ನಮಸ್ತೆ ಸ್ನೇಹಿತರೆ, ಈಗ ಎಲ್ಲಿ ನೋಡಿದರು ಕ’ರೋನ, ಕ’ರೋನ.. ಈ ಮಹಾಮಾ’ರಿಯಿಂದ ಬೇಸತ್ತಿರುವ ಜನರು ಈ ಕ’ರೋನವನ್ನು ಬಗ್ಗಿ ಬಡಿಯೋದು ಹೇಗೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ತಮ್ಮ ಜೀವದ ಜೊತೆಗೆ ಇತರರ ಜೀವದ ಜೊತೆಯೂ ಚೆಲ್ಲಾಟ ಆಡೋರಿಗೆ ಬುದ್ದಿ ಕಲಿಸಲು ಒಳ್ಳೆಯ ಐಡಿಯಾವನ್ನೇ ಮಾಡಿದ್ದಾರೆ.. ಈ ಐಡಿಯಾ ಏನು ಅಂತ ಕೇಳಿದ್ರೆ ನೀವು ಕೂಡ ಅರೇ ಈ ರೀತಿ ಮಾಡ್ಬೋದಾ ನಿಜಕ್ಕೂ ಜನ ಇದಕ್ಕಾದ್ರು ಬಗ್ತಾರಾ ಅಂತೀರ. ಈ ರೀತಿ ಐಡಿಯಾ ಮಾಡಿದ ಆ ಮಾಸ್ಟರ್ ಮೈಂಡ್ ಯಾರು ಗೊತ್ತಾ? ಈಗೆ ಅಂಗಡಿ ಮುಂದೆ ಕೂರೋ ಕಲ್ಲಿನ ಮೇಲೆ ಹಿಡಿ ಹಿಡಿ ಗಾತ್ರದಷ್ಟು ಸಗಣಿ ಇಟ್ಟಿರುವ ಮಾಲೀಕ ಬೇರೆ ಯಾರು ಅಲ್ಲಾ..

ಅವರು ಹಾವೇರಿ ತಾಲ್ಲೂಕಿನ ಬಸಾಪುರ ಗ್ರಾಮದ ಅಂಗಡಿ ಮಾಲೀಕ ರಾಜು.. ಊರಲೆಲ್ಲಾ ಕ’ರೋನ ಸೋಂ’ಕು ಹರಡುವಿಕೆ ತಡೆಯಲು ಈ ಅಂಗಡಿ ಮಾಲೀಕ ಮಾಡಿರೋ ಐಡಿಯಾದೇ ಸುದ್ದಿ. ಅಷ್ಟಕ್ಕೂ ಸ್ನೇಹಿತರೆ ಈ ಅಂಗಡಿ ಮಾಲೀಕ ರಾಜು ಅಂಗಡಿ ಮುಂದೆ ಈಗೆ ಹಿಡಿ ಹಿಡಿಯಷ್ಟು ಸಗಣಿ ಇಟ್ಟಿರೋದು ಯಾಕೆ ಗೊತ್ತಾ? ನಮ್ಮ ಜನಕ್ಕೆ ಎಷ್ಟು ಹೇಳಿದ್ರೂ ಕೇಳಲ್ಲ.. ಈಗಾಗಿ ಬಂದ ಗ್ರಾಹಕರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ, ಮಾಸ್ಕ್ ಅನ್ನು ಧರಿಸದೇ ಅಲ್ಲಲ್ಲಿ ಕುಳಿತು ಹರಟೆ ಹೊಡೆಯುತ್ತಾರೆ.

ಈಗಾಗಿ ಯಾರು ಒಟ್ಟೊಟ್ಟಿಗೆ ನಿಲ್ಲಬಾರ್ದು, ಕೂರಬಾರ್ದು ಅಂತ ಸಗಣಿ ಹಸ್ತ್ರವನ್ನು ಪ್ರಯೋಗಿಸಿದ್ದಾರೆ.. ಹೌದು ಈಗಾದ್ರೂ ಜನ ಸ್ವಲ್ಪ ಹೆಚ್ಚೆತ್ತುಕೊಂಡು ತಮ್ಮ ಅರೋಗ್ಯದ ಜೊತೆಗೆ ಸಮಾಜದಲ್ಲಿರುವವರ ಆರೋಗ್ಯದ ಬಗ್ಗೆ ಕೊಂಚ ಯೋಚಿಸಿ ಮನೆಯಲ್ಲಿಯೇ ಇದ್ದು ಈ ಮಹಾಮಾ’ರಿಯನ್ನ ಓಡಿಸಲು ತಮ್ಮಿಂದ ಆದ ಅಳಿಲು ಸೇವೆಯನ್ನ ಮಾಡಬೇಕಿದೆ.. ಅಗತ್ಯವಿದ್ದಷ್ಟೇ ಮನೆಯಿಂದ ಆಚೆ ಬನ್ನಿ, ಇಲ್ಲಾ ಮನೆಯಲ್ಲೇ ಇರಿ ಸೇಪ್ ಆಗಿ ಇತಿ.. ಸ್ನೇಹಿತರೆ ರಾಜು ಅವರ ಐಡಿಯಾ ಹೇಗಿದೆ..