Advertisements

ಎದೆ ತುಂಬಿ ಹಾಡುವೇನು ವಿನ್ನರ್, ರನ್ನರ್ ಗೆ ಸಿಕ್ಕ ಹಣವೆಷ್ಟು ಗೊತ್ತಾ? ನಿಮ್ಮ ಪ್ರಕಾರ ವಿನ್ನರ್ ಯಾರು ಆಗಬೇಕಿತ್ತು..

Entertainment

ಎಸ್ ಪಿ ಬಾಲಸುಬ್ರಮಣ್ಯ ಅವರ ನೆನಪಿಗಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಈ ಬಾರಿ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಹೌದು ಎಸ್ ಪಿ ಬಿ ಅವರು ಇಲ್ಲವಾಗಿ ಎರಡು ವರ್ಷಗಳು ಕಳೆಯುತ್ತಾ ಬಂದರೂ ಕೂಡ ಅವರ ನೆನಪಿನಲ್ಲಿ ಅವರು ಹಾಡುತ್ತಿದ್ದ ಮೈಕ್ ನ್ನು ಜೊತೆಯಲ್ಲಿಟ್ಟು ಅವರ ಪ್ರತಿಮೆಯ ಮುಂದೆ ಒಂದಷ್ಟು ಜನ ಸ್ಪರ್ಧಿಗಳನ್ನು ಕರೆತಂದು ಹಾಡುವ ಪ್ರಯತ್ನಕ್ಕೆ ಕಲರ್ಸ್ ಕನ್ನಡ ಕೈಹಾಕಿದ್ದು, ಈ ಒಂದು ಪ್ರಯತ್ನದಲ್ಲಿ ಕಲರ್ಸ್ ಕನ್ನಡ ವಾಹಿನಿ ಗೆದ್ದಿದೆ ಅಂತಾನೆ ಹೇಳಬಹುದು, ಹಾಗಾದರೆ ನೆನ್ನೆ ನಡೆದ ಫೈನಲ್ ಕಾರ್ಯಕ್ರಮದಲ್ಲಿ ಎದೆ ತುಂಬಿ ಹಾಡುವೆನು 2021ರ
ಟ್ರೋಫಿ ಯಾರ ಮುಡಿಗೆ ಏರಿದೆ ಯಾರೆಲ್ಲಾ ಫೈನಲ್ ಲಿಸ್ಟ್ ಗಳು ಇದ್ದರು ಯಾರಿಗೆ ಎಷ್ಟೆಲ್ಲಾ ಬಹುಮಾನ ಬಂದಿದೆ ನೋಡಿ.
ಹೌದು ಕಳೆದ ಎರಡು ವಾರಗಳಿಂದ ಎದೆ ತುಂಬಿ ಹಾಡುವೆನು 2022ರ ಗ್ರಾಂಡ್ ಫಿನಾಲೆ ನಡೆಯುತ್ತಲೇ ಇತ್ತು. ಈ ಗ್ರಾಂಡ್ ಫಿನಾಲೆಯಲ್ಲಿ ಆರು ಜನ ಘಟಾನುಗಟಿ ಸ್ಪರ್ಧಿಗಳು ಫೈನಲ್ ರೌಂಡ್ ಗೆ ತಲುಪಿದ್ದರು.

[widget id=”custom_html-3″]

