ಕೊರೊನಾ ವೈರಸ್ ಇಡೀ ವಿಶ್ವವನ್ನು ಒಂದು ಮಟ್ಟಿಗೆ ಕ್ರೂರವಾಗಿ ಕೊಲ್ಲುತ್ತಿದೆ ಎಲ್ಲಾ ಕ್ಷೇತ್ರಗಳಲ್ಲಿ ಆರ್ಥಿಕವಾಗಿ ನಷ್ಟವಾಗುತ್ತಿದೆ ಹಾಗೆ ಪತ್ರಿಕಾರಂಗ ನಷ್ಟದ ನೂಲಿಗೆ ಸಿಕ್ಕಿಕೊಂಡಿದೆ ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸಿದೆ ಜೊತೆಗೆ ಸಣ್ಣ ಸಣ್ಣ ಪತ್ರಿಕೆಗಳು ಮುಚ್ಚುವ ಪರಿಸ್ಥಿತಿಗೆ ಹೋಗಿವೆ ಹಾಯ್ ಬೆಂಗಳೂರು ಪತ್ರಿಕೆ ಭೀಮಾ ತೀರದ ದಡದ ಅಂತಕರು ಎಂಬ ಟೈಟಲ್ ಮೇಲೆ ಹೆಸರುವಾಸಿಯಾಯಿತು.

ಇದನ್ನು ಸಾರಥ್ಯ ವಹಿಸುತ್ತಿದ್ದವರು ರವಿ ಬೆಳಗೆರೆ ಸಿನಿಮಾ ಹೀರೋ ಗಳಿಗಿಂತ ಹೆಚ್ಚು ಅಭಿಮಾನಿಗಳನ್ನು ಹೊಂದಿದವರು ತಪ್ಪಿತಸ್ಥರು ಎಷ್ಟೇ ಪ್ರಬಲ ಸ್ಥಾನದಲ್ಲಿದ್ದರೂ ಅವರ ತಪ್ಪುಗಳನ್ನು ಎತ್ತಿ ಹಿಡಿದವರು ಲೇಖನಿ ಮತ್ತು ಹಾಯ್ ಬೆಂಗಳೂರು ಪತ್ರಿಕೆಯ ಮೂಲಕ ಹೆಸರುವಾಸಿಯಾದವರು ಹಾಯ್ ಬೆಂಗಳೂರು ಪತ್ರಿಕೆ ಸುಮಾರು ದಿನಗಳ ಕಾಲ ಕನ್ನಡ ನಾಡಿನ ಜನರ ಮನಸ್ಸನ್ನು ಗೆದ್ದಿತ್ತು.

