Advertisements

ದೇಶದಲ್ಲಿ ಇರುವ ಯಾವುದೇ ದೇವಾಲಯದಲ್ಲಿ ಎಲ್ಲೂ ಕಾಣದ ವಿಶೇಷ ಸೇವೆಯೊಂದು ಇಲ್ಲಿ ನಡೆಯುತ್ತದೆ !

Kannada Mahiti

ಧಾರ್ಮಿಕ ನೆಲೆಬೀಡಾಗಿರುವ ಭಾರತದಲ್ಲಿ ಅನೇಕ ಪುರಾತನ ದೇವಾಲಯಗಳಿವೆ.ಒಂದೊಂದು ದೇವಸ್ಥಾನದಲ್ಲೂ ವಿಭಿನ್ನ ವಿಶೇಷ ಸಂಪ್ರದಾಯಗಳನ್ನ ಅನುಸರಿಸಲಾಗುತ್ತದೆ.ಹಾಗೆಯೇ ದೇಶದಾದ್ಯಂತ ಇರುವ ಗಣಪತಿ ದೇವಾಲಯದಲ್ಲಿ ಎಲ್ಲೂ ಕಾಣದ ವಿಶೇಷ ಸೇವೆಯೊಂದು,ಈ ದೇವಸ್ಥಾನದಲ್ಲಿ ನಡೆಯುತ್ತದೆ.ಈ ದೇವಾಲಯದಲ್ಲಿರುವ ಗಣಪತಿಗೆ ಪ್ರತಿನಿತ್ಯ ಒಂದು ಸಾವಿರ ಕೊಡಗಳ ನೀರಿನ ಅಭಿಷೇಕ ನಡೆಯುತ್ತದೆ.

Advertisements

ಹೌದು, ಬರೋಬ್ಬರಿ ಒಂದು ಸಾವಿರ ಕೊಡದಿಂದ ಜಲಾಭಿಷೇಕ ಪ್ರತೀ ದಿನ ನಡೆಯುತ್ತಾ ಬಂದಿದೆ.ಹಾಗಂತ ನೀರನ್ನು ಮೋಟಾರ್ ಬಳಸಿ ಪಂಪ್ ಮಾಡಿ ಎತ್ತುವುದಿಲ್ಲ. ಹಗ್ಗ ಹಾಕಿ ನೀರು ಸೇದುವುದೂ ಇಲ್ಲ.ಬಾವಿಯೊಳಗೆ ಇಳಿದು ಒಬ್ಬರು ನೀರು ತುಂಬಿಕೊಂಡ ಕೊಡವನ್ನ ಮತ್ತೊಬ್ಬರಿಗೆ ಕೊಡುತ್ತಾರೆ. ಹಾಗೇ ಒಬ್ಬರಿಂದ ಒಬ್ಬರಿಗೆ ಹಸ್ತಾಂತರಗೊಳ್ಳುತ್ತಾ ಸಾವಿರ ಕೊಡದ ನೀರಿನಿಂದ ಗಣಪತಿ ಮೂರ್ತಿಗೆ ಅಭಿಷೇಕ ಮಾಡಲಾಗುತ್ತದೆ. ಗ್ರಾಮದ ಆಸಕ್ತ ಜನರು, ಮತ್ತು ಹರಕೆ ಮಾಡಿಕೊಂಡಿರುವ ಭಕ್ತಾದಿಗಳು ಸೇರಿ ಒಂದು ಸಾವಿರ ಕೊಡ ನೀರಿನಿಂದ ವಿನಾಯಕ ದೇವರಿಗೆ ಅಭಿಷೇಕ ಮಾಡಲಾಗುತ್ತದೆ.

ಇನ್ನೂ ಆಶ್ಚರ್ಯ ವಿಷಯವೆಂದರೆ, ಮಾರನೇ ದಿನ ಬೆಳಿಗ್ಗೆ ನಿನ್ನೆ ಅಭಿಷೇಕ ಮಾಡಿದ್ದ ಅಷ್ಟೂ ನೀರನ್ನು ಹೊರತೆಗೆದು , ಅಂದಿನ ನೈವೇದ್ಯ ಮತ್ತು ಪ್ರಸಾದ ತಯಾರಿಸಲು ಬಳಕೆಯಾಗುತ್ತದೆ. ಹಾಗೂ ವಿನಾಯಕನ ಮೂರ್ತಿಯನ್ನು ಶುಭ್ರವಾದ ಬಟ್ಟೆಯಿಂದ ಚೂರೂ ನೀರು ಇಲ್ಲದಂತೆ ಒರೆಸಿ, ನಂತರವಷ್ಟೇ ಅಂದಿನ ದಿನದ ಅಭಿಷೇಕ ಮಾಡಲಾಗುತ್ತದೆ.ಹಾಗಂತ , ನೀವು ಇದ್ದಕ್ಕಿದ್ದಂತೆ ದೇವಸ್ಥಾನಕ್ಕೆ ಹೋಗಿ ನೀರು ಸೇದುವ ಸೇವೆ ಮಾಡಲಾಗುವುದಿಲ್ಲ.

