Advertisements

ಜಿಲ್ಲಾ ಮ್ಯಾಜಿಸ್ಟ್ರೇಟ್ ಅಧಿಕಾರಿಯಾದ 14 ವರ್ಷದ ಪೀವನ್ ಮಗಳು !

Inspire

ಸ್ನೇಹಿತರೆ, 2001ನೇ ವರ್ಷದಲ್ಲಿ ಬಾಲಿವುಡ್ ನಲ್ಲಿ ನಾಯಕ್ ಎಂಬ ಚಿತ್ರವೊಂದು ಬಂದಿತ್ತು. ಅದರಲ್ಲಿ ಪತ್ರಕರ್ತನೊಬ್ಬನಿಗೆ ಒಂದು ದಿನದ ಸಿಎಂ ಆಗಿ ಅಧಿಕಾರ ನಡೆಸುವ ಅವಕಾಶ ನೀಡಾಲಾಗುತ್ತೆ. ಆದರೆ ಅದ ರೀಲ್ ಜೀವನದ ದೃಶ್ಯವಾಗಿತ್ತು. ಆದರೆ ಈಗ ಕಾಂಗ್ರಾದಲ್ಲಿ ಅದೇ ರೀತಿಯ ದೃಶ್ಯವೊಂದು ನಿಜ ಜೀವನದಲ್ಲಿ ನಡೆದಿದೆ.

Advertisements

ಹೌದು, ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಈ ಘಟನೆ ನಡೆದಿದೆ. ಸಬ್ ಡಿವಿಸನಲ್ ಮ್ಯಾಜಿಸ್ಟ್ರೇಟ್ (SDM) ಆಗಿರುವ ಜತಿನ್ ಲಾಲ್ ಅವರು ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಪೀವನ್ ಅವರ ಮಗಳನ್ನ ಒಂದು ದಿನದ ಸಬ್ ಡಿವಿಸನಲ್ ಮ್ಯಾಜಿಸ್ಟ್ರೇಟ್ ಆಗಿ ಅವರ ಸೀಟಿನಲ್ಲಿ ಕುಳ್ಳರಿಸಿದ್ದಾರೆ. ಹೌದು, ಸ್ನೇಹಿತರೆ ಪೀವನ್ ಅವರ ಮಗಳಾದ 14 ವರ್ಷದ ಬಾಲಕಿ ಹೀನಾ ಠಾಕೂರ್ 10ನೇ ತರಗತಿಯ ಪರೀಕ್ಷೆಯಲ್ಲಿ 94 ಪರ್ಸೆಂಟ್ ಅಂಕಗಳನ್ನ ಗಳಿಸಿದ್ದು, ಮೆರಿಟ್ ನಲ್ಲಿ 34ನೇ ಸ್ಥಾನ ಗಳಿಸಿದ್ದಾರೆ.

ಇನ್ನು ಬೆಳಿಗ್ಗೆ 11 ಗಂಟೆಯಿಂದ ಕಾಂಗ್ರಾದ ಸಬ್ ಡಿವಿಸನಲ್ ಮ್ಯಾಜಿಸ್ಟ್ರೇಟ್ ಕುರ್ಚಿಯಲ್ಲಿ ಕುಳಿತಿರುವ ಬಾಲಕಿ ಹೀನಾ ಠಾಕೂರ್ ದಿನದ ಕೆಲಸಗಳನ್ನ SDM ಆಗಿ ಮಾಡುತ್ತಿದ್ದಾರೆ. ಇನ್ನು SDM ಜತಿನ್ ಲಾಲ್ ಕೂಡ ಬಾಲಕಿಯ ಜೊತೆಗೆ ಇದ್ದಾರೆ. ಜತಿನ್ ಲಾಲ್ ಅವರ ಮಾರ್ಗದರ್ಶನದಲ್ಲಿ ಹೀನಾ ಠಾಕೂರ್ ಈದಿನದ ಸಭೆಗಳನ್ನ ಕೂಡ ನಡೆಸುತ್ತಿದ್ದಾರೆ.ಜೊತೆಗೆ SDM ಕಚೇರಿಗೆ ಬರುತ್ತಿರುವ ಸಾರ್ವಜನಿಕರ ಸಮಸ್ಯೆಗಳನ್ನ ಜತಿನ್ ಲಾಲ್ ಅವರ ಮಾರ್ಗದರ್ಶನದಲ್ಲಿ ಪರಿಹರಿಸುತ್ತಿದ್ದಾರೆ.

