Advertisements

ವೈಟ್ ರೈಸ್ ಗೇ ಈ ತರ ಗೊಜ್ಜು ಇದ್ರೆ ರೈಸ್ ಖಾಲಿನೇ ಮಾಡ್ತೀರಾ ! ತಿಂಗಳು ಗಟ್ಟಲೆ ಸ್ಟೊರ್ ಮಾಡಬಹುದು..

Aduge

ಇದು ಬೇಸಿಗೆ ಕಾಲ ಆಗಿರುವುದರಿಂದ, ಬೇರೆ ಬೇರೆ ರೀತಿಯ ಯಾವುದೇ ಸಾಂಬಾರಗಳನ್ನ ನೀವು ಮಾಡಿದ್ರೂ ಕೂಡ ಒಂದು ದಿನ ಇರುವುದು ಕಷ್ಟ. ಬಿಸಿಯಿಂದ ಅದು ಕೆಟ್ಟುಹೋಗುವ ಸಾಧ್ಯತೆ ಇರುತ್ತದೆ. ಇನ್ನು ಫ್ರಿಡ್ಜ್ ನಲ್ಲಿ ತಾನೇ ಎಷ್ಟು ದಿನಗಳ ಕಾಲ ಇಡೋಕೆ ಸಾಧ್ಯ ಹೇಳಿ. ಹಾಗಾಗಿ ಒಂದರಿಂದ ಎರಡು ತಿಂಗಳುಗಳ ಕಾಲ ಬಳಸಬಹುದಾದ, ರುಚಿಕರವಾದ ಗೊಜ್ಜನ್ನ ಯಾವ ರೀತಿ ಮಾಡೋದು ಅಂತ ಇಲ್ಲಿ ನೋಡೋಣ ಬನ್ನಿ..

ಇನ್ನು ಈ ಗೊಜ್ಜನ್ನ ವೈಟ್ ರೈಸ್ ನಲ್ಲಿ ನೀವು ಮಿಕ್ಸ್ ಮಾಡಿಕೊಂಡು ತಿನ್ನಬಹುದು. ಇನ್ನು ಲಾಕ್ ಡೌನ್ ಇರುವ ಈ ವೇಳೆ ಹೋಟೆಲ್ ಗಳನ್ನ ನಂಬಿಕೊಡಿರುವ ಬ್ಯಾಚುಲರ್ಸ್ ಗಳಿಗೂ ಕೂಡ ಈ ರೆಸಿಪಿ ತುಂಬಾ ಉಪಯೋಗವಾಗಲಿದೆ. ಒಂದು ಸಲ ಮಾಡಿಕೊಂಡರೆ ಒಂದರಿಂದ ಎರಡು ತಿಂಗಳವರೆಗೆ ಈ ಗೊಜ್ಜನ್ನ ಬಳಸಬಹುದು. ಇದು ಕೆಡೋದಿಲ್ಲ. ಇನ್ನು ಕೆಲಸಕ್ಕೆ ಹೋಗೋ ಹೆಣ್ಣುಮಕ್ಕಳಿಗೂ ಕೂಡ ಈ ರೆಸಿಪಿ ತುಂಬಾ ಉಪಯೋಗವಾಗುತ್ತೆ. ಹಾಗಾದ್ರೆ ಈ ಗೊಜ್ಜನ್ನ ಮಾಡೋದು ಹೇಗೆ ಅಂತ ನೋಡೋಣ ಬನ್ನಿ..

ಬೇಕಾಗುವ ಸಾಮಗ್ರಿಗಳು : ಒಂದು ಕಪ್ ಕಡ್ಲೆ ಬೀಜ, ಒಣ ಮೆಣಸಿನಕಾಯಿ – 10 ರಿಂದ 15, 1 ಟೇಬಲ್ ಸ್ಪೂನ್ ಧಿನಯ ಬೀಜ, ಅರ್ಧ ಚಮಚ ಮೆಂತ್ಯೆ, 1 ಚಮಚ ಬಿಳಿ ಎಳ್ಳು, ಕಾಲು ಮೆಣಸು 8-10, 1 ಕಪ್ ಹುಣಸೆಹಣ್ಣು, 1 ಕಪ್ ಎಣ್ಣೆ, ಸಾಸಿವೆ, ಅರ್ಧ ಚಮಚ, 1 ಚಮಚ ಜೀರಿಗೆ, 1 ಚಮಚ ಉದ್ದಿನ ಬೇಳೆ, 1 ಚಮಚ ಕಡ್ಲೆ ಬೇಳೆ, 1 ಚಮಚ ಹರಿಶಿನ, ಇದೆಲ್ಲದರ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ ತಿಳಿಯಲು ಮೇಲಿರುವ ವಿಡಿಯೋ ನೋಡಿ.