ಈ ಒತ್ತಡದ ಜೀವನದಲ್ಲಿ ಒಂದು ದಿನ ಕೆಲಸದಿಂದ ರಜೆ ಸಿಕ್ಕಿದ್ರು ಮರುದಿನ ಕೆಲಸಕ್ಕೆ ಹೋಗಲು ಅಷ್ಟಾಗಿ ಮನಸ್ಸು ಬರಲ್ಲ, ಮಾಡರ್ನ್ ಡೇ ಮಾತೊಂದಿದೆ, ಮಂಡೇ ನೀನ್ ಯಾಕೆ ಬಂದೆ.. ಸಂಡೇನೇ ಚೆನ್ನಾಗಿತ್ತು ಅಂತ ಅಲ್ವ.. ಈ ಮಾತನ್ನು ಬಹುತೇಕರು ಗುನುಗುತಿರುತ್ತಾರೆ, ಆದರೆ ಸಂಡೆ ಅನ್ನೋ ಕಲ್ಪನೆ ಯಾಕ್ ಬಂತು? ಅಂದ್ರೆ ಭಾನುವಾರವನ್ನು ರಜಾದಿನ ಅಂತ ಯಾಕೆ ಘೋಷಣೆ ಮಾಡಿದ್ರು.. ಉಳಿದ ಆರು ದಿನ ಕೆಲಸ ಮಾಡಿ ಆದಿತ್ಯವಾರ ಮಾತ್ರ ಯಾಕೆ ರಜೆ. ಎಂಬಿತ್ಯಾದಿ ಪ್ರಶ್ನೆಗಳು ಒಮ್ಮೆಯಾದ್ರು ನಿಮ್ಮ ತಲೆಗೆ ಬಂದಿರಬೇಕು ಅಲ್ವಾ.. ಈಗ ಆ ಪ್ರಶ್ನೆಗೆ ಸಂಡೇ ಯಾಕೆ ಹಾಲಿ ಡೇ ಆಯ್ತು ಅನ್ನೋ ಹಲವರ ಪ್ರಶ್ನೆಗೆ ಉತ್ತರ ಕೊಡ್ತೀವಿ.
ಅದು ಬ್ರಿಟಿಷರ ಕಾಲ, ಸ್ವಾತಂತ್ರವ್ಯವಿಲ್ಲದೇ ಜೀತದಾಳುಗಳಂತೆ ಭಾರತೀಯರು ಬ್ರಿಟಿಷರ ಅಡಿಯಾಳಾಗಿದ್ರು.
[widget id=”custom_html-3″]

ಅವರು ಮಾಡಿದ್ದೇ ಕಾನೂನು, ಅವರು ಕೊಟ್ಟಿದ್ದೇ ನ್ಯಾಯ ಎಂಬಂತಹ ಪರಿಸ್ಥಿತಿಯಿದ್ದ ಕಾಲವದು, ಆ ಸಂದರ್ಭದಲ್ಲಿ ಭಾರತೀಯರೆಲ್ಲರು ವಾರಪೂರ್ತಿ ಬ್ರಿಟಿಷರ ಕೈಅಡಿಯಲ್ಲಿ ಕೆಲಸ ಮಾಡಬೇಕಿತ್ತು, ಅವರು ಕೊಡುವ ಹಣದಿಂದ ತಮ್ಮ ಮನೆಯನ್ನು ಖರ್ಚನ್ನು ನೋಡಿಕೊಳ್ಳೂತ್ತಿದ್ದರು. ಈ ವ್ಯವಸ್ಥೆಯನ್ನು ಆಗ ಒಬ್ಬ ವ್ಯಕ್ತಿ ಪ್ರಶ್ನೆ ಮಾಡ್ತಾನೆ, ಆ ವ್ಯಕ್ತಿ ಪ್ರಶ್ನೆ ಮಾಡಿದ ಫಲವೇ ಇಂದು ನಾವು ನೀವೆಲ್ಲ ಭಾನುವಾರವನ್ನು ರಜಾದಿನವಾಗಿ ತೆಗೆದುಕೊಂಡಿರುವುದು.. ಅಂದಹಾಗೇ ಆ ವ್ಯಕ್ತಿಯ ಹೆಸರು ನಾರಾಯಣ್ ಮೆಗಾಜಿ ಲೋಖಂಡೆ, ಈತ ಕಾರ್ಮಿಕರ ನಾಯಕನಾಗಿದ್ದರು, ಜೊತೆಗೆ ಸತ್ಯ ಶೋಧನಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ , ಒಮ್ಮೆ ಬ್ರಿಟಿಷರ ಬಳಿ ನಾರಾಯಣ್ ಅವರು ಒಂದು ಬೇಡಿಕೆಯನ್ನು ಇಡುತ್ತಾರೆ..
[widget id=”custom_html-3″]

