ಕನ್ನ್ನಡ ಚಿತ್ರರಂಗ ಎಂದೂ ಮರೆಯದ ನಟ ಚಿರಂಜೀವಿ ಸರ್ಜಾ. ಹೀಗೆ ಬಂದು ಆಗೇ ಹೋಗಿಬಿಟ್ಟರೇನೋ ಅನ್ನಿಸುತ್ತಿದೆ. ಚಿಕ್ಕವಯಸ್ಸಿಗೆ ಈ ಸಾವು ನ್ಯಾಯವೇ ಅಂತ ಅನ್ನಿಸುತ್ತಿದೆ ಚಿರು ಸರ್ಜಾ ಅವರ ಸಾವು. ಇನ್ನು ಪತ್ನಿ ಮೇಘನಾ ರಾಜ್ ಗರ್ಭಿಣಿ. ಇನ್ನೇನು ಕೆಲವೇ ದಿನಗಳಲ್ಲಿ ಭೂಮಿಗೆ ಬರಲಿರುವ ತನ್ನ ಕಂದನನ್ನ ನೋಡಬೇಕಿದ್ದ ಚಿರು ಈ ಭೂಮಿಯಿಂದಲೇ ಮತ್ತೆಂದೂ ಬಾರದ ಲೋಕಕ್ಕೆ ಹೋಗಿಬಿಟ್ಟರು. ಇನ್ನುಅಣ್ಣನನ್ನ ಅತಿ ಹೆಚ್ಚು ಪ್ರೀತಿಸುತ್ತಿದ್ದ ಸಹೋದರ ಧ್ರುವ ಸರ್ಜಾ ಅಣ್ಣನ ಜೊತೆಗಿದ್ದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ತನ್ನ ಮನದಾಳದಲ್ಲಿರುವ ನೋವನ್ನ ತೋಡಿಕೊಳ್ಳುತ್ತಿದ್ದಾರೆ. ಚಿರಂಜೀವಿ ಸರ್ಜಾ ನಿಧನರಾಗಿ ವಾರಗಳೇ ಕಳೆದರು ಅವರ ನೋವು ಕಡಿಮೆಯಾಗಿಲ್ಲ. ಅದು ಕಡಿಮೆಯಾಗುವಂತದ್ದು ಅಲ್ಲ.

ಇನ್ನು ಚಿರುವನ್ನ ಮಗನಂತೆ ಪ್ರೀತಿಸುತ್ತಿದ್ದ ಮಾವ ಅರ್ಜುನ್ ಸರ್ಜಾ ಅವರು ಚಿರು ಅವರ ೧೧ನೇ ದಿನದ ಪುಣ್ಯ ತಿಥಿ ಕಾರ್ಯದ ದಿನದಂದು ಭಾವನಾತ್ಮಕ ಪತ್ರ ಬರೆಯುವ ಮುಖಾಂತರ ಚಿರುಗೆ ನೀನು ಸದಾ ನಮ್ಮ ಜೊತೆಯೇ ಇರಬೇಕು ಎಂದು ಮನವಿಮಾಡಿಕೊಂಡಿದ್ದರು. ಇನ್ನು ಪತ್ನಿ ಮೇಘನಾ ರಾಜ್ ರವರ ಅಂತರಾಳದಲ್ಲಿರುವ ನೋವಿನ ಬಗ್ಗೆ ಹೇಳುವಷ್ಟು ನಾವು ಶಕ್ತರಲ್ಲ. ಆ ನೋವು ಅವರಿಗಷ್ಟೇ ಗೊತ್ತು. ಇನ್ನು ಹಲವು ಸೆಲೆಬ್ರೆಟಿಗಳು ಚಿರು ಅಗಲಿಕೆಯ ಕುರಿತು ಹಲವು ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಈಗ ಸಂಗೀತ ಬ್ರಹ್ಮ ಹಂಸಲೇಖ ಅವರು ತಮ್ಮದೇ ರೀತಿಯಲ್ಲಿ ಹಾಡಿನ ಮುಖಾಂತರ ಚಿರು ಸಾವಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇನ್ನು ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಂಚಿನಲ್ಲಿ ನೀರು ಬರದೇ ಇರಲ್ಲ..