಇಂತಹ ಕಟುಕರ ನಡುವೆಯೂ ಏನು ಬಯಸದೇ ಮಾನವೀಯತೆ ಅಂದರೆ ಏನು ಎಂಬುದನ್ನು ತೋರಿಸೋ ಮನುಷ್ಯರು ಕೂಡ ಇದ್ದಾರೆ. ನಿಮಗೆ ಅನಿಸಿರಬಹುದು ಇದೆಲ್ಲಾ ನಮಗ್ಯಾಕಪ್ಪ ಈಗ ಹೇಳ್ತೀದೀರಾ ಅಂತೀರಾ? ಒಂಟಿ ವೃದ್ಧೆಯೊಬ್ಬರ ಕಣ್ಣಲ್ಲಿ ನೀರು ತರಿಸುವ ಕರುಣಜನಕ ಸ್ಥಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಂದ ಒಂದು ಪೋಟೊವನ್ನು ನೋಡಿ ಆ ಅಜ್ಜಿಗೆ ಸಹಾಯವನ್ನು ಮಾಡಿದ್ದಾರೆ.

ಈ ಒಂಟಿ ವೃದ್ದೆ ದೊಟ್ಟಮ್ಮ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದಲ್ಲಿ ವಾಸವಾಗಿದ್ದಾರೆ. ದೊಟ್ಟಮ್ಮ ದಿನನಿತ್ಯ ರಾತ್ರಿ ಊಟ ಮಾಡಿ ಉಳಿದ ಅನ್ನವನ್ನು ಬೆಳಗ್ಗೆ ಒಣಗಿಸಿ ಮತ್ತೆ ಅದನ್ನೇ ಅನ್ನ ಮಾಡಿ ತಿಂದು ಜೀವಿಸುತ್ತಿದ್ದರು. ಇನ್ನು ಇದರ ಪೊಟೊವನ್ನು ರಾಜೇಂದ್ರ ಎಂಬುವವರು ಸೋಷಿಯಲ್‌ ಮೀಡಿಯಾದಲ್ಲಿ ನೋಡಿ ತಮ್ಮ ಸಹೋದರನಿಗೆ ಈ ವಿಷಯ ತಿಳಿಸಿ ಅಜ್ಜಿಯ ಕಷ್ಣಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಹೌದು ವೃದ್ಧೆ ಮನೆಗೆ ತೆರಳಿ ಅವರಿಗೆ ಬೇಕಾದ ಅಗತ್ಯ ಆಹಾರ ಸಾಮಗ್ರಿಗಳನ್ನು ಕೊಟ್ಟು ರಾಜೇಂದ್ರ ಹಾಗೂ ಸಹೋದರ ತಮ್ಮ ತಂಡ ಮಾನವೀಯತೆ ಮೆರೆದಿದ್ದಾರೆ.

ಈ ಬಗ್ಗೆ ಪೇಸ್ಬುಕ್ ಪೇಜ್ ನಲ್ಲಿ ರಾಜೇಂದ್ರ ಅವರು ಬರೆದುಕೊಂಡಿದ್ದು ಸಹೋದರನಿಗೆ ಹಾಗೂ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಒಂಟಿ ಅಜ್ಜಿಯ ಕಷ್ಟಕ್ಕೆ ಸ್ಪಂದಿಸಿ ಸಹಾಯ ಮಾಡಿದ ಯುವಕರಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಜನತೆಯ ಪರವಾಗಿ ನಿಮಗೆ ಅನಂತ ಧನ್ಯವಾದಗಳು ಸರ್.