ಈಗ ನೀವು ಹೆಸರು ಬರೆಸಿದರೆ, ಕನಿಷ್ಠ ಆರು ವರ್ಷ ಕಾಯಬೇಕಾಗುತ್ತದೆ. ಅಂದಹಾಗೆ ಕುಂದಾಪುರ ಕೋಟದಿಂದ ಹತ್ತು ಕಿಮೀ ದೂರದಲ್ಲಿ ಗುಡ್ಡೆಟ್ಟು ವಿನಾಯಕ ದೇವಳದಲ್ಲಿ ಈ ಅಪರೂಪದ ಘಟನೆ ನಡೆಯುತ್ತಿದೆ.ಮೊದಲ ಬಾರಿಗೆ ಭೇಟಿ ಕೊಡುವ ಭಕ್ತರು ಬೆಳಿಗ್ಗೆ 11-30 ಸಮಯದಲ್ಲಿ ಅಲ್ಲಿ ಇದ್ದರೇ, ನೀರು ತುಂಬುವ ಸೇವೆಯನ್ನು ವೀಕ್ಷಿಸಬಹುದು. ನಂತರ ಮಧ್ಯಾಹ್ನ 1-30 ಗೆ ಪ್ರತಿನಿತ್ಯ ಭಕ್ತಾದಿಗಳಿಗೆ ಪ್ರಸಾದವಿರುತ್ತದೆ.

ಇನ್ನು ಪ್ರತಿ ದಿನ ಸಾವಿರ ಕೊಡ ಏಕೆ ಎಂಬುದಕ್ಕೆ ಪುರಾಣಿಕ ಹಿನ್ನಲೆ ಕೂಡ ಇದೆ…ಬಹಳ ಹಿಂದೆ ತ್ರಿಪುರಾಸುರನೆಂಬ ರಾಕ್ಷಸ ಜನರಿಗೆ ಹಿಂಸೆ ಮಾಡುತ್ತಿದ್ದನಂತೆ..ಅದು ಪರಮೇಶ್ವರನಿಗೆ ತಿಳಿದು,ತ್ರಿಪುರಾಸುರ ರಾಕ್ಷಸನನ್ನು ಸಂಹಾರ ಮಾಡಲು ಯುದ್ದಕ್ಕೆ ಹೊರಡುವ ಮುನ್ನ, ಪರಮೇಶ್ವರ ಆದಿಯಲ್ಲಿ ಗಣಪನನ್ನು ಪೂಜಿಸದೇ ಯುದ್ದ ಆರಂಭಿಸಿದ್ದಕ್ಕಾಗಿ ರಾಕ್ಷಸನಿಂದ ಸೋಲುಂಟಾಗುತ್ತದೆಯಂತೆ..ತನಗೆ ಸೋಲಾಗಲು ಗಣಪತಿ ಕಾರಣನೆಂದು, ಕೋಪಗೊಂಡ ಶಿವನು, ತ್ರಿಶೂಲವನ್ನು ಗಣಪತಿಯ ಮೇಲೆ ಎಸೆಯುತ್ತಾನೆ..ಆಗ ತ್ರಿಶೂಲದಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಗಣಪತಿಯು ಜೇನು ತುಂಬಿದ ಕೊಳದಲ್ಲಿ ಬೀಳುತ್ತಾನೆ..ಮತ್ತು ಅಲ್ಲಿ ಸಾಕಷ್ಟು ಜೇನುತಿಂದ ಖುಷಿಯಲ್ಲಿ, ಶಿವನಿಗೆ ಜಯವಾಗಲೆಂದು ಹಾರೈಸುತ್ತಾನೆ..

ಶಿವ ತ್ರಿಪುರಾಸುರನನ್ನು ಸಂಹರಿಸಿ, ಕೈಲಾಸಕ್ಕೆ ಮರಳುತ್ತಾನೆ..ಆದರೆ ಜೇನು ಹೆಚ್ಚಾಗಿ ತಿಂದ ಕಾರಣ ಗಣಪತಿಯ ಮೈಯಲ್ಲಿ ಅಸಾಧ್ಯವಾದ ಪಿತ್ತವಾಗಿ ನರಳವುದನ್ನು ಕಂಡ ಶಿವಪಾರ್ವತಿಯರು,ದೇಹದ ಉರಿಶಮನಕ್ಕೆ ಸಲಹೆ ಕೊಟ್ಟಾಗ,ಅದರಂತೆ ಗಣಪತಿಯು ಈ ದೇವಸ್ಥಾದಲ್ಲಿ ಬಂದು ನೆಲೆಸುತ್ತಾನೆ..ಹತ್ತಿರದಲ್ಲೇ ಹರಿಯುವ ನರಸಿಂಹ ತೀರ್ಥದ ನೀರು ವಾರಾಹಿ ನದಿಯಿಂದ ಸೇರುತ್ತದೆ..ಅದೇ ನೀರಿನಲ್ಲಿ ಪ್ರತಿನಿತ್ಯ ಗಣಪತಿಗೆ ಸಾವಿರ ಕೊಡ ನೀರು ಬಾವಿಯಿಂದ ತುಂಬಿಕೊಂಡು ಅಭಿಷೇಕ ನಿರಂತರವಾಗಿ ಜರಗುತ್ತಿದ್ದರೆ ಮಾತ್ರ ಗಣಪತಿ ಸ್ವಾಮಿಯ ಮೈಉರಿ ಶಮನವಾಗುತ್ತದೆಯಂತೆ ಎಂದು ಅಲ್ಲಿನ ಅರ್ಚಕರು ಸ್ಥಳ ಮಹಿಮೆಯ ಹಿನ್ನಲೆ ಬಗ್ಗೆ ಹೇಳುತ್ತಾರೆ.ಇಲ್ಲಿರುವ ಗಣಪತಿ ಬಲಮುರಿ ಗಣಪತಿ ಯಾಗಿದ್ದು ನಂಬಿ ಬರುವ , ಸೇವೆಗೈಯುವ ಭಕ್ತರ ಕೋರಿಕೆಗಳನ್ನು ಈಡೇರಿಸುತ್ರಾನೆ ಎಂಬ ನಂಬಿಕೆ ಇದೆ.