ನಮಸ್ತೆ ಸ್ನೇಹಿತರೆ, ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತ ಅಂತ ಹೇಳ್ತಿದ್ದ ಹೆಣ್ಣು ಇಂದು ಎಲ್ಲಾ ಕ್ಷೇತ್ರಗಳ ಪುರುಷರಿಗೆ ಸರಿ ಸಮನಾಗಿ ನಿಲ್ಲುತ್ತಾರೆ.. ಅದು ಕೃಷಿ ಕ್ಷೇತ್ರದಲ್ಲಿ ಹೊರತಾಗಿಸಿಲ್ಲ. ನಾವು ಈ ಮಾಹಿತಿಯಲ್ಲಿ ನಿಮಗೆ ಹೇಳಲು ಹೊರಟಿರುವ ಸ್ಟೋರಿ ಕೃಷಿಕರಿಗೆ ಮಾದರಿಯಾಗಿ ನಿಲ್ಲುವ ಮಾದೇವಕ್ಕ ಸ್ಟೋರಿಯನ್ನ. ಹಾವೇರಿ ಜಿಲ್ಲೆಯ ಮಾದೇವಕ್ಕ ಅವರದ್ದು ಮಾದರಿಯ ಕೃಷಿ ಜೀವನ.. ಅತೀವೃಷ್ಟಿ ಅನಾವೃಷ್ಟಿಗೆ ಸಿಲುಕಿ ರೈತರು ಕೃಷಿಯಿಂದಲೇ ವಿಮುಕ್ತರಾಗುತ್ತಿರುವ ಸಂದರ್ಭದಲ್ಲಿ ಇಲ್ಲೊಬ್ಬ ಮಹಿಳೆ ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ.

ಇರುವ ಐದು ಎಕರೆ ಜಮೀನಿನಲ್ಲಿ ಬಂಗಾರದಂತಹ ಬೆಳೆ ತೆಗೆಯುತ್ತಾ ಪುರುಷರನ್ನೇ ನಾಚಿಸುವಂತೆ ಕೃಷಿಯಲ್ಲಿ ತೊಡಗಿರುವ ತಾಲೂಕಿನ ಕೆರವಡಿ ಗ್ರಾಮದ ಮಾದಕ್ಕ ಲಿಂಗದಳ್ಳಿ ಅವರದು ಹೋರಾಟದ ಬದುಕು.. ಮಾತು ಬಾರದ ಬಸಪ್ಪಲಿಂಗದ ಎಂಬ ಹಳ್ಳಿಯ ರೈತನ ಐದು ಜನ ಹೆಣ್ಣು ಮಕ್ಕಳಲ್ಲಿ ಒಬ್ಬಳಾಗಿರುವ ಮಾದೇವಕ್ಕ ಮನೆಯಲ್ಲಿ ಹಿರಿಯ ಮಗಳು.. ಯಾವುದೇ ಗಂಡು ಸಂತಾನವಿಲ್ಲದ ಕಾರಣ 12 ನೇ ವಯಸ್ಸಿಗೆ ಕುಟುಂಬದ ಜವಾಬ್ದಾರಿ ಹೊರುವ ಮೂಲಕ ತಂದೆಯ ಕಾರ್ಯಕ್ಕೆ ಹೆಗಲು ಕೊಟ್ಟರು.

ನಂತರ ಅಲ್ಲಿಂದ 36 ವರ್ಷಕ್ಕು ಹೆಚ್ಚು ಕಾಲ ಅವಿವಾಹಿತೆಯಾಗಿ ಕೃಷಿಯಲ್ಲಿ ತೊಡಗಿದ್ದಾರೆ.. ಗ್ರಾಮದಲ್ಲಿನ ರೈತರು ಮಳೆಯಿಲ್ಲ ಎಂಬ ಕಾರಣದಿಂದ ಕನಿಷ್ಠ ಬೆಳೆ ಬೆಳೆದ ಸಂದರ್ಬದಲ್ಲೂ ಮಾದೇವಕ್ಕ ತಮ್ಮ ಐದು ಎಕರೆ 20 ಗುಂಟೆ ಜಮೀನಿನಲ್ಲಿ ಗೋವಿನ ಜೋಳ, ಸಿರಿ ಧಾನ್ಯಗಳನ್ನ ಬೆಳೆದು ಎಲ್ಲರಿಗಿಂತ ಅಧಿಕ ಇಳುವರಿ ಪಡೆದು ಎಲ್ಲರನ್ನ ಹುಬ್ಬೆರಿಸುವಂತೆ ಮಾಡಿದ್ದಾರೆ.. 3 ಎಕರೆ ಭೂಮಿಗೆ ನೀರಾವರಿ ಸೌಲಭ್ಯವಿದೆ.

ಇನ್ನೂ ಎರಡು ಎಕರೆಯಲ್ಲಿ ಸಹೋದರಿಯರ ಜೊತೆ ಕೃಷಿ ಮಾಡುತ್ತಾರೆ. ವಾರ್ಷಿಕ ಮೂರು ಲಕ್ಷ ಆದಾಯ ಪಡೆಯುತ್ತಾರೆ.. ಇನ್ನೂ ಮೊದಲು ಎತ್ತುಗಳನ್ನು ಬಳಸಿ ಕೃಷಿ ಮಾಡುತ್ತಿದ್ದ ಮಾದೇವಕ್ಕ, 5 ವರ್ಷಗಳ ಹಿಂದೆ ಹೊಸ ಟ್ರ್ಯಾಕ್ಟರ್ ಖರೀದಿ ಮಾಡಿದ್ದಾರೆ. ಕೆಲ ತಿಂಗಳಲ್ಲೇ ಟ್ರ್ಯಾಕ್ಟರ್ ಚಾಲನೆ ಕಲಿತಿದ್ದಾರೆ.. ವ್ಯವಸಾಯದ ಜೊತೆಗೆ ತಂಗಿಯರ ಇಬ್ಬರು ಮಕ್ಕಳನ್ನ ತಾವೇ ಸಾಕುತ್ತಿದ್ದಾರೆ. ಕೃಷಿಯೇ ಜೀವನ ಎಂದುಕೊಂಡಿರುವ ಮಾದೇವಕ್ಕ ಅವರ ಈ ಜೀವನದ ಪಯಣದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.