Advertisements

ಕನ್ನಡ ಸಿನಿಮಾದಲ್ಲಿ ಬರ ಸಿಡಿಲಿನಂತೆ ಮಿಂಚಿದ್ದ ನಟನ ಸ್ತಿಥಿ ಇಂದು ಏನಾಗಿದೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಸಿನಿಮಾ ರಂಗ ಒಂದು ಬಣ್ಣದ ಲೋಕ.. ಜನ ಸಾಮಾನ್ಯರು ಈ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡೋರಿಗೆ ಅಥವಾ ನಟ ನಟಿಯರಿಗೆ ಏನ್ರಿ ಸಮಸ್ಯೆ, ಲಕ್ಷ ಲಕ್ಷ ರುಪಾಯಿ ದುಡಿದಿರ್ತಾರೆ ಅಂಥ ಅಂದುಕೊಳ್ತಾರೆ. ಆದರೆ ಅಲ್ಲಿ ಕೆಲಸ ಮಾಡೋರಿಗೆ ಮಾತ್ರ ಗೊತ್ತು ಅವರ ಸಮಸ್ಯೆ ಹೆಸರು ಅವರ ಗೊಳೇನು ಅಂಥ.. ಈ ಒಬ್ಬ ಉದಯೋನ್ಮುಖನ ನಟನ ಹೆಸರು ಏಕಲವ್ಯ ಅಂಥ ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ. ಪ್ರತಿಭೆ ಇದ್ದಂಥ ಕಾರಣಕ್ಕಾಗಿಯೇ ಸ್ಯಾಂಡಲ್ವುಡ್ ಈ ನಟನನ್ನ ಕೈ ಬೀಸಿ ಕರೆಯುತ್ತೆ. ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡ್ತಾಯಿದ್ದಾಗೆ ಕಲಿವೀರಾ ಎಂಬ ಅದ್ಬುತ ಸಿನಿಮಾ ಒಂದರಲ್ಲಿ ಈ ನಟನಿಗೆ ಅವಕಾಶ ಸಿಗುತ್ತೆ.. ಆ ಅವಕಾಶವನ್ನು ಕೂಡ ಈ ನಟ ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಕಲಿವೀರ ಸಿನಿಮಾದ ಟ್ರೈಲರ್, ಟೀಸರ್, ರಿಲಿಸ್ ಆಗಿತ್ತು.. ಡ್ಯೂಪ್ ಇಲ್ಲದೇ ಸ್ಟಂಟ್ ಮಾಡುವಂತ ಈತನ ಪರಿಗೆ ಇಡೀ ಸ್ಯಾಂಡಲ್ವುಡ್ ಅರೇ ಕ್ಷಣ ದಂಗಾಗಿದ್ದರು.

[widget id=”custom_html-3″]

Advertisements

ಸ್ಯಾಂಡಲ್ವುಡ್ ನ ಗಟಾನು ಗಟಿ ನಟರೆಲ್ಲರೂ ಕೂಡ ಶಹಬಾಷ್ ಅಂದಿದ್ದರು. ಅಷ್ಟರ ಮಟ್ಟಿಗೆ ಅದ್ಬುತವಾಗಿ ಈ ಕಲಾವಿದ ತನ್ನನ್ನು ತಾನು ಸ್ಟಂಟ್ ನಲ್ಲಿ ತೊಡಗಿಸಿಕೊಂಡಿದ್ದಾನೆ.. ಅಷ್ಟೇ ಅದ್ಬುತವಾಗಿ ನಟನೆಯನ್ನು ಕೂಡ ಮಾಡಿದ್ದಾನೆ. ಈಗಾಗಿ ಸ್ಯಾಂಡಲ್ವುಡ್ ಗೆ ಓರ್ವ ಉತ್ತಮ ನಟ ಎಂಟ್ರಿಯಾಯ್ತು ಅಂಥ ಎಲ್ಲರೂ ಕೂಡ ಖುಷಿಯಲ್ಲಿ ಇದ್ರು ಇನ್ನೇನು ಕಲಿವೀರ ಸಿನಿಮಾ ರಿಲೀಸ್ ಆಗ್ಬೇಕಿತ್ತು ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಮಟ್ಟಿಗೆ ಯಶಸ್ಸನ್ನ ಕೂಡ ಕಾಣಬೇಕಿತ್ತು.. ಈ ನಟ ಏಕಲವ್ಯ ಕೂಡ ಅದೇ ರೀತಿ ಕನಸನ್ನ ಕಾಣ್ತಿದ್ರು ಕಲಿವೀರ ಸಿನಿಮಾ ರಿಲೀಸ್ ಆಗುತ್ತೆ ನನಗೊಂದು ಹೆಸರು ಖ್ಯಾತಿಯನ್ನ ತಂದುಕೊಡುತ್ತೆ ಈಗೆ ಸಾಕಷ್ಟು ಸಿನಿಮಾದ ಅವಕಾಶಗಳು ಸಿಗ್ತಾ ಹೋಗುತ್ತೆ ನಾನು ಸೆಟಲ್ ಆಗ್ಬಿಟ್ಟೆ ಅಂಥ ಈ ನಟ ಅಂದುಕೊಂಡಿದ್ದ ಆದರೆ ವಿಧಿಯಾಟವೇ ಬೇರೆಯಾಗಿತ್ತು.

