Advertisements

ನಟಿ ಭಾನುಪ್ರಿಯ ಈಗ ಹೇಗಿದ್ದಾರೆ ಏನ್ ಕೆಲಸ ಮಾಡ್ತಿದ್ದಾರೆ ಗೊತ್ತಾ? ಈಕೆಯ ತಂಗಿ ಕೂಡ ಕನ್ನಡದ ಸ್ಟಾರ್ ನಟಿ.

Cinema

ರಸಿಕ ಚಿತ್ರದ ಮೂಲಕ ಕನ್ನಡ ಚಿತ್ರ ರಸಿಕರಿಗೆ ಪರಿಚಯವಾದ ನಟಿ ಬಾನುಪ್ರಿಯ.. ರವಿಚಂದ್ರನ್ ಅವರ ಜೊತೆ ರಸಿಕ ಚಿತ್ರದಲ್ಲಿ ರೊಮ್ಯಾನ್ಸ್ ಮಾಡಿದ್ದ ಭಾನುಪ್ರಿಯಾ ಅವರನ್ನು ಇಂದಿಗೂ ಕನ್ನಡ ಸಿನಿ ಪ್ರೇಕ್ಷಕರು ಮರೆತಿಲ್ಲ.. 80, 90ರ ದಶಕದಲ್ಲಿ ಮಿಂಚುತ್ತಿದ್ದ ಟಾಪ್ ನಟಿಯರಲ್ಲಿ ನಟಿ ಭಾನುಪ್ರಿಯ ಕೂಡ ಒಬ್ಬರು.. ಆಂಧ್ರ ಪ್ರದೇಶ್ ರಾಜ ಮಹೇಂದ್ರ ವರಮ್ ಎಂಬಲ್ಲಿ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ 1967 ರಲ್ಲಿ ಜನವರಿ 17 ರಂದು ಜನಿಸಿದರು ಈ ನಟಿ.. ಚಿಕ್ಕಂದಿನಿಂದಲೂ ಕಲೆಯತ್ತ ವಾಲಿದ ಭಾನುಪ್ರಿಯ ಕುಚುಪುಡಿ ಭರತನಾಟ್ಯವನ್ನು ಕಲಿತಿದ್ದರು. 1984 ರಲ್ಲಿ ತೆರೆಕಂಡ ಸಿ‌ನಿಮಾ ಸೀತಾರಾ ಎಂಬ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಪೂರ್ಣ ನಾಯಕಿ ನಟಿಯಾಗಿ ಪಾದಾರ್ಪಣೆ ಮಾಡಿದರು..

[widget id=”custom_html-3″]

Advertisements

ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣ, ಶೋಭನ್ ಬಾಬು, ವೆಂಕಟೇಶ್, ಕೃಷ್ಣಾ ಸುಮನ್, ನಾಗಾರ್ಜುನ್ ಇನ್ನೂ ಮುಂತಾದ ತೆಲುಗಿನ ಟಾಪ್ ನಟರ ಜೊತೆ ನಟಿಸಿದ್ದಾರೆ.. ನಂದಮುರಿ ಬಾಲಕೃಷ್ಣ ಹಾಗು ಭಾನುಪ್ರಿಯ ಕಾಂಭಿನೇಷನ್ ಆಗಿನ ಕಾಲದಲ್ಲಿ ತುಂಬಾ ವರ್ಕೌಟ್ ಆಗಿತ್ತು. ಇವರಿಬ್ಬರ ಜೊತೆಗಿನ ಹಲವಾರು ಸಿನಿಮಾಗಳು ಬ್ಲಾಕ್ ಬ್ಲ’ಸ್ಟ’ರ್ ಸಿನಿಮಾಗಳಾಗಿ ಗೆದ್ದವು. ಭಾನುಪ್ರಿಯಾ ಸುಮಾರು 110 ಚಿತ್ರಗಳಲ್ಲಿ ನಟಿಸಿದ್ದಾರೆ.. ತೆಲುಗು ಪ್ರೇಕ್ಷಕರು ಭಾನುಪ್ರಿಯ ಅವರನ್ನು ಅಂದಿನ ಕಾಲದಲ್ಲಿ ಮತ್ತೊಬ್ಬ ಶ್ರೀದೇವಿ ಎಂದು ಗುರುತಿಸಿಕೊಂಡಿದ್ದರು. ಭಾನುಪ್ರಿಯ ಅವರು 1998 ರಲ್ಲಿ ಅಮೇರಿಕಾದಲ್ಲಿ ನೆಲೆಸಿದ್ದ ಪೋಟೊಗ್ರಾಫರ್ ಆದರ್ಶ ಕೌಶಲ್ ಎಂಬುವವರನ್ನು ಮದುವೆಯಾಗಿ ಅಮೇರಿಕಾಗೆ ಹಾರಿದರು. ಭಾನುಪ್ರಿಯ ಹಲವು ಕಾರಣಗಳಿಂದ 2005 ರಲ್ಲಿ ತಮ್ಮ ಪತಿ ಆದರ್ಶ್ ಕೌಶಲ್ ಅವರಿಗೆ ವಿಚ್ಚೇದನ ನೀಡಿದರು.

[widget id=”custom_html-3″]

ಕಳೆದ ಕೆಲವು ವರ್ಷಗಳ ಹಿಂದೆ ಭಾನುಪ್ರಿಯ ಪತಿ ಕೂಡ ಸಾ’ವ’ನ್ನಪ್ಪಿದರು. ಭಾನುಪ್ರಿಯ ಪ್ರಸ್ತುತ ತಮ್ಮ ಮಗಳೊಂದಿಗೆ ಅಮೇರಿಕಾದಲ್ಲಿ ನೆಲೆಸಿದ್ದು ದಕ್ಷಿಣ ಭಾರತದ ಶಾಸ್ತ್ರೀಯ ನೃತ್ಯವಾದ ಕುಚಿಪುಡಿ ಭರತನಾಟ್ಯವನ್ನು ಅಲ್ಲಿನ ಭಾರತೀಯ ಮಕ್ಕಳಿಗೆ ಕಲಿಸಿಕೊಡುತ್ತಿದ್ದಾರೆ.‌ ಭಾನುಪ್ರಿಯ ಅವರು ಕನ್ನಡದಲ್ಲಿ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ಪೋಷಕ ನಟಿಯಾಗಿ ರವಿಚಂದ್ರನ್, ವಿಷ್ಣುವರ್ಧನ್, ಶಿವರಾಜ್ ಕುಮಾರ್ ಅವರ ಜೊತೆ ನಟಿಸಿದ್ದಾರೆ.. ಇನ್ನೂ ಭಾನುಪ್ರಿಯ ಅವರಿಗೆ ಶಾಂತಿ ಪ್ರಿಯ ಎಂಬ ಸಹೋದರಿ ಇದ್ದು ತೆಲುಗು ತಮಿಳು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 1989 ರಲ್ಲಿ ತೆರೆಕಂಡಿದ್ದ ಅಂತಿಂತ ಗಂಡು ನಾನಲ್ಲ ಎಂಬ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗು ಕರಾಟೆ ಕಿಂಗ್ ಶಂಕರ್ ನಾಗ್ ಅವರ ಜೊತೆಯಲ್ಲಿ ನಾಯಕಿಯಾಗಿ ನಟಿಸಿದ್ದಾರೆ ನಟಿ ಶಾಂತಿ ಪ್ರಿಯಾ.. ನಟಿ ಭಾನುಪ್ರಿಯ ಅವರ ಬಗ್ಗೆ ನಿವೇನ್ ಹೇಳ್ತಿರಾ.