Advertisements

ಈ 6 ಅಭ್ಯಾಸಗಳು ನಿಮಗೆ ಇದ್ದಲ್ಲಿ ನಿಮ್ಮ ಮೆದುಳಿಗೆ ಹಾನಿಯುಂಟು ಮಾಡುವುದು ಖಂಡಿತಾ !

Health

ನಮಸ್ತೇ ಸ್ನೇಹಿತರೇ, ಮನುಷ್ಯನ ಪ್ರಮುಖವಾದ ಅಂಗಗಳಲ್ಲಿ ಮೆದುಳು ಒಂದು. ಮಾನವನ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳು ನಡೆಯಲು ಕಾರಣ ಇದೆ ಅಂಗ. ಒಂದು ವೇಳೆ ಮೆದುಳಿನ ಆರೋಗ್ಯದಲ್ಲಿ ಏರುಪೇರು ಉಂಟಾದಲ್ಲಿ ಹಲವಾರು ಬಗೆಯ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಮಾನಸಿಕ ಸ್ವಸ್ತತೆ ಹದಗೆಡುವುದು ಖಂಡಿತಾ..ನಮ್ಮ ಮೆದುಳು ಚುರುಕಾಗಿ ಕೆಲಸ ಮಾಡಿದ್ರೆ ಮಾತ್ರ ನಮ್ಮ ನೆನಪಿನ ಶಕ್ತಿ ಆಗಲಿ ಬುದ್ದಿ ಶಕ್ತಿ ಆಗಲಿ ಹೆಚ್ಚಾಗುತ್ತದೆ. ನಾವು ಇದಕ್ಕಾಗಿ ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಿರುತ್ತೇವೆ. ಆದರೆ ನಮ್ಮ ಜೀವನಶೈಲಿ ಹಾಗೂ ನಾವು ಅನುಸರಿಸುವ ಕೆಲವೊಂದು ಅಭ್ಯಾಸಗಳು ಮೆದುಳಿನ ಆರೋಗ್ಯಕ್ಕೆ ಮಾ’ರಕ ಎಂದು ಹೇಳಲಾಗಿದೆ. ಹಾಗಾದ್ರೆ ಯಾವೆಲ್ಲಾ ನಮ್ಮ ಅಭ್ಯಾಸಗಳು ನಮ್ಮ ಮೆದುಳಿನ ಅನಾರೋಗ್ಯಕ್ಕೆ ಕಾರಣವಾಗುತ್ತವೆ ಎಂಬುದನ್ನ ತಿಳಿಯೋಣ..

*ಪ್ರತೀ ದಿನ ನಮ್ಮ ದಿನ ಪ್ರಾರಂಭವಾಗುವುದೇ ಬೆಳಗಿನ ತಿಂಡಿ ಆದ ಬಳಿಕ. ನಾವು ನಿದ್ದೆ ಮಾಡುವಾಗ ವಿಶ್ರಾಂತಿ ಪಡೆದುಕೊಳ್ಳುವ ಮೆದುಳು ಬೆಳಿಗ್ಗೆ ಎಡ್ಡಾ ಬಳಿಕ ಕ್ರಿಯಾಶೀಲವಾಗುತ್ತದೆ. ಈ ಸಮಯದಲ್ಲಿ ಏನನ್ನಾದರೂ ತಿನ್ನಲೇಬೇಕು. ಇದು ಮೆದುಳಿನ ಆರೋಗ್ಯ ದೃಷ್ಟಿಯಿಂದ ಉತ್ತಮವಾಗಿದೆ. ನೀರು,ಹಣ್ಣಿನ ರಸ ಏನನ್ನಾದರೂ ದೇಹಕ್ಕೆ ಸೇವಿಸಿ ಬಳಿಕ ಬೆಳಗಿನ ತಿಂಡಿ ಮಾಡಿ. ಒಂದು ವೇಳೆ ತಿಂಡಿ ತಿನ್ನದೆ ಇದ್ದರೆ ಮೆದುಳು ಸರಿಯಾಗಿ ತನ್ನ ಕಾರ್ಯನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ.

Advertisements

*ಮನುಷ್ಯ ಎಷ್ಟೇ ಕೆಲಸ ಮಾಡಲಿ ಅವನ ವಯಸ್ಸಿಗೆ ತಕ್ಕಂತೆ ನಿದ್ದೆ ಮಾಡಿ ವಿಶ್ರಾಂತಿ ಪಡೆಯುವುದು ಅತ್ಯಾವಶ್ಯಕವಾಗಿದೆ. ಆದರೆ ಇಂದಿನ ಫಾಸ್ಟ್ ಜೀವನಶೈಲಿಯಲ್ಲಿ ಬಹುತೇಕರು ಸರಿಯಾದ ನಿದ್ದೆ ಮಾಡುವುದಿಲ್ಲ. ಮಕ್ಕಳು ೮ ರಿಂದ ಹತ್ತು ಗಂಟೆಗಳ ಕಾಲ ನಿದ್ರೆಮಾಡಬೇಕು. ವಯಸ್ಕರಾದವರು ಆರರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದು ಒಳ್ಳೆಯದು. ಆದರೆ ಈಗಿನ ಜೀವನ ಶೈಲಿಯಲ್ಲಿ ಇದ್ಯಾವುದು ಸರಿಯಾಗಿ ಆಗುತ್ತಿಲ್ಲ. ಹೆಚ್ಚಾಗಿ ಟಿವಿ, ಫೋನ್ ಹುಚ್ಚಿರುವವರು, ಸೋಷಿಯಲ್ ಮಿಡಿಯಾಗಳಲ್ಲೇ ಸದಾ ಕಾಲ ಕಳೆಯುವವರು ಸರಿಯಾಗಿ ನಿದ್ದೆ ಮಾಡುವುದಿಲ್ಲ. ಕೆಲಸದ ಒತ್ತಡವೋ, ನೈಟ್ ಲೈಫಿನ ಮೋಜು ಮಸ್ತಿಗಳ ಕಾರಣದಿಂದಲೂ ಮನುಷ್ಯ ಸರಿಯಾದ ನಿದ್ರೆ ಮಾಡುತ್ತಿಲ್ಲ. ಇದೆಲ್ಲಾ ಮೆದುಳಿಗೆ ಹಾ’ನಿ’ಕಾರಕವಾಗಿದೆ. ಇನ್ನು ಅಗತ್ಯಕ್ಕಿಂತ ಹೆಚ್ಚು ನಿದ್ದೆ ಮಾಡುವುದು ಕೂಡ ಒಳ್ಳೆಯದಲ್ಲ. ಇದರಿಂದ ಮಾನಸಿಕವಾಗಿ ದೈಹಿಕವಾಗಿ ಹಲವಾರು ಕಾ’ಯಿಲೆಗಳಿಗೆ ಗುರಿಯಾಗಬೇಕಾಗುತ್ತದೆ.

