ನಮಸ್ತೆ ಸ್ನೇಹಿತರೆ, ದುಡ್ಡಿಲ್ಲ ಅಂದರೂ ಕೆಲವರು ತೋರಿಸುವ ಪ್ರೀತಿಯಿದೆ ಅಲ್ವಾ ಅದೇ ನಿಜವಾದ ವರ ಅಂತ ಹೇಳಬಹುದು. ಇನ್ನೂ ಈ ಅಜ್ಜ ಅಜ್ಜಿ ಮಾಡಿದ ಕೆಲಸ ತುಂಬಾ ಮೆಚ್ಚುಗೆಯನ್ನು ಪಡೆದಿದೆ.. ಅಷ್ಟಕ್ಕೂ ಇವರು ಮಾಡಿದ ಕೆಲಸವಾದ್ರು ಏನು ಗೊತ್ತಾ? ಇನ್ನೂ ಇಲ್ಲೊಬ್ಬ ವ್ಯಕ್ತಿಯ ಹೆಸರು ದಿಲೀಪ್.. ಇವರಿಗೆ ಟ್ರಾವೆಲ್ ಮಾಡುವ ಅವ್ಯಾಸವಿದ್ದು ಹಲವು ಪ್ರದೇಶಗಳಿಗೆ ಬೈಕ್ ನಲ್ಲಿ ಟ್ರಾವೆಲ್ ಮಾಡುತ್ತಾ ಇರುತ್ತಾರೆ. ಹಾಗೆಯೇ ವಿಶಾಖಪಟ್ಟಣಂ ಪಕ್ಕದಲ್ಲಿರುವ ನರಸಿಪಟ್ಟಣಂ ಟು ಲಂಬಸಿ ಎನ್ನುವ ದಾರಿಯಲ್ಲಿ ತನ್ನ ಬೈಕ್ ಅನ್ನು ನಿಲ್ಲಿಸುತ್ತಾರೆ..

ಆಗ ಅಲ್ಲಿದ್ದ ಒಂದು ಗುಡಿಸಿಲಿನ ಆಚೆ ಒಂದು ಟೇಬಲ್ ಹಾಕಿ ಟೀ ಅಂಗಡಿಯನ್ನು ಇಟ್ಟುಕೊಂಡಿದ್ದವರು ಒಬ್ಬ ವಯಸ್ಸಾದ ತಾತ. ದಿಲೀಪ್ ಅವರು ಹೋಗಿ ಆ ತಾತನ ಬಳಿ ಟೀ ಕೇಳಿದ್ದಾರೆ.. ಆ ಅಜ್ಜ ಮಾತನಾಡಿದ್ದು ದಿಲೀಪ್ ಗೆ ಅರ್ಥವಾಗಲಿಲ್ಲ, ಇನ್ನೂ ಹೋಳಗಿನಿಂದ ಬಂದ ಅಜ್ಜಿ ಮಾತನಾಡಿದ್ರೂ ಸಹ ಆತನಿಗೆ ಅರ್ಥವಾಗಲಿಲ್ಲ. ಆಗ ಊಟ ಬೇಕಾ ಅಂತ ಕೈಯಿಂದ ಕೇಳಿದ್ದಕ್ಕೆ ಒಂದು ಟೇಬಲ್ ನಲ್ಲಿ ದಿಲೀಪ್ ಅವರನ್ನು ಕೂರಿಸಿ ಇಡ್ಲಿ ಚಟ್ನಿಯನ್ನು ತಟ್ಟೆಯಲ್ಲಿ ಹಾಕಿಕೊಟ್ಟಿದ್ದಾರೆ..

ಇದನ್ನು ತಿಂದ ದಿಲೀಪ್. ಈ ಊಟಕ್ಕೆ ದುಡ್ಡು ಎಷ್ಟು ಅಂತ ಕೈಯಿಂದಲೇ ಕೇಳಿದ್ದಾರೆ. ಅದಕ್ಕೆ ಆ ದಂಪತಿ 5 ರೂಪಾಯಿ ಮಾತ್ರ ಅಂತ ಹೇಳಿದ್ದಾರೆ.. ಆಗ ದಿಲೀಪ್ ಗೆ ಆಶ್ಚರ್ಯವಾಗುತ್ತದೆ. 5 ಇಡ್ಲಿ ಒಂದು ಟೀ ಎಲ್ಲಾ ಸೇರಿ 5 ರೂಪಾಯಿ ಮಾತ್ರನಾ ಎಂದು ಡೌಟ್ ಆಗಿ ಮತ್ತೆ ಅವರನ್ನ ಕೇಳಿದ್ದಾರೆ.. ಆಗ ಅವರು ಇದು ಟೀ ಅಂಗಡಿ, ಟೀಗೆ ಮಾತ್ರ ದುಡ್ಡು ಕೊಡಿ ಸಾಕು ಅಂತ ಅಂಗಡಿಯ ಬೋರ್ಡ್ ಸಹ ತೋರಿಸಿದ್ದಾರೆ.

ನಂತರ ದಿಲೀಪ್ ಇಡ್ಲೀಗೂ ಹಣ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಆದರೆ ಅವರು ಕೊನೆಯ ತನಕ ಹಣವನ್ನು ತೆಗೆದುಕೊಳ್ಳಲೇ ಇಲ್ಲಾ.. ತಮಗೆ ಮಾಡಿಕೊಂಡ ಇಡ್ಲಿಯನ್ನು ತಮಗೂ ಕೂಡ ಕೊಟ್ಟಿದ್ದಾರೆ ಅಂತ ದಿಲೀಪ್ ಗೆ ನಂತರ ತಿಳಿದುಬಂದಿದೆ. ತಮಗೆ ಕಷ್ಟ ಇದ್ದರೂ ಕೂಡ ಅತಿಥಿಯಾಗಿ ಬಂದವರಿಗೆ ಹೊಟ್ಟೆ ತುಂಬಾ ಊಟ ಹಾಕಿದ ಇವರು ನಿಜವಾದ ಕುಬೇರರು ಅಲ್ವಾ.. ಸಧ್ಯ ದಿಲೀಪ್ ಅವರು ಈ ಘಟನೆಯನ್ನು ನಮ್ಮಲ್ಲಿ ಹಂಚಿಕೊಂಡಿದ್ದಾರೆ.