Advertisements

ಕಿತ್ತಳೆ ಹಣ್ಣು ಮಾರಿಕೊಂಡು ಈತ ಮಾಡಿದ ಕೆಲಸ ಎನು ಗೊತ್ತಾ? ಈತನ ಮುಂದೆ ಕೈಲಾಗದವರು ತಲೆಬಾಗಬೇಕು..

Kannada Mahiti

ನಮಸ್ತೆ ಸ್ನೇಹಿತರೆ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹರೇಕಳ ಗ್ರಾಮದಲ್ಲಿ ಹಜ್ಜಬ್ಬ ಜನಿಸಿದರು.. ಇವರ ತಂದೆ ಕುಟ್ಟಿ ಮಕ್ಕಾ ಹಾಗೂ ಇವರ ತಾಯಿ ಪಾತೀಮಾ, ಇವರದು ಕಿತ್ತು ತಿನ್ನುವ ಬಡತ‌ನ.. ಹಜ್ಜಬ್ಬ ಅವರು ಒಂದು ಅಕ್ಷರವನ್ನು ಸಹ ಕಲಿಯದವರು. ಶಿಕ್ಷಣ ಅಂದರೆ ಏನು ಅಂತಲೇ ಇವರಿಗೆ ತಿಳಿದಿಲ್ಲ.. ಇನ್ನೂ ತಾನು ಓದದೇ ಇದ್ದರೂ ಬೇರೆ ಮಕ್ಕಳ ದಾರಿಗೆ ಹಜ್ಜಬ್ಬ ದಾರಿ ದೀಪವಾಗಿದ್ದಾರೆ.. ಹಜ್ಜಬ್ಬ ಅವರು ದಿನನಿತ್ಯದಂತೆ ಮಂಗಳೂರಿನಿಂದ ಕಿತ್ತಳೆ ಹಣ್ಣನ್ನು ತಂದು ಬುಟ್ಟಿಯಲ್ಲಿ ಮಾರುತ್ತಿದ್ದರು. ಇವರಿಗೆ ತುಳು ಬಾಷೆ ಬಿಟ್ಟರೆ ಯಾವ ಬಾಷೆಯೂ ಬರುತ್ತಿರಲಿಲ್ಲ.. ಒಂದು ದಿನ ವಿದೇಶಿ ಜೋಡಿಯೊಂದು ಇಂಗ್ಲಿಷ್ ನಲ್ಲಿ ಕಿತ್ತಳೆ ಹಣ್ಣಿನ ಬೆಲೆಯನ್ನು ಕೇಳಿದಾಗ ಬೇರೆ ಭಾಷೆ ಗೊತ್ತಿರದೇ ಹಜ್ಜಬ್ಬ ನಿರಂತರವಾಗಿ ಮುಜುಗರ ಅನುಭವಿಸಿದ್ದರು.

Advertisements

ಆ ದಿನವೇ ತನ್ನ ಊರಿನಲ್ಲಿ ಶಾಲೆಯನ್ನು ಕಟ್ಟಲು ಪ್ರಾರಂಭ ಮಾಡಿ, ಮಕ್ಕಳು ಇಂಗ್ಲೀಷ್ ನೊಂದಿಗೆ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವ ಕನಸನ್ನು ಕಾಣುತ್ತಾರೆ.. ಈ ಕನಸಿಗಾಗಿ ಶ್ರಮವನ್ನು ಸಹ ಪಡುತ್ತಾರೆ. ಕಿತ್ತಳೆ ಹಣ್ಣನ್ನು ಮಾರುತ್ತಿದ್ದಾಗ ಹಜ್ಜಬ್ಬ ಮಧ್ಯಾಹ್ನ ಊಟವನ್ನು ಮಾಡದೇ ಹೊಟ್ಟೆಯ ಹಸಿವನ್ನು ಲೆಕ್ಕಿಸದೆ 25 ಸಾವಿರವನ್ನು ಸಂಗ್ರಹಿಸುತ್ತಾರೆ.. ಈ ಹಣದಲ್ಲೇ ಅತಿಕ್ರಮಣ ಮಾಡಿದ ಸರ್ಕಾರಿ ಜಾಗವನ್ನು ಬಿಡಿಸಿಕೊಡಲು ಅಧಿಕಾರಿಗಳಿಗೆ ಮನವಿಯನ್ನು ಮಾಡುತ್ತಾರೆ. ಕೊನೆಗೆ 55 ಸಾವಿರವನ್ನು ಕೊಟ್ಟು ಅತಿಕ್ರಮಣ ಮಾಡಿದ ವ್ಯಕ್ತಿಯಿಂದ ಜಮೀನನ್ನು ಪಡೆಯುತ್ತಾರೆ. ಹಜ್ಜಬ್ಬ ಅವರ ಬಳಿ 25 ಸಾವಿರವಷ್ಟೇ ಇತ್ತು.. ಇನ್ನೂಳಿದ 35 ಸಾವಿರ ಹಣಕ್ಕಾಗಿ ತುಂಬಾನೆ ಕಷ್ಟ ಪಟ್ಟಿದ್ದಾರೆ.