*ಅತಿಯಾದ ಸಿಹಿ ಸೇವಿಸುವುದು ಕೂಡ ಮೆದುಳನ್ನ ಅನಾರೋಗ್ಯಕ್ಕೆ ದೂಡಬಲ್ಲದು. ಹಾಗಾಗಿ ಸಕ್ಕರೆ ಅಥ್ವಾ ಸಿಹಿ ಪದಾರ್ಥಗಳನ್ನ ಸೇವಿಸುವುದು ಕಡಿಮೆ ಮಾಡಿದ್ರೆ ಒಳ್ಳೆಯದು. ಸಮಯಕ್ಕೆ ತಕ್ಕಂತೆ ನಮ್ಮ ದೇಹಕ್ಕೆ ಕೆಲಸ ಕೊಡಬೇಕಾಗಿದೆ. ದೇಹ ಸೃಷ್ಟಿಯಾಗಿರುವುದೇ ಬೆಳಗಿನ ಸಮಯ ಕೆಲಸ ಮಾಡಲು ರಾತ್ರಿ ಸಮಯ ವಿಶ್ರಾಂತಿ ಪಡೆಯುವ ಸಲುವಾಗಿ. ಆದರೆ ಇದಕ್ಕೆ ವಿರುದ್ಧವಾಗಿ ಬೆಳಗಿನ ಸಮಯ ಹೆಚ್ಚು ನಿದ್ರೆ ಮಾಡುವುದು ರಾತ್ರಿ ಸಮಯ ನಿದ್ದೆ ಕೆಡುವುದನ್ನ ರೂಢಿಸಿಕೊಂಡರೆ ನಿಮ್ಮ ಮೆದುಳಿನ ಅ’ಪಾ’ಯ ಕಟ್ಟಿಟ್ಟ ಬುಕ್ತಿ.

*ಊಟವನ್ನ ಸರಿಯಾದ ಪದ್ದತಿಯಲ್ಲಿ ಮಾಡಿದ್ರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರಲು ಸಾಧ್ಯ. ಮೊಬೈಲ್ ನೋಡಿಕೊಂಡೋ, ಟಿವಿ ನೋಡಿಕೊಂಡೋ, ಬೇರೆಯವರ ಜೊತೆ ಮಾತನಾಡಿಕೊಂಡೋ ಊಟ ಮಾಡುವುದು ಮೆದುಳಿನ ಆರೋಗ್ಯಕ್ಕೆ ಅ’ಪಾ’ಯಕಾರಿಯಾಗಿದೆ. ಹಾಗಾಗಿ ಊಟ ಮಾಡುವಾಗ ಗಮನ ಊಟದ ಕಡೆಗೆ ಇರಲಿ. ನಾವು ಗಾಳಿಯ ಮೂಲಕ ಸೇವಿಸುವ ಆಮ್ಲಜನಕ ಮೆದುಳಿನವರೆಗೂ ತಲುಪುತ್ತದೆ. ಇನ್ನು ನಾವು ಮಲಗಿದ್ದಾಗ ಹೆಚ್ಚು ಗಾಳಿಯನ್ನ ಸೇವಿಸಬೇಕು. ನೀಮ್ಮ ಮುಖಕ್ಕೆ ಹೊದಿಕೆಯನ್ನ ಮುಚ್ಚಿಕೊಂಡು ಮಲಗುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ನೀವು ಮಲಗುವ ಕೋಣೆ ಸ್ವಚ್ಛವಾಗಿರಬೇಕು ಜೊತೆಗೆ ಶುದ್ಧವಾದ ಗಾಳಿ ಬರುವಂತಿರಬೇಕು. ಏಕೆಂದರೆ ಮೆದುಳಿನ ಆರೋಗ್ಯದ ದೃಷ್ಟಿಯಿಂದ ನೀವು ಮಲಗಿದ್ದಾಗ ಶುದ್ಧ ಗಾಳಿ ಸೇವನೆ ಮಾಡುವುದು ನಿಮ್ಮ ಮೆದುಳಿನ ಆರೋಗ್ಯಕ್ಕೆ ಉತ್ತಮವಾಗಿದೆ.