Advertisements

ಕೇವಲ 10 ಗುಂಟೆಯಲ್ಲಿ 3 ಲಕ್ಷ ಸಂಪಾದನೆ ಮಾಡ್ತಿರುವ ರೈತ.. ಈತ ಬೆಳೆದ ಬೆಳೆ ಎಂಥದ್ದು ಗೊತ್ತಾ? ಇದಕ್ಕೆ ವಾರಕ್ಕೆ ಅರ್ಧ ಗಂಟೆ ನೀರು ಸಾಕು..

Kannada Mahiti

ಹಾವೇರಿ ಜಿಲ್ಲೆ ಬಸಾಪುರ ಎಂಬ ಗ್ರಾಮದಲ್ಲಿ ಯಲ್ಲಪ್ಪ ಎಂಬ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ 10 ಗುಂಟೆ ಜಾಗದಲ್ಲಿ ಮಗನ ಸಲಹೆಯಿಂದ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ.. ಅವರು ಕೃಷಿ ಅಧಿಕಾರಿಗಳಿಂದ ಇದರ ಬಗ್ಗೆ ಮಾಹಿತಿ ಪಡೆದುಕೊಂಡು ಕಾಗಾವಾಡದಲ್ಲಿ ಬೆಳೆದಂತಹ ಡ್ರ್ಯಾಗನ್ ಫ್ರೂಟ್ ಬೆಳೆಯನ್ನ ನೋಡಿ ಯಲ್ಲಪ್ಪ ಅವರಿಗೆ ಇದನ್ನು ನಾನು ಬೆಳೆಯಬೇಕೆಂದು ಆಸೆ ಪಡುತ್ತಾರೆ.. ಇನ್ನು ಅಲ್ಲಿಂದ ಸಸಿಗಳನ್ನು ತಂದು ಕೇವಲ 10 ಗುಂಟೆಯಲ್ಲಿ ಬೆಳೆಸಿದರು. ಸುಮಾರು 200 ಕಲ್ಲಿನ ಕಂಬಗಳನ್ನು ನಿಲ್ಲಿಸಿ ಒಂದು ಕಂಬಕ್ಕೆ ನಾಲ್ಕು ಸಸಿಗಳನ್ನು ಬೆಳೆಸುತ್ತಾರೆ.. ಮಣ್ಣನ್ನು ಕೆದರಿ ಸಗಣಿ ಗೊಬ್ಬರ ಹಾಕಿ ಸಸಿ ನೆಡಬೇಕು. ನಂತರ ಸಸಿ ಗಿಡವಾಗುತ್ತಿದ್ದಂತೆ ಹುರಿಯಿಂದ ಕಂಬಕ್ಕೆ ಕಟ್ಟಬೇಕಾಗುತ್ತದೆ.. ಮೇಲೆ ಒಂದು ಟೈಯರ್ ಆಕಿ ಕೊಡೆಯ ಆಕಾರಾದಲ್ಲಿ ಟೈಯರ್ ಮೇಲೆ ಗಿಡ ಹೂ ಬಿಡುತ್ತದೆ.

[widget id=”custom_html-3″]

Advertisements

ಈ ಡ್ರ್ಯಾಗನ್ ಫ್ರೂಟ್ ನಲ್ಲಿ ಎರಡು ರೀತಿ ಇರುತ್ತದೆ. ಒಂದು ರೆಡ್ ಅಂಡ್ ವೈಟ್.. ಈ ಬೆಳೆಗೆ ಹೆಚ್ಚಾಗಿ ನೀರು ಬೇಕಾಗಿಲ್ಲಾ. ವಾರಕ್ಕೆ ಅರ್ಧ ಗಂಟೆ ನೀರು ಸಾಕು.. ಅಲ್ಲದೇ ಈ ಬೆಳೆಗೆ ಸಾವಯವ ಗೊಬ್ಬರವನ್ನು ಹಾಕಿದ್ದಾರೆ.. ಅವರು 10 ಗುಂಟೆ ಜಾಗದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಿಂದ ಎರಡರಿಂದ ಮೂರು ಲಕ್ಷ ರೂಪಾಯಿ ಸಂಪದಾನೆ ಗಳಿಸುತ್ತಿದ್ದಾರೆ. ಮಾರ್ಕೇಟ್ ನಲ್ಲಿ ಒಂದು ಡ್ರ್ಯಾಗನ್ ಹಣ್ಣಿಗೆ 70 ರುಪಾಯಿ ಇದೆ.. ಯಲ್ಲಪ್ಪ ಅವರು ಮಾರ್ಕೇಟ್ ಗೆ ಹಣ್ಣುಗಳನ್ನು ತೆಗೆದುಕೊಂಡು ಹೋಗುವುದಿಲ್ಲ ಖರೀದಿಸುವವರು ಯಲ್ಲಪ್ಪ ಅವರ ಜಮೀನಿಗೆ ಬೇಟಿ ಮಾಡಿ ಹಣ ಕೊಟ್ಟು ಅಲ್ಲೇ ಹಣ್ಣನ್ನು ಖರೀದಿ ಮಾಡಿ ಹೋಗ್ತಾರೆ.

[widget id=”custom_html-3″]

ಡ್ರ್ಯಾಗನ್ ಹಣ್ಣನ್ನು ಕ’ಟ್ ಮಾಡಿದಾಗ.. ಆ ಗರಿಯಲ್ಲಿರುವ ಫಲವತ್ತಾದ ಸಸಿಗಳನ್ನು ಕ’ಟ್ ಮಾಡಿ ಒಂದು ಕೇಜಿ ಪಾಕೇಟ್ ನಲ್ಲಿ ತಿಪ್ಪೆ ಗೊಬ್ಬರ ಮತ್ತು ಅದಕ್ಕೆ ಮಣ್ಣನ್ನು ಹಾಕಿ ಸಸಿಯನ್ನು ಇಟ್ಟು ನೀರು ಹಾಕಿ ಹಾಗೆಯೇ ಇಡಬೇಕು.. ಒಂದು ತಿಂಗಳ ನಂತರ ಚಿಗುರು ಬರುತ್ತದೆ. ಅದನ್ನ ರೈತರು ಬೆಳೆಸಬಹುದಾಗಿದೆ. ಯಲ್ಲಪ್ಪ ಅವರು ಡ್ರ್ಯಾಗನ್ ಫ್ರೂಟ್ ಬೆಳೆಯಲು ಹೆಚ್ಚು ಬಂಡವಾಳ ಬೇಕು ಆದರೆ ನಂತರ ಒಳ್ಳೆಯ ಲಾಭ ಪಡಿಬೋದು ಎಂದು ಹೆಳಿದ್ದಾರೆ.. ಅಲ್ಲದೇ ಮೊದಲಿನಿಂದ ಬೆಳೆಯುತ್ತಿರುವ ಬೆಳೆಗಳನ್ನು ಬೆಳೆದು ಲಾಸ್ ಮಾಡಿಕೊಳ್ಳುವ ಬದಲು ಜಮೀನಿನಲ್ಲಿ ಹೊಸ ಬೆಳೆಗಳನ್ನು ಬೆಳೆಯುವ ಮೂಲಕ ಆದಾಯವನ್ನು ಗಳಿಸಬಹುದು ಅಂಥ ಯಲ್ಲಪ್ಪ ಅವರು ಹೇಳಿದ್ದಾರೆ..