ಈಗ ಕೊರೊನಾದದಿಂದ ಜಾಹೀರಾತು ಬರುತ್ತಿಲ್ಲ ಎಂಬ ಕಾರಣಕ್ಕಾಗಿ ಹಾಯ್ ಬೆಂಗಳೂರು ಪ್ರತ್ರಿಕೆ ನಿಲ್ಲಿಸಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿದೆ. ಜಾಹೀರಾತು ನಂಬದೆ ನಡೆಸುವ ಶಕ್ತಿ ರವಿಬೆಳಗೆರೆಯವರ ಹತ್ತಿರ ಇದೆ ಕಣ್ಣಿಗೆ ಕಾಣಿಸುವ ದುಷ್ಟರ ಬಗ್ಗೆ ತಲೆಕೆಡಿಸಿಕೊಳ್ಳದೆ ಪತ್ರಿಕೆ ನಡೆಸಿದ ರವಿ ಬೆಳಗೆರೆಗೆ ಈಗ ಕಣ್ಣಿಗೆಕಾಣಿಸದ ವೈರಸ್ ನಿಂದ ಪತ್ರಿಕೆಯನ್ನು ಮುಚ್ಚುತ್ತಿದ್ದಾರೆ ಎಂಬ ಆಲೋಚನೆ ಎಲ್ಲರ ಮನಸಲ್ಲಿ ಕಾಡುತ್ತಿದೆ ಇದರ ಬಗ್ಗೆ ವಿಶ್ವವಾಣಿ ಪತ್ರಿಕೆ ಚೀಫ್ ಎಡಿಟರ್ ವಿಶ್ವೇಶ್ವರ ಭಟ್ ಈ ರೀತಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ರವಿ ಮತ್ತೆ ಉದಯಿಸಲಿ! ಪತ್ರಿಕೆ ಮುಚ್ಚಿದರೆ ಅಪಹಾಸ್ಯ ಮಾಡುವ ಸಮಯವಲ್ಲ ರವಿ ಬೆಳಗೆರೆ ಸಾರಥ್ಯದ ಕನ್ನಡದ ಜನಪ್ರಿಯ ಪತ್ರಿಕೆ – ‘ಹಾಯ್ ಬೆಂಗಳೂರು’ ಕಣ್ಣು ಮುಚ್ಚಿದೆ ಎಂಬ ಸುದ್ದಿ ತಿಳಿದು ಕರುಳು ಕಿವುಚಿದಂತಾಯಿತು. ಅಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರು ಈಗ ಅತಂತ್ರರಾಗಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ರವಿ ಬೆಳಗೆರೆ ಅವರು ಜೀವಂತವಿರುವಾಗಲೇ ಅವರಕಣ್ಣೆದುರು ಈ ಪತ್ರಿಕೆಯನ್ನು ಸಾಯಗೊಡಬಾರದಿತ್ತು. ಅದನ್ನು ಮುನ್ನಡೆಸಿಕೊಡು ಹೋಗುವುದು ಅವರಿಗೆ ಅಸಾಧ್ಯವಾದುದೇನೂ ಆಗಿರಲಿಲ್ಲ. ನಾವು ಕಟ್ಟಿದ ಮಹಲು, ನಮ್ಮ ಮುಂದೆಯೇ ಕುಸಿದು ಹೋಗುವುದು, ಎಂಥವರಿಗಾದರೂ ಹೃದಯವಿದ್ರಾವಕ ಸಂಗತಿಯೇ.

ತಮ್ಮ ಜೀವಿತ ಕಾಲದಲ್ಲಿ ಅನೇಕ ಸಾಹಸಗಳನ್ನು ಮಾಡಿ, ಸಂಘರ್ಷಗಳನ್ನು ಎದುರಿಸಿದ ಬೆಳಗೆರೆ ಅವರು, ಕರೋನಾ ವೈರಸ್ ಎಂಬ ಕಣ್ಣಿಗೆ ಕಾಣದ ಹುಳಕ್ಕೆ ಹೆದರಿ, ಪತ್ರಿಕೆಯ ಪ್ರಕಟಣೆಯನ್ನು ಶಾಶ್ವತವಾಗಿ ನಿಲ್ಲಿಸುವ ನಿರ್ಧಾರವನ್ನು ಕೈಬಿಟ್ಟು, ಪರಿಸ್ಥಿತಿ ಸರಿ ಹೋದ ನಂತರ, ಮತ್ತೊಮ್ಮೆ ಅಖಾಡಕ್ಕೆ ಇಳಿಯಲಿ. ಮತ್ತೊಮ್ಮೆ ರವಿ ಉದಯಿಸಲಿ. ಇದು ನನ್ನ ಅಂತರಂಗದ ಶುಭ ಹಾರೈಕೆ ಎಂದು ಬರೆದುಕೊಂಡಿದ್ದಾರೆ. ಏನೇ ಆಗಲಿ ಯಾವುದೇ ಕಾರಣಕ್ಕೂ ಹಾಯ್ ಬೆಂಗಳೂರು ಪತ್ರಿಕೆಯನ್ನು ನಿಲ್ಲಿಸದೆಮುಂದುವರಿಸಬೇಕು ಎಂಬುದು ಎಲ್ಲರ ಆಶಯ.