[widget id=”custom_html-3″]

ನಾವು ಅಂದುಕೊಂಡಾಗೆ ಯಾವುದು ಕೂಡ ಆಗೋದಿಲ್ಲಾ ಅನ್ನೋದಕ್ಕೆ ಈ ನಟನ ಜೀವನವೇ ಸಾಕ್ಷಿ ಇನ್ನೇನು ಸಿನಿಮಾ ರಿಲೀಸ್ ಆಗ್ಬೇಕು ಅನ್ನುವ ಸಂದರ್ಭದಲ್ಲಿ ಕರೋನ ಮಹಾಮಾರಿ ವಕ್ಕರಿಸಿತು.. ಕರೋನ ಪ್ರತಿಯೊಬ್ಬರ ಬದುಕನ್ನ ಬದಲಿಸಿಬಿಟ್ಟಿದೆ. ಕೇವಲ ಆರೋಗ್ಯ ಸಂಬಂಧ ಸಮಸ್ಯೆ ಮಾತ್ರವಲ್ಲಾ.. ಅವರ ಕಂಪ್ಲೀಟ್ ಆದಂತಹ ಜೀವನವನ್ನೇ ಕರೋನ ಅಲ್ಲೊಲ ಕಲ್ಲೋಲ ಮಾಡಿಬಿಟ್ಟಿದೆ. ಈ ಕರೋನ ಎಪೆಕ್ಟ್ ಗೆ ಸಿಲುಕಿದಂತಹ ನಟರಲ್ಲಿ ಈ ಏಕಲವ್ಯ ಕೂಡ ಒಬ್ಬರು. ಕೇವಲ ಏಕಲವ್ಯ ಅಂತಲ್ಲಾ ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ನಟ ನಟಿಯರು, ತಂತ್ರಜ್ಞರು, ಕಲಾವಿದರು ಎಲ್ಲರ ಪರಿಸ್ಥಿತಿ ಕೂಡ ಹೀಗೆ ಆಗಿದೆ ಬಿಡಿ.‌. ಏಕಲವ್ಯ ಅವರ ವಿಚಾರವನ್ನ ನೋಡ್ತಾ ಹೋಗೋದಾದ್ರೆ. ಸಿನಿಮಾ ರಿಲೀಸ್ ಆಗುವ ಸಂದರ್ಭದಲ್ಲಿ ಕರೋನ ಬಂದಂತಹ ಕಾರಣಕ್ಕಾಗಿ ಸಿನಿಮಾ ರಿಲೀಸ್ ಆಗಲಿಲ್ಲಾ.. ಸಿನಿಮಾ ರಿಲೀಸ್ ಆಗದ ಕಾರಣಕ್ಕಾಗಿ ಬೇರೆ ಸಿನಿಮಾಗಳಲ್ಲಿ ಅವಕಾಶಗಳು ಕೂಡ ಸಿಗಲಿಲ್ಲಾ..

[widget id=”custom_html-3″]

ಈಗಾಹಿ ಹೊಟ್ಟೆ ಪಾಡಿಗಾಗಿ ಏನಾದ್ರು ಮಾಡಬೇಕಲ್ಲಾ ಸದ್ಯ ಏಕಲವ್ಯ ಕುರಿ ಮತ್ತು ಕೋಳಿಯ ಪಾರ್ಮ್ ಹೌಸ್ ನಲ್ಲಿ ಕೆಲಸವನ್ನ ಮಾಡ್ತಾಯಿದ್ದಾರೆ. ಹೊಟ್ಟೆ ಪಾಡಿಗಾಗಿ ಅಲ್ಲಿ ದುಡಿಯುವಂತ ಪರಿಸ್ಥಿತಿ ಈ ನಟನಿಗೆ ಈಗ ಎದುರಾಗಿದೆ.. ಪಾರ್ಮ್ ಹೌಸ್ ನಲ್ಲಿ ಕೆಲಸ ಮಾಡ್ಬಾರ್ದು ಅಂಥ ಅಲ್ಲಾ ಆದರೆ ಈ ನಟನಿಗೆ ಸಾಕಷ್ಟು ಕನಸುಗಳಿದ್ದವು ಸಿನಿಮಾ ಇಂಡಸ್ಟ್ರಿಯಲ್ಲಿ ಏನಾದರೂ ಮಾಡ್ಬೇಕು ನಾಲ್ಕು ಜನ ನನ್ನ ಹೆಸರನ್ನ ಪ್ರತೀದಿನ ನೆನಪು ಮಾಡಿಕೊಳ್ಳಬೇಕು.. ಆ ರೀತಿ ನಾನು ಬೆಳಿಬೇಕು ಅಂಥ ಅಂದುಕೊಂಡಿದ್ದಂತಹ ನಟ. ಆದರೆ ಏನ್ ಮಾಡೋದು ವಿಧಿಯಾಟ ಈತನನ್ನ ಸದ್ಯ ಪಾರ್ಮ್ ಹೌಸ್ ನಲ್ಲಿ ಕೆಲಸ ಮಾಡುವ ರೀತಿಯಲ್ಲಿ ಮಾಡಿಬಿಟ್ಟಿದೆ.. ನೋಡೋಣ ಮುಂದೆ ಏನಲ್ಲಾ ಆಗುತ್ತೆ ಅಂಥ. ಯಾಕಂದ್ರೆ ಕೆಳಗೆ ಬಿದ್ದೋರು ಮೇಲೆ ಬರ್ಲೇಬೇಕು ಮೇಲೆ ಹೋದೋರು ಕೆಳಗೆ ಬರ್ಲೇಬೇಕು ಇದೆ ಅಲ್ವಾ ಬದುಕು..