ಇನ್ನು ಇದರ ಬಗ್ಗ್ಗೆ ಮಾತನಾಡಿರುವ ಬಾಲಕಿ ಹೀನಾ ಇದು ನನಗೆ ಕನಸಿನಂತೆ ಭಾಸವಾಗುತ್ತಿದೆ ಎಂದು ಹೇಳಿದ್ದು, ನನಗೆ ತುಂಬಾ ಸಂತೋಷವಾಗಿಡ ಈ ಎಂದು ಹೇಳಿದ್ದಾರೆ.SDM ಜತಿನ್ ಲಾಲ್ ಸರ್ ಅವರು ನನಗೆ ಕನಸನ್ನ ತೋರಿಸಿದ್ದಾರೆ. ಅದನ್ನ ನಾನು ಮಾಡಿ ತೋರಿಸುತ್ತೇನೆ ಎಂದಿರುವ ಹೀನಾ, ನನಗೆ ಬಾಲ್ಯದಿಂದಲೂ IAS ಅಧಿಕಾರಿಯಾಗಬೇಕೆಂಬ ಆಸೆ ಇದೆ ಎಂದು ಹೇಳಿದ್ದಾರೆ.ಮೂಲತಃ ಶಿಮ್ಲಾ ಜಿಲ್ಲೆಯವರಾದ ಹೀನಾ ಗುರುದತ್ ಆಂಗ್ಲೋ ವೇದಿಕ್ ಶಾಲೆಯಲ್ಲಿ ಓಡಿದ್ದಾಳೆ.ಇನ್ನು ಇದೆ ಆಫಿಸ್ ನಲ್ಲಿ ಪೀವನ್ ಕೆಲಸ ಮಾಡುತ್ತಿರುವ ಇವರ ತಂದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.

ಇನ್ನು ಇದಾರ ಬಗ್ಗೆ ಮಾತನಾಡಿರುವ SDM ಜತಿನ್ ಲಾಲ್ ರವರು, ನನ್ನ ಮಗಳು 10ನೇ ತರಗತಿಯಲ್ಲಿ ಶೇಕಡಾ 94ರಷ್ಟು ಅಂಕಗಳನ್ನ ಪಡೆದಿದ್ದಾರೆ ಎಂದು ನಮ್ಮ ಕಚೇರಿಯ ಪೀವನ್ ಹೇಳಿದ್ರು.ಆಗ ಆಕೆಯ ಮುಂದಿನ ವೃತ್ತಿ ಜೀವನದ ಬಗ್ಗೆ ಮಾರ್ಗದರ್ಶನ ನೀಡಿ ಆಕೆಯನ್ನ ಗೌರವಿಸಬೇಕು ಎಂದುಕೊಂಡು,ಹೀನಾಳನ್ನ ಕಚೇರಿಗೆ ಕರೆದಾಗ ಆಕೆ ನಾನು IAS ಅಧಿಕಾರ ಆಗಬೇಕೆಂದುಕೊಂಡಿದ್ದೇನೆ ಅಂತ ಹೇಳಿದಳು. ಆಗ ಬಾಲಕಿ ಹೀನಾ ಠಾಕೂರ್ ಅವರನ್ನ ಒಂದು ದಿನದ SDM ಮಾಡಬೇಕೆಂದು ನನ್ನ ಮನಸ್ಸಿಗೆ ಬಂತು ಎಂದು ಹೇಳಿದ್ದಾರೆ.ಹೆಣ್ಣುಮಕ್ಕಳು ಗಂಡುಮಕ್ಕಳಿಗಿಂತ ಏನೂ ಕಡಿಮೆ ಇಲ್ಲ. ನಾವು ಅವರಿಗೆ ಪ್ರೋತ್ಸಾಹ ನೀಡಬೇಕು. ಇನ್ನು ಹೀನಾಳನ್ನ ಒಂದು ದಿನದ SDM ಆಗಿ ಮಾಡುವುದರಿಂದ ಬೇರೆಯವರಿಗೂ ಕೂಡ ಇದರಿಂದ ಸ್ಫೂರ್ತಿ ಸಿಗಲಿದೆ ಎಂದು ಜತಿನ್ ಲಾಲ್ ಹೇಳಿದ್ದಾರೆ.

ಇನ್ನು SDM ಜತಿನ್ ಲಾಲ್ ರವರ ಈ ಕೆಲಸಾಕ್ಕೆ ಹೀನಾ ಅವರ ತಂದೆ ತುಂಬಾ ಖುಷಿಯಾಗಿದ್ದು, ಇದರಿಂದ ಬೇರೆಯವರ ಮಕ್ಕಳಿಗೂ ಸ್ಫೂರ್ತಿ ಸಿಗಲಿದೆ ಎಂದು ಹೇಳಿದ್ದಾರೆ.ಇನ್ನು SDM ಕಚೇರಿಯಲ್ಲಿ ಕೆಲಸ ಮಾಡಲು ಶುರು ಮಾಡಿದಾಗಿನಿಂದ ನನ್ನ ಮಗಳಿಗೆ ಉತ್ತಮ ಶಿಕ್ಷಣವನ್ನ ಕೊಡಿಸಿ, ಒಳ್ಳೆಯ ಕೆಲಸ ಸಿಗುವಂತೆ ಮಾಡುವುದು ನನ್ನ ಗುರಿ ಎಂದು ಹೀನಾ ತಂದೆ ಹೇಳಿದ್ದಾರೆ.