Advertisements

ಕಾಡಲ್ಲಿ ಹುಟ್ಟಿ ಬೆಳೆದ ರಾಜೇಶ ನಗರಕ್ಕೆ ಬಂದು ತಪ್ಪು ಮಾಡಿದ್ನಾ ! ಮುಗ್ದ ಹಳ್ಳಿಹೈದನ ಬಾಳಲ್ಲಿ ನಿಜಕ್ಕೂ ನಡೆದಿದ್ದೇನು ಗೊತ್ತಾ.?

Cinema

ಸ್ನೇಹಿತರೇ, ಹಳ್ಳಿ ಹೈದ ಪೇಟೆಗೆ ಬಂದ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ತನ್ನ ಮುಗ್ದತೆಯಿಂದಲೇ ಕರ್ನಾಟಕದಾದ್ಯಂತ ಫೇಮಸ್ ಆದ ರಾಜೇಶನ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಗರದ ಜನ ಜೀವನದ ಬಗ್ಗೆ ಗೊತ್ತಿಲ್ಲದ ಕಾಡಿನಲ್ಲಿ ಜೀವನ ನಡೆಸುತ್ತಿದ್ದ ಮುಗ್ದ ಯುವಕನೊಬ್ಬ ಬೆಂಗಳೂರಿನಂತಹ ಮಹಾನಗರಕ್ಕೆ ಬಂದು ಕಿರುತೆರೆಯ ಪರದೆಯಲ್ಲಿ ಕಾಣಿಸಿಕೊಂಡಾಗ ಅವನಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹದು ಎಂಬುದಕ್ಕೆ ಈ ರಾಜೇಶನೇ ಸಾಕ್ಷಿ. ಹೌದು, ತನ್ನ ಮುಗ್ದತೆಯಿಂದಲೇ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಕಾರ್ಯಕ್ರಮದ ಮೂಲಕ ಅಪಾರ ಅಭಿಮಾನಿ ಬಳಗವನ್ನ ಪಡೆದುಕೊಂಡಿದ್ದ ಇದೆ ರಾಜೇಶ. ಕಿರುತೆರೆಯ ಬಳಿಕ ಬೆಳ್ಳಿತೆರೆಗೂ ಎಂಟ್ರಿ ಕೊಟ್ಟ ಹಳ್ಳಿ ಹೈದ ರಾಜೇಶನ ಜೀವನದಲ್ಲಿ ಊಹಿಸಲಾರದಂತಹ ನಡೆಯಬಾರದ ಘಟನೆಗಳು ನಡೆಯುತ್ತವೆ ಅಂತ ಯಾರೂ ಸಹ ಊಹೆ ಕೂಡ ಮಾಡಿರಲಿಲ್ಲ.

ಕಾಡಿನಲ್ಲಿ ತನ್ನದೇ ಆದ ಲೋಕದಲ್ಲಿ ವಿಹಾರ ಮಾಡುತ್ತಿದ್ದ ರಾಜೇಶನನ್ನ ನಗರಕ್ಕೆ ಕರೆತಂದಿದ್ದೇ ಆತನ ಜೀ’ವಕ್ಕೆ ಮುಳುವಾಯಿತಾ ಎಂಬ ಹಲವು ಪ್ರಶ್ನೆಗಳು ನಮ್ಮಲ್ಲಿ ಮೂಡುವುದು ಸಹಜ. ಹಾಗಾದ್ರೆ ಮುಗ್ದ ಯುವಕ ರಾಜೇಶನ ಜೀವನದಲ್ಲಿ ನಡೆದದ್ದಾದರೂ ಏನು ಎಂಬುದರ ಬಗ್ಗೆ ಮುಂದೆ ತಿಳಿಯೋಣ ಬನ್ನಿ..2010ರಲ್ಲಿ ಸುವರ್ಣ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಹಳ್ಳಿ ಹೈದ ಪ್ಯಾಟೆಗೆ ಬಂದ ಮೊದಲ ಸಂಚಿಕೆಗೆ ಕಾಡಿನಲ್ಲಿದ್ದ ರಾಜೇಶನನ್ನ ಕರೆತರಲಾಯಿತು. ತನ್ನ ಪ್ರತಿಭೆ, ವಿಭಿನ್ನವಾದ ಡೈಲಾಗ್, ಡಾನ್ಸ್ ಗಳಿಂದಲೇ ಕನ್ನಡಿಗರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದ ರಾಜೇಶ. ಕನ್ನಡಿಗರು ರಾಜೇಶನಿಗೆ ಜಂಗಲ್ ಜಾಕಿ ಎಂಬ ಬಿರುದನ್ನ ಸಹ ಕೊಟ್ಟರು. ಸಿಕ್ಕ ಅವಕಾಶವನ್ನ ಚೆನ್ನಾಗಿಯೇ ಬಳಸಿಕೊಂಡ. ಇದರ ಪರಿಣಾಮ ಈ ಕಾರ್ಯಕ್ರಮದ ಜಯಶಾಲಿ ಕೂಡ ಆದ. ಹತ್ತು ಲಕ್ಷ ಬಹುಮಾನವನ್ನ ತನ್ನದಾಗಿಸಿಕೊಂಡ. ಅಲ್ಲಿಂದ ರಾಜೇಶನ ಹಣೆಬರಹವೇ ಬದಲಾಗಿಹೋಯಿತು.