ಶಾಲೆಯನ್ನು ಕಟ್ಟಬೇಕೆಂದು ಬಯಸಿದ ಅಜ್ಜಪ್ಪ ಜಿಲ್ಲಾ ಪಂಚಾಯತಿ, ಜಿಲ್ಲಾದಿ ಕಛೇರಿ, ಡಿಡಿಪಿಐ,  ಬಿ.ಇ.ಒ ಕಛೇರಿಗೆ ಹೋಗಿದ್ದರು.. ಇಲ್ಲಿ ಇವರನ್ನು ಯಾರು ಸಹ ಒಳಗೆ ಸೇರಿಸದೆ ಅವಮಾನ ಮಾಡಿದ್ದರು. ಆದರೂ ಛಲವನ್ನು ಬಿಡದೆ ಕಷ್ಟಪಟ್ಟು ಹಜ್ಜಬ್ಬ ಅಧಿಕಾರಿಗಳೊಂದಿಗೆ ಮಾತನಾಡುವ ಪ್ರಯತ್ನವನ್ನು ಮಾಡುತ್ತಿದ್ದರು.. ಸ್ಥಳಿಯ ಜನ ಪ್ರತಿನಿಧಿಗಳ ಸಹಕಾರದಿಂದ ಜಿಲ್ಲಾ ಪಂಚಾಯತಿ ಪ್ರಾಥಮಿಕ ಶಾಲೆಗೆ ಅನುಮತಿಯನ್ನು ಕೊಡುತ್ತಾರೆ. ನಂತರ ನ್ಯೂಪಡ್ಪು ಹಳ್ಳಿಯ ತ್ವಾಹಾ ಮಸೀದಿಯ ಮದ್ರಸ ಕಟ್ಟಡದಲ್ಲಿ ತಾತ್ಕಾಲಿಕವಾಗಿ 28 ಮಕ್ಕಳೊಂದಿಗೆ ಪ್ರಾಥಮಿಕ ಶಾಲೆಯನ್ನು ಪ್ರಾರಂಭಗೊಳಿಸುತ್ತಾರೆ.

ಇಷ್ಟಕ್ಕೆ ಸುಮ್ಮನಾಗದ ಹಜ್ಜಬ್ಬ ಅವರು ಸ್ವಂತ ದುಡ್ಡಿನಲ್ಲಿ ಶಾಲೆಯ ಕಟ್ಟಡ ನಿರ್ಮಾಣ ಮಾಡಬೇಕೆಂಬ ಕನಸನ್ನು ಕಾಣುತ್ತಾರೆ. ನಂತರ ಪತ್ರಿಕೆಯೊಂದು ವರ್ಷದ ವ್ಯಕ್ತಿ ಎನ್ನುವ ಒಂದು ಲಕ್ಷ ಬಹುಮಾನವನ್ನು ಹಜ್ಜಬ್ಬ ಅವರಿಗೆ  ಕೊಡುತ್ತಾರೆ.. ಈ ಹಣವನ್ನು ಸಹ ಶಾಲೆಗೆ ಹಾಕುತ್ತಾರೆ. ಇನ್ನೂ ಅಂದಿನ ಶಾಸಕರಾದ ಯು.ಟಿ ಖಾದರ್ ಅವರು ತಿಂಗಳಲ್ಲಿ ಪ್ರೌಢ ಶಾಲೆಯನ್ನ ಮಂಜೂರು ಮಾಡಿದರು.. ಈ ಸಮಯದಲ್ಲಿ ಸುದ್ದಿ ವಾಹಿನಿಯೊಂದು 5 ಲಕ್ಷ ಮೊತ್ತಗಳೊಂದಿದೆ ರಿಯಲ್ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.

ಈ ಪ್ರಶಸ್ತಿಯ ಹಣದಲ್ಲಿ ಶಾಲಾ ಮಕ್ಕಳಿಗೆ ಆಟದ ಮೈದಾನವನ್ನ  ಹಜ್ಜಬ್ಬ ಖರೀದಿಸುತ್ತಾರೆ.. ಹಳ್ಳಿಯ ಬಡ ವ್ಯಕ್ತಿಯೊಬ್ಬರು ಮಂಗಳೂರು ವಿಶ್ವವಿದ್ಯಾನಿಲಯದ, ಹಂಪಿ ವಿಶ್ವವಿದ್ಯಾನಿಲಯ, ಕುವೆಂಪು ವಿಶ್ವವಿದ್ಯಾನಿಲಯ ಹಜ್ಜಬ್ಬ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.. ಈಗ ಇವರು ಬಡ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಸಹ ಆರಂಭಿಸುವ ಕನಸನ್ನು ಕಾಣುತ್ತಿದ್ದಾರೆ. ಇದಕ್ಕಾಗಿ ಎಷ್ಟೇ ಅನಾರೋಗ್ಯ ವಿದ್ದರೂ ಸಹ ತಲೆಕೆಡಿಸಿಕೊಳ್ಳದೇ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದಾರೆ.. ಸ್ನೇಹಿತರೆ ಹಜ್ಜಬ್ಬ ಅವರ ಬಗ್ಗೆ ನೀವೇನು ಹೇಳಲು ಇಷ್ಟಪಡುತ್ತೀರಾ ಎಂಬುದನ್ನು ತಿಳಿಸಿ.