Advertisements

ನಾವಂದುಕೊಂಡಂತೆ ಇಲ್ಲ ಹಿರಿಯ ನಟಿ ಹೇಮಾ ಚೌಧರಿಯವರ ವೈಯುಕ್ತಿಕ ಜೀವನ ! ನೋವಿನ ನಡುವೆಯೇ ಜೀವನ ಸಾಗಿಸುತ್ತಿದ್ದಾರೆ ಒಂದು ಕಾಲದ ಟಾಪ್ ನಟಿ ?

Cinema

ನಮಸ್ತೇ ಸ್ನೇಹಿತರೇ, ಒಂದು ಕಾಲದ ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಹೇಮಾ ಚೌಧರಿ ಕೂಡ ಒಬ್ಬರು. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ನಟಿಸುವ ಮೂಲಕ ಬಹುಭಾಷೆ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ತೆಲುಗು ಚಿತ್ರವೊಂದರಲ್ಲಿ ಲೀಡಿಂಗ್ ರೋಲ್ ನಲ್ಲಿ ನಟಿಸುವ ಮೂಲಕ ೧೯೭೬ ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಹೆಚ್ಚಾಗಿ ಖಳ ನಾಯಕಿ ಪಾತ್ರಗಳಿಂದಲೇ ಕನ್ನಡ ಚಿತ್ರಗಳಲ್ಲಿ ಮಿಂಚಿರುವ ಇವರು ಗಾಳಿ ಮಾತು, ದೇವರ ದುಡ್ಡು, ನೀ ಬರೆದ ಕಾದಂಬರಿ, ನಾರದ ವಿಜಯ, ಗರುಡ ರೇಖೆ ಸೇರಿದಂತೆ ೧೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ದ್ದಾರೆ. ಆದರೆ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಹೇಮಾ ಚೌಧರಿಯವರು ವೈಯುಕ್ತಿಕ ಜೀವನ ನಾವಂದುಕೊಂಡಂತೆ ಇಲ್ಲ..

Advertisements

ಹೌದು, ನಿಜಜೀವನದಲ್ಲಿ ತುಂಬಾ ಕಷ್ಟಪಟ್ಟಿರುವ ಇವರಿಗೆ ಪುರೋಹಿತ್ ಎಂಬ ಮುದ್ದಾದ ಮಗನಿದ್ದಾನೆ. ಆದರೆ ಹೇಮಾ ಅವರ ಪುತ್ರ ಪುರೋಹಿತ್ ಗೆ ಕಣ್ಣು ಕಾಣೋದಿಲ್ಲ. ಎಲ್ಲಾ ರೀತಿಯ ಚಿಕಿತ್ಸೆ ಕೊಡಿಸಿದ್ದರೂ ಸಹ ಉಪಯೋಗವಾಗಿಲ್ಲ. ಸಿನಿಮಾಗಳಲ್ಲಿ ಅಮೋಘವಾಗಿ ನಟಿಸುವ ಇವರು ತಮ್ಮ ವೈಯುಕ್ತಿಕ ಜೀವನದಲ್ಲಿ ತುಂಬಾ ನೋವು ಅನುಭವಿಸುತ್ತಿದ್ದಾರೆ. ೮೦ರ ದಶಕದಲ್ಲಿ ಸಪೋರ್ಟಿನ್ಗ್ ಪಾತ್ರಗಳಲ್ಲಿ ಮಿಂಚಿರುವ ಇವರು ರಾಜ್ ಕುಮಾರ್, NTR, ವಿಷ್ಣುವರ್ಧನ್, ಕಮಲ್ ಹಾಸನ್, ಚಿರಂಜೀವಿ, ರಜನೀಕಾಂತ್, ಶಂಕರ್ ನಾಗ್ ಸೇರಿದಂತೆ ಖ್ಯಾತ ಮೇರು ನಟರ ಜೊತೆ ನಟಿಸಿದ್ದಾರೆ.

ಇನ್ನು ನಟಿ ಹೇಮಾ ಚೌಧರಿಯವರು ಕೇವಲ ನಟನೆ ಮಾತ್ರವಲ್ಲದೆ ಕುಚುಪುಡಿ ನೃತ್ಯದಲ್ಲಿ ಪ್ರಾವೀಣ್ಯರಾಗಿದ್ದಾರೆ. ೧೯೫೫ರಲ್ಲಿ ಚನ್ನೈ ನಲ್ಲಿ ಹುಟ್ಟಿದ ಹೇಮಾರವರು ಈಗ ನೆಲಸಿರುವುದು ಬೆಂಗಳೂರಿನಲ್ಲಿ. ಆದರೆ ತನ್ನ ಮಗ ಪುರೋಹಿತ್ ನನ್ನ ಅಷ್ಟಾಗಿ ಹೊರಗಡೆ ಕರೆದುಕೊಂಡು ಬರುವುದಿಲ್ಲ.

ಸದ್ಯಕ್ಕೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅದ್ಭುತ ನಟಿ ಹೇಮಾ ಚೌಧರಿ. ಸ್ನೇಹಿತರೇ, ಎಲ್ಲಾ ನಟ ನಟಿಯರ ಜೀವನ ನಾವಂದುಕೊಂಡಂತೆ ವೈಭೋವೋಪೇತವಾಗಿ ಇರುವುದಿಲ್ಲ. ತೆರೆಯ ಮೇಲೆ ಇರುವ ಹಾಗೆ ಅವರ ನಿಜ ಜೀವನದಲ್ಲಿ ಇರುವುದಿಲ್ಲ. ಇಷ್ಟೆಲ್ಲಾ ನೋವಿನ ನಡುವೆಯೂ ನಟಿಸಿ ಮನರಂಜನೆ ನೀಡುವ ಇಂತಹ ಕಲಾವಿದರು ಗ್ರೇಟ್ ಆಲ್ವಾ ಸ್ನೇಹಿತರೆ..