Advertisements

ದಿನಾಲೂ ಬೆಳಿಗ್ಗೆ ಎದ್ದರೆ ಸಾಕು ಅದನ್ನ ನೋಡುವುದೇ ಆಗಿದೆ ಎಂದ HD ರೇವಣ್ಣ ?

News

ಪ್ರತೀ ದಿನ ಬೆಳೆಗ್ಗೆ ಎದ್ದಾಗ ದೇವರ ದರ್ಶನ ಮಾಡುವುದನ್ನ ಬಿಟ್ಟು ಬರೀ ಅದನ್ನೇ ದರ್ಶನ ಮಾಡುವುಂತಾಗಿದೆ ಎಂದು ಹೆಚ್. ಡಿ. ರೇವಣ್ಣ ಹೇಳಿದ್ದಾರೆ. ನೀವು ದಯವಿಟ್ಟು ಬರುತ್ತಿರುವ ಅದನ್ನ ನಿಲ್ಲಿಸಿ ಬಿಡಿ ಎಂದಿರುವ ರೇವಣ್ಣ ಮಾಧ್ಯಮಗಳ ವಿರುದ್ಧ ತಮ್ಮ ಬೇಸರವನ್ನ ಹೊರಹಾಕಿದ್ದಾರೆ. ಹೌದು, ಇತ್ತೀಚಿಗೆ ಮಾಧ್ಯಮಗಳಲ್ಲಿ ಡ್ರ’ಗ್ಸ್ ಪ್ರಕರಣಕ್ಕೆ ಸಂಬಂಧ ಪಟ್ಟ ಸುದ್ದಿಗಳು ಒಂದು ವಾರದಿಂದ ಪ್ರಸಾರವಾಗುತ್ತಿದೆ. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಆದರೆ ರಾಜ್ಯದಲ್ಲಿ ಬೇರೆ ಯಾವುದೇ ಸಮಸ್ಯೆಗಳು ಇಲ್ಲವೇ..

Advertisements

ಕೊ’ರೋನಾ ಸೋಂಕು ಸೇರಿದಂತೆ ಹಲವು ಸಮಸ್ಯೆಗಳಿಂದ ಜನ ಬಳಲುತ್ತಿದ್ದಾರೆ. ಅದರ ಬಗ್ಗೆ ತೋರಿಸಿ ಸರ್ಕಾರಕ್ಕೆ ಎಚ್ಚರಿಸುವುದು ಮಾಧ್ಯಮಗಳ ಕೆಲಸ. ಸರ್ಕಾರದ ಮೂರೂ ಅಂಗಗಳು ತಪ್ಪು ಮಾಡಿದಾಗ ಸರ್ಕಾರಕ್ಕೆ ಎಲೆಕ್ಟ್ರಾನಿಕ್ ಮಾಧ್ಯಮಗಳು ಎಚ್ಚರಿಸಬೇಕು ಎಂದು ರೇವಣ್ಣನವರು ಹೇಳಿದ್ದಾರೆ. ಇನ್ನು ಹಾಸನ ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳು ತಮ್ಮ ಅಧಿಕಾರವನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅಂತಹವರ ಬಗ್ಗೆ ಸರ್ಕಾರಕ್ಕೆ ಎಚ್ಚರಿಸಿ ಅಧಿಕಾರಿಗಳಿಗೆ ಬುದ್ದಿ ಕಲಿಸುವಂತ ಕೆಲಸ ಮಾಡಬೇಕು ಎಂದು ರೇವಣ್ಣ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಶಾಸಕ ಜಮೀರ್ ಅಹಮದ್ ಅವರು ಜೆಡಿಎಸ್ ಶಾಸಕರ ಜೊತೆ ಶ್ರೀಲಂಕಾಕ್ಕೆ ಹೋಗಿದ್ದರು ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ ರೇವಣ್ಣ ನನಗೆ ಶ್ರೀಲಂಕಾ ದೇಶದ ಕ್ಯಾಸಿನೋ ಬಗ್ಗೆ ಗೊತ್ತಿಲ್ಲ..ಬೆಂಗಳೂರು, ಹಾಸನ, ಹೊಳೆನರಸೀಪುರಗಳಲ್ಲಿ ಮೀಟಿಂಗ್ ಇದ್ದಾರೆ ಮಾತ್ರ ಹೋಗುತ್ತೇನೆ ಎಂದು ಅವರು ಹೇಳಿದ್ದಾರೆ.