Advertisements

ಇನ್ನು ರಾಜೇಶನಲ್ಲಿ ಮೆಚ್ಚಲೇಬೇಕು ಪ್ರಮುಖ ಅಂಶ ಏನೆಂದರೆ ತಾನು ಗೆದ್ದ ಹಣದಿಂದ, ತಾನು ವಾಸ ಮಾಡುತ್ತಿದ್ದ ತಾಂಡ್ಯದಲ್ಲಿ ಕರೆಂಟ್ ಇಲ್ಲದ ಕಾರಣ, ಅದಕ್ಕಾಗಿ ಸ್ವಲ್ಪ ಹಣ ಖರ್ಚು ಮಾಡಿ, ತನ್ನ ತಾಂಡ್ಯಾದ ಮನೆಗಳಲ್ಲಿ ಬೆಳಕನ್ನ ಮೂಡಿಸಿದ. ಇನ್ನು ರಾಜೇಶನ ಖ್ಯಾತಿ ತುಂಬಾ ವೇಗವಾಗಿ ಹರಡಿ ಸುದ್ದಿಮಾಧ್ಯಮಗಳು ಸಹ ತಮ್ಮ ಟಿಆರ್ಪಿ ರೇಟಿಂಗ್ ಗಾಗಿ ರಾಜೇಶನನ್ನ ಉಪಯೋಗಿಸಿಕೊಂಡರು. ಇನ್ನು ಇದರಿಂದ ರಾಜೇಶ ಮತ್ತಷ್ಟು ಫೇಮಸ್ ಆದ. ಯಾವುದೇ ಒಬ್ಬ ವ್ಯಕ್ತಿ ತುಂಬಾ ಫ್ಯಾಮಸ್ ಆದರೆ ಮುಗಿತು ಮೊದಲು ಅವಕಾಶಗಳು ಹುಡುಕಿಕೊಂಡು ಬರುವುದೇ ಸಿನಿಮಾ ರಂಗದಿಂದ. ಅದೇ ರೀತಿ ಹಳ್ಳಿ ಹೈದ ರಾಜೇಶನಿಗೂ ಕೂಡ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದವು. ರಿಯಾಲಿಟಿ ಶೋನಲ್ಲಿ ಐಶ್ವರ್ಯ ಮತ್ತು ರಾಜೇಶನ ಜೋಡಿ ಚೆನ್ನಾಗಿಯೇ ವರ್ಕ್ ಔಟ್ ಆಗಿತ್ತು. ಇದೇ ಜೋಡಿಯೇ ಜಂಗಲ್ ಜಾಕಿ ಎಂಬ ಚಿತ್ರದಲ್ಲಿ ಅಭಿನಯಿಸಿದ್ರು. ಆದರೆ ಈ ಚಿತ್ರ ಕಿಂಚಿತ್ತೂ ಕೂಡ ಸದ್ದು ಮಾಡಲಿಲ್ಲ. ಆದರೆ ತನ್ನ ಮೊದಲ ಸಿನಿಮಾದ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದ ರಾಜೇಶ ತನ್ನ ಸೋಲನ್ನ ಸಹಿಸಲಾಗದೆ ಖಿ’ನ್ನತೆಗೆ ಒಳಗಾಗಿಬಿಟ್ಟ.