ವಾರಪೂರ್ತಿ ನಿಮಗಾಗಿ ನಮ್ಮ ಕುಟುಂಬಕ್ಕಾಗಿ ನಿರಂತರವಾಗಿ ದುಡಿಯುತ್ತೇವೆ, ವಾರದಲ್ಲಿ ಒಂದು ದಿನ ನಮಗೆ ಸಮಾಜಕ್ಕಾಗಿ ಕೆಲಸ ಮಾಡಬೇಕು ಹಾಗಾಗಿ ಭಾನುವಾರ ರಜೆ ಕೊಡಿ ಅಂತ ವಿನಮೃವಾಗಿ ಕೇಳಿಕೊಳ್ಳುತ್ತಾರೆ, ಆದರೆ ಇದಕ್ಕೆ ಒಪ್ಪದ ಬ್ರಿಟಿಷರು ರಜೆ ಕೊಡೋಕಾಗೋದಿಲ್ಲ, ಸುಮ್ಮನೆ ಕೆಲಸ ಮಾಡಿ ಅಂತ ಗದರುತ್ತಾರೆ, ವಿಚಾರ ಇಷ್ಟೇ ಆಗಿದ್ರೆ ಇವತ್ತು ಆದಿತ್ಯವಾರ ರಜಾದಿನ ಆಗ್ತಾ ಇರಲಿಲ್ಲವೇನೋ, ಬ್ರಟಿಷರ ನಡೆಯಿಂದ ಸಿಟ್ಟಿಗೆದ್ದ ನಾರಾಯಣ್ ಮೆಗಾಜಿ ಲೋಖಂಡೆ ಅವರು ಕೆಲಸಕ್ಕೆ ರಾಜೀನಾಮೆ ಕೊಟ್ಟು ಬ್ರಿಟಿಷರ ವಿರುದ್ಧ ಚಳುವಳಿ ಮಾಡೋದಕ್ಕೆ ಕೂರುತ್ತಾರೆ, ನಮಗೆ ಆದಿತ್ಯವಾದರ ರಜೆ ಬೇಕೆ ಬೇಕು ಅಂತ ಪಟ್ಟುಹಿಡಿದು ಕುಳಿತುಕೊಳ್ಳುತ್ತಾರೆ, ಇವರ ಹೋರಾಟಕ್ಕೆ ಬೇರೆ ಬೇರೆ ಕಾರ್ಮಿಕರು ಸಹ ಕೈಜೋಡಿಸುತ್ತಾರೆ.
[widget id=”custom_html-3″]

ಹೀಗೆ ಶುರುವಾದ ಈ ಹೋರಾಟ ಒಂದೆರೆಡು ತಿಂಗಳುಗಳಲ್ಲಿ ಮುಗಿಯಲಿಲ್ಲ, ಒಂದೆರೆಡು ವರ್ಷಗಳಲ್ಲಿ ಮುಗಿಯಲಿಲ್ಲ, ಬದಲಾಗಿ ನಡೆದದ್ದು ಬರೋಬ್ಬರಿ ಎಂಟು ವರ್ಷಗಳ ಚಳುವಳಿ, ನಾರಾಯಣ್ ಅವರ ಎಂಟು ವರ್ಷಗಳ ಚಳುವಳಿಯ ಫಲಶ್ರುತಿ ಎಂಬಂತೆ ಕೊನೆಗೂ ಬ್ರಿಟಿಷ್ ಆಡಳಿತ ಆಗ ಭಾನುವಾರವನ್ನು ರಜಾದಿನವನ್ನಾಗಿ ಘೋಷಣೆ ಮಾಡುತ್ತದೆ, ಆದರೆ ನಾರಾಯಣ್ ಅವರ ಉದ್ದೇಶವಿದ್ದದ್ದು ವಾರಪೂರ್ತಿ ಬ್ರಿಟಿಷರಿಗೆ ಸಂಸಾರಕ್ಕೆ ದುಡಿದರೇ ವಾರದ ಒಂದು ದಿನ ಸಮಾಜಕ್ಕಾಗಿ, ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಅಂತ ಆದರೆ ಈ ಧ್ಯೇಯ ಕಾಲ ಕ್ರಮೇಣ ಮರೆಯಾಗುತ್ತಾ ಹೋಯಿತು, ಸದ್ಯ ಈಗ ಅದು ರಜಾದಿನವಾಗಿ ವರ್ಕ್ ಪ್ರೆಶರ್ನಿಂದ ಮುಕ್ತಿ ಪಡೆಯುವ ದಿನವಾಗಿ ಪರಿವರ್ತನೆಯಾಗಿದೆ ಅಷ್ಟೇ..