Advertisements

ಹೆಚ್ ಡಿ ಕುಮಾರಸ್ವಾಮಿ ಅವರು ಎಷ್ಟು ಓದಿದ್ದಾರೆ ಗೊತ್ತಾ? ಅವರ ಮನೆ ಮೊದಲ ಬಾರಿಗೆ ನೋಡಿ..

Uncategorized

ನಮಸ್ತೆ ಸ್ನೇಹಿತರೆ, ರಾಜಕೀಯ ಅಂದರೆ ಸುಲಭವಾಗಿ ಮಾಡುವ ಕೆಲಸವಲ್ಲಾ.. ಅದರಲ್ಲಿ ಜಯ, ಪರಜಯ ಎರಡು ಇರುತ್ತದೆ. ಅದೆಲ್ಲವನ್ನ ಮೆಟ್ಟಿ ನಿಂತು ಸಾಗಬೇಕು.. ಸಾಕಿ ಜಯಿಸಬೇಕು. ಈಗೆ ತಮ್ಮ ಮುಂದೆ ಎಷ್ಟೇ ಸವಾಲುಗಳು ಬಂದರೂ ಅದೆಲ್ಲವನ್ನ ತಮ್ಮ ಚಾಣಾಕ್ಷತನದಿಂದ ಭೇದಿಸಿ ಎರಡು ಬಾರಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ಹೆಚ್.ಡಿ ಕುಮಾರಸ್ವಾಮಿ. ಈಗಿನ ರಾಜ್ಯದ ರಾಜಕೀಯದಲ್ಲಿರುವ ಚಾಣಾಕ್ಷ.. ಆಗಾದ್ರೆ ಅವರು ಎಷ್ಟು ಓದಿದ್ದಾರೆ. ಅವರ ಮನೆ ಹೇಗಿದೆ ನೋಡೊಣ.

Advertisements

ಡಿಸೆಂಬರ್ 16, 1959 ರಲ್ಲಿ ಹುಟ್ಟಿದ ಹೆಚ್.ಡಿ ಕುಮಾರಸ್ವಾಮಿ ಸರ್ಕಾರಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎಸ್.ಸಿ ಮಾಡಿದರು.. 1986 ರಲ್ಲಿ ಅನಿತಾ ಅವರನ್ನ ಮದುವೆಯಾದ ಕುಮಾರಸ್ವಾಮಿಯವರಿಗೆ ಪ್ರಾರಂಭದಲ್ಲಿ ರಾಜಕೀಯದ ಬಗ್ಗೆ ಅಷ್ಟೇನು ಆಸಕ್ತಿ ಇರಲಿಲ್ಲ. ನಂತರ ಕಾರಣಾಂತರಗಳಿಂದ ರಾಜಕೀಯಕ್ಕೆ ದುಮುಕಿದ ಹೆಚ್‌ಡಿ ಕುಮಾರಸ್ವಾಮಿ ತುಂಬಾ ಹೇಳು ಬೀಳುಗಳನ್ನ ಕಂಡರು.. ತಮ್ಮ ಅನುಭವದಿಂದ ರಾಜಕೀಯದಲ್ಲಿ ತಂತ್ರ, ಪ್ರತಿ ತಂತ್ರಗಳನ್ನ ಆಕಬಲ್ಲ ಚಾಣಾಕ್ಷ ತನವನ್ನ ಕರಗತ ಮಾಡಿಕೊಂಡಿದ್ದಾರೆ ಕುಮಾರಸ್ವಾಮಿ ಅವರು..

ಇದೇ ನೋಡಿ ಕುಮಾರಸ್ವಾಮಿ ಅವರ ಮನೆ. ಬೆಂಗಳೂರಿನ ಜೆಪಿ ನಗರದಲ್ಲಿ ತಮ್ಮ ಅಭಿರುಚಿಗೆ ತಕ್ಕಂತೆ ಸುಂದರ ಮನೆಯನ್ನ ಕಟ್ಟಿಕೊಂಡಿರುವ ಕುಮಾರಸ್ವಾಮಿ ಹಾಗು ಅನಿತಾ ಅವರು ಕಾಲ ಬದಲಾದಂತೆ ಅದಕ್ಕೆ ಅನುಗುಣವಾಗಿ ಮನೆಯನ್ನ ನವೀಕರಣ ಕೂಡ ಮಾಡಿಸಿದ್ದಾರೆ. ನಿಖಿಲ್ ಅವರ ಮದುವೆಯ ಸಂದರ್ಭದಲ್ಲಿ ಮನೆಯನ್ನ ದೀಪಗಳಿಂದ ಅಲಂಕರಿಸಿ ಮದುವೆ ಶಾಸ್ತ್ರಗಳನ್ನ ಮನೆಯಲ್ಲೇ ಬಂದು ಬಾಂದವರ ಜೊತೆ ಮಾಡಲಾಗಿತ್ತು.. ರಾಜಕೀಯ ರಣರಂಗದಲ್ಲಿ ತಮ್ಮ ಸೂಕ್ಷ್ಮ ಬುದ್ದಿ ಬೆಳೆಸಿ ಎಲ್ಲಾ ಸವಾಲುಗಳನ್ನು ಎದುರಿಸಿ ಮುನ್ನುಗ್ಗುತ್ತಿರುವ ಕುಮಾರಸ್ವಾಮಿ ಅವರ ಹೃದಯ ಕರ್ನಾಟಕದ ರಾಜ್ಯದ ಜನರ ಕಷ್ಟಗಳಿಗೆ ನೆರವಿಗೆ ಮಿಡಿಯುತ್ತಿರುತ್ತದೆ ಅನ್ನೊದು ಅಷ್ಟೇ ಸತ್ಯ.