ಆದರೆ ತನ್ನ ಮ’ನೋವೇದನೆಯಿಂದ ಹೊರಬರದ ರಾಜೇಶನ ಹುಚ್ಚಾಟಗಳು ಹೆಚ್ಚಾದವು. ಮನೆಯವರ ಜೊತೆ, ಸಿಕ್ಕ ಸಿಕ್ಕವರ ಜೊತೆ ಬೀದಿಗಳಲ್ಲಿ ಕೂಡ ಜ’ಗಳ ಮಾಡಲು ಶುರುಮಾಡಿದ. ಎಷ್ಟರ ಮಟ್ಟಿಗೆ ಎಂದರೆ ಕೊನೆಗೆ ರಾಜೇಶನನ್ನ ಮಾನಸಿಕ ಕೇಂದ್ರಕ್ಕೂ ಸೇರಿಸಲಾಯಿತು. ಇದರಿಂದ ಸ್ವಲ್ಪ ಚೇತರಿಸಿಕೊಂಡ ಮನೆಗೆ ಬಂದ ರಾಜೇಶನಿಗೆ ಮತ್ತೆ ಎರಡನೆಯ ‘ಲವ್ ಈಸ್ ಪಾ’ಯಿಸನ್’ ಎಂಬ ಚಿತ್ರದಲ್ಲಿ ಹೀರೊ ಆಗಿ ಅವಕಾಶ ಸಿಕ್ಕಿತು. ಇನ್ನೇನು ಚಿತ್ರದ ಚಿತ್ರೀಕರಣ ಎಲ್ಲಾ ಪೂರ್ಣಗೊಂಡಿತ್ತು. ಆದರೆ ಇದೆ ಸಮಯದಲ್ಲಿ ಎಲ್ಲರೂ ಶಾಕ್ ಗೆ ಒಳಗಾಗುವ ಸುದ್ದಿಯೊಂದು ಬಂದಿತ್ತು. ಹೌದು, ಮೈಸೂರಿನ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದ ಆ ಮನೆಯ ಎರಡನೇ ಮಹಡಿಯಿಂದ ಹಾ’ರಿ ಪ್ರಾ’ಣ ಕಳೆದುಕೊಂಡ ಎಂಬ ಸುದ್ದಿ ಎಲ್ಲರನ್ನು ಧಿಗ್ಬ್ರಾಂತರನ್ನಾಗಿ ಮಾಡಿತ್ತು. ಇನ್ನು ಈ ಘಟನೆ ನಡೆದಿದ್ದು 2013 ನವೆಂಬರ್ ೪ರಂದು. ಇನ್ನು ಇದಕ್ಕೆ ಸರಿಯಾದ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ಒಟ್ಟಿನಲ್ಲಿ ತನ್ನ ಲೋಕದಲ್ಲಿ ಸ್ವತಂತ್ರ ಹಕ್ಕಿಯಂತೆ ವಿಹಾರ ಮಾಡಿಕೊಂಡು ಇದ್ದವನನ್ನ ನಗರಕ್ಕೆ ಕರೆತಂದು ಇಲ್ಲಿನ ಮಾಯಾಲೋಕಕ್ಕೆ ಸಿಲುಕುವಂತೆ ಮಾಡಿ ಅವನಲ್ಲಿ ಆಸೆಗಳನ್ನ ಚಿಗುರಿಸಿ ಅತ್ತ ತನ್ನ ಮೊದಲಿನ ಜೀವನಕ್ಕೂ ಹೋಗದಂತೆ ಹೊಸಜೀವನಕ್ಕೂ ಹೊಂದಿಕೊಳ್ಳಲಾರದಂತೆ ಮಾಡಿದ ವಿಧಿ ಕೇವಲ ೨೩ನೇ ವಯಸ್ಸಿಗೆ ರಾಜೇಶನನ್ನ ತನ್ನ ಬಳಿಗೆ ಕರೆಸಿಕೊಂಡಿತು. ಸ್ನೇಹಿತರೆ ಈಗ ರಾಜೇಶ ನಗರಕ್ಕೆ ಬಂದಿದ್ದೆ ಅವನ ಜೀವನಕ್ಕೆ ಮು’ಳುವಾಯಿತೇ? ನಿಮ್ಮ ಅಭಿಪ್ರಾಯ ಏನೆಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..