ನಮಸ್ತೇ ಸ್ನೇಹಿತರೆ, ಕನ್ನಡ ಚಿತ್ರರಂಗದ ಅತ್ಯಂತ ಯಶಸ್ಸಿನ ನಟಿಯರಲ್ಲಿ ಒಬ್ಬರಾದ ನಟಿ ಅಂದರೆ ಅದು ಸುಧಾರಾಣಿ.. ಅಪ್ಪಟ ಕನ್ನಡತಿ, ಆಗಸ್ಟ್ 14, 1973 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಗೋಪಾಲಕೃಷ್ಣ ಮತ್ತು ನಾಗಲಕ್ಷ್ಮೀ ಇವರ ತಂದೆ ತಾಯಿ.. ಕನ್ನಡದ ಖ್ಯಾತ ಚಿತ್ರ ಸಾಹಿತಿ ಉದಯ್ ಶಂಕರ್ ಅವರ ಹತ್ತಿರದ ಸಂಬಂಧಿಯಾಗಿದ್ದ ಸುಧಾರಾಣಿ ಅವರು ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಆನಂದ್ ಸಿನಿಮಾದಲ್ಲಿ ನಾಯಕಿಯಾಗಿ ಮೊದಲಬಾರಿಗೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು..

ಆನಂದ್ ಸಿನಿಮಾ 1986 ರಲ್ಲಿ ತೆರೆಕಂಡಿತ್ತು. ಇನ್ನೂ ಈ ಚಿತ್ರ ಶಿವರಾಜ್ ಕುಮಾರ್ ಅವರಿಗೂ ಸಹ ಮೊದಲ ಚಿತ್ರವಾಗಿತ್ತು.. ನಂತರ ಸುಧಾರಾಣಿ ಕನ್ನಡ ಹಲವಾರು ಚಿತ್ರಗಳಲ್ಲಿ ಟಾಪ್ ನಾಯಕಿಯಾಗಿ ನಟಿಸಿದರು. ಮನ ಮೆಚ್ಚಿದ ಹುಡುಗಿ, ದೇವತಾ ಮನುಷ್ಯ, ರಣರಂಗ, ಕೃಷ್ಣ ನೀ ಕುಣಿದಾಗ, ಪಂಚಮ ವೇದ, ಅಭಿಮನ್ಯು, ಮೈಸೂರು ಮಲ್ಲಿಗೆ.. ಈಗೆ ಕನ್ನಡದ ಹಲಾವರು ಹಿಟ್ ಚಿತ್ರಗಳಲ್ಲಿ ನಟಿ ಸುಧಾರಾಣಿ ಅಭಿನಯಿಸಿದ್ದಾರೆ.

ಭರತನಾಟ್ಯ ಕಲಾವಿದೆ ಕೂಡ ಆಗಿದ್ದ ಸುಧಾರಾಣಿ ಅವರು ಕನ್ನಡ ಹಲವಾರು ಟಾಪ್ ನಾಯಕ ನಟರ ಜೊತೆ ಹೆಜ್ಜೆ ಹಾಕಿದ್ದಾರೆ.. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಕುಮಾರ್ ಗೋವಿಂದ್, ಅನಂತ್ ನಾಗ್, ರೆಬಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್, ವಿನೋದ್ ರಾಜ್, ಕಾಶಿನಾಥ್, ಕ್ರೇಜಿಸ್ಟಾರ್ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್.. ಇನ್ನೂ ಹಲಾವರು ಟಾಪ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಸುಧಾರಾಣಿ ಅವರ ಜೋಡಿ.. ಕನ್ನಡದ ಹಿಟ್ ಜೋಡಿಗಳಲ್ಲಿ ಒಂದಾಗಿತ್ತು. ಇವರ ಪಂಚಮವೇದ ಹಾಗೂ ಮೈಸೂರು ಮಲ್ಲಿಗೆ ಚಿತ್ರಗಳಿಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.. ಹಾಗೆ ಇನ್ನೂ ಹಲವಾರು ಪ್ರಶಸ್ತಿಗಳು ಲಭಿಸಿವೆ. ಗೋವರ್ಧನ್ ಎಂಬುವವರನ್ನು ಮದುವೆಯಾಗಿರುವ ಸುಧಾರಾಣಿಯವರಿಗೆ ನಿಧಿ ಎಂಬ ಮುದ್ದಾದ ಮಗಳಿದ್ದಾಳೆ.. ನಟಿ ಸುಧಾರಾಣಿ ಅವರ ಯಾವ ಸಿನಿಮಾ ನಿಮಗೆ ತುಂಬಾ ಇಷ್ಟ ಎಂಬುದನ್ನು ತಿಳಿಸಿ.