Advertisements

ಅದರಲ್ಲಿ ನಾದಿರ ಬಾನು, ಸೂರ್ಯಕಾಂತ್, ಕಿರಣ್ ರಮೇಶ್, ಚಿನ್ಮಯ್ ಜೋಷಿ, ಸಂದೇಶ್ ರಶ್ಮಿ ಧರ್ಮೇಂದ್ರ ಅವರು ಆರು ಜನ ಫೈನಲ್ ಲಿಸ್ಟ್ ಆಗಿ ಫಿನಾಲೆ ಕಾರ್ಯಕ್ರಮದಲ್ಲಿ ತುಂಬಾನೇ ಟಪ್ ಇರುವಂತಹ ಹಾಡುಗಳನ್ನು ಹಾಡಿದರು ಇನ್ನು ಕೊನೆಯಲ್ಲಿ ಉಳಿದ ನಾಲ್ಕು ಜನ ಫಿನಾಲೆ ತಲುಪಿದರು ಹೌದು ಈ ಗ್ರಾಂಡ್ ಫಿನಾಲೆಯಲ್ಲಿ ಸೂರ್ಯಕಾಂತ್ ಮತ್ತು ರಶ್ಮಿ ಧರ್ಮೇಂದ್ರ ಹೊರನಡೆದರು. ನಂತರ ನಾದಿರ ಬಾನು, ಕಿರಣ್ ರಮೇಶ್, ಚಿನ್ಮಯ್ ಜೋಶಿ ಮತ್ತು ಸಂದೇಶ್ ನಡುವೆ ಹಣಾಹಣಿ ನಡೆಯಿತು. ಈ ಒಂದು ಫೈನಲ್ ರೌಂಡ್ ನಲ್ಲಿ ನಾದಿರ ಬಾನು ಅವರು ನಾಲ್ಕನೇ ಸ್ಥಾನ ಪಡೆಯುವುದರ ಜೊತೆಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆದು ಗ್ರಾಂಡ್ ಫಿನಾಲೆ ಇಂದ ಹೊರನಡೆದರು. ಇನ್ನುಳಿದಂತೆ ತುಂಬಾನೇ ಕಾಂಪ್ಲಿಕೇಟೆಡ್ ಹಾಡನ್ನು ಹಾಡಿದ ಕಿರಣ್ ರಮೇಶ್ ಅವರಿಗೆ ಸೆಕೆಂಡ್ ರನ್ನರ್ ಆಪ್ ಪಟ್ಟವನ್ನು ಕೊಡಲಾಯಿತು.

[widget id=”custom_html-3″]

ಇದರ ಜೊತೆಗೆ ಮೂರು ಲಕ್ಷ ನಗದು ಬಹುಮಾನವನ್ನು ಕಿರಣ್ ರಮೇಶ್ ಅವರು ಪಡೆದುಕೊಂಡರು. ಇನ್ನುಳಿದ ಇಬ್ಬರಲ್ಲಿ ಸಂದೇಶ್ ಹಾಗೂ ಚಿನ್ಮಯ್ ಜೋಷಿ ನಡುವೆ ಸಿಕ್ಕಾಪಟ್ಟೆ ಕ್ರೇಜ್ ಅನ್ನು ಸೃಷ್ಟಿ ಮಾಡಿತ್ತು ಅಂತಾನೆ ಹೇಳಬಹುದು ಯಾಕ್ ಅಂತಂದ್ರೆ ಎಲ್ಲರೂ ಕೂಡ ಸಂದೇಶ್ ಅವರೇ ಈ ಬಾರಿಯ ಟ್ರೋಫಿಯನ್ನು ಮುಡಿಗೇರಿಸಿ ಕೊಳ್ಳುತ್ತಾರೆ ಎಂದು ಎಲ್ಲರೂ ನಿರೀಕ್ಷೆಯಲ್ಲಿದ್ದರು. ಆದರೆ ಈ ಎಲ್ಲರ ನಿರೀಕ್ಷೆಯನ್ನು ಸುಳ್ಳು ಮಾಡಿತು ನಿಜಕ್ಕೂ ಎದೆತುಂಬಿ ಹಾಡುವೆನು 2021 ರ ಗ್ರಾಂಡ್ ಫಿನಾಲೆ ಅಂತ ಹೇಳಿದರೆ ತಪ್ಪಾಗಲಿಕ್ಕಿಲ್ಲ. ಹೌದು ಕೊನೆಯದಾಗಿ ಚಿನ್ಮಯ್ ಜೋಷಿಯವರು ಎದೆ ತುಂಬಿ ಹಾಡುವೆನು 2021ರ ಟೋಪಿಯನ್ನು ತನ್ನ ಮುಡಿಗೇರಿಸಿ ಕೊಂಡರು. ಸಂದೇಶ್ ಅವರು ರನ್ನರ್ ಆಫ್ ಆದರೂ ರನ್ನರ್ ಆಪ್ ಆದ ಸಂದೇಶ್ ಅವರಿಗೆ ಐದು ಲಕ್ಷ ನಗದು ಬಹುಮಾನ ಕೊಡಲಾಯಿತು ಜೊತೆಗೆ 2021 ಎದೆ ತುಂಬಿ ಹಾಡುವೆನು ರನ್ನರ್ ಆಪ್ ಟ್ರೋಪಿ ಕೂಡ ಪಡೆದುಕೊಂಡರು. ಇನ್ನೂ ಚಿನ್ಮಯ್ ಜೋಷಿ ಅವರಿಗೆ ವಿನ್ನರ್ ಟ್ರೋಫಿಯ ಜೊತೆಗೆ 10 ಲಕ್ಷ ನಗದು ಬಹುಮಾನ ಕೂಡ ಸಿಕ್ಕಿದೆ..

[widget id=”custom_html-3″]