Advertisements

ಅಪ್ಪ ಜೈ’ಲಿನಲ್ಲಿ, ತಾಯಿ ಬಿಟ್ಟೋದ್ಲು..ಈ ನಾಯಿಯೇ ಇವನಿಗೆಲ್ಲಾ ..ಯಾರಿಗೂ ಬೇಡ ಈ ಪುಟ್ಟ ಬಾಲಕನ ಮನಕಲಕುವ ಕತೆ..

Kannada Mahiti

ನಮಸ್ತೇ ಸ್ನೇಹಿತರೇ, ಬಾಲ್ಯಜೀವನ ಎಂದರೆ ಮಕ್ಕಳು ಆಟ ಆಡಿಕೊಂಡು ತುಂಟ ತರ್ಲೆಗಳನ್ನ ಮಾಡಿಕೊಂಡು ಇರಬೇಕಾದ ವಯಸ್ಸು. ಆದರೆ ಒಂದು ವೇಳೆ ಇಂತಹ ವಯಸ್ಸಿನಲ್ಲೇ ಕಷ್ಟಗಳು ಎದುರಾದ್ರೆ, ಜವಾಬ್ದಾರಗಳು ಎದುರಾದ್ರೆ ಅವರ ಪುಟ್ಟ ಹೃದಯ ಹೇಗಾಗಬೇಡ ಹೇಳಿ..ಇನ್ನು ಈ ತರಹದ ಘಟನೆಗಳನ್ನ ನಾವು ಕೇವಲ ಸಿನಿಮಾಗಳಲ್ಲಿ ಮಾತ್ರ ನೋಡಿರಲು ಸಾಧ್ಯ. ನಿಜ ಜೀವನದಲ್ಲಿ ನೋಡಿರುವುದು ತೀರಾ ಕಡಿಮೆ. ಹೌದು, ಇದೆ ತರಹದ ನೈಜ ಘಟನೆಯೊಂದು ಈಗ ನಡೆದಿದ್ದು ಮನಕಲಕುವಂತಿದೆ. ಇನ್ನು ಈ ಮನಕಲುಕುವ ಘಟನೆಗೆ ಸಾಕ್ಷಿಯಾಗಿರುವುದು ಅಂಕಿತ್ ಎಂಬ ೯ ವರ್ಷದ ಬಾಲಕ.

ದುಃಖದ ವಿಷಯ ಏನೆಂದರೆ ಈ ಬಾಲಕನಿಗೆ ತನ್ನ ಊರು ಯಾವುದು ಎಂದು ನೆನಪೇ ಇಲ್ಲ. ಅವನಿಗೆ ಗೊತ್ತಿರುವುದು ಎರಡೇ ವಿಷಯ. ಒಂದು ತನ್ನ ತಾಯಿ ತನ್ನನ್ನ ಒಬ್ಬಂಟಿಯಾಗಿ ಬಿಟ್ಟುಹೋಗಿರುವುದು. ಎರಡನೆಯದು ಅವರ ತಂದೆ ಜೈಲಿನಲ್ಲಿರುವುದು. ಇಂತಹ ಕಲ್ಲು ಹೃದಯದವರಿಗೂ ಕೂಡ ಈ ಪುಟ್ಟ ಹುಡುಗನ ಕತೆಯನ್ನ ಕೇಳಿ ಕಣ್ಣೀರು ಬರ್ದೇ ಇರೋದಿಲ್ಲ. ಇವೆರಡನ್ನ ಬಿಟ್ಟು ಬೇರೆ ಯಾವುದೇ ವಿಷಯ ತಿಳಿದಿಲ್ಲ ಈ ಬಾಲಕನಿಗೆ. ಇನ್ನು ಈ ಪುಟ್ಟ ಬಾಲಕ ರಾಜಧಾನಿ ದೆಹಲಿಯ ಟೀ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇದರ ಜೊತೆಗೆ ಬಲೂನುಗಳನ್ನ ಮಾರುತ್ತಾ, ಪುಟ್ ಪಾತ್ ನಲ್ಲಿ ಮಲಗಿ ಜೀವನ ಸಾಗಿಸುತ್ತಿದ್ದಾನೆ. ಇನ್ನು ಈ ಬಾಲಕನ ಜೊತೆ ನಾಯಿಯೊಂದು ಇದ್ದು ಅದು ಅವನ ಜೊತೆಗೆ ಪುಟ್ ಪಾತ್ ನಲ್ಲಿ ಮಲಗುತ್ತದೆ. ಆ ನಾಯಿಮರಿಗೂ ಕೂಡ ಈ ಬಾಲಕನನ್ನ ಕಂಡ್ರೆ ಅದೇನೋ ಪ್ರೀತಿ. ಅದು ಆ ಬಾಲಕನನ್ನ ಬಿಟ್ಟು ಎಲ್ಲಿಯೂ ಹೋಗೋದಿಲ್ಲ.

Advertisements

ಇನ್ನು ಮಾಧ್ಯಮವೊಂದರ ವರದಿಯ ಪ್ರಕಾರ ಈ ಬಾಲಕ ಹಲವು ವರ್ಷಗಳಿಂದ ಇದೇ ರೀತಿ ಜೀವನ ಮಾಡುತ್ತಿದ್ದಾನಂತೆ. ತಾನು ಪ್ರತೀ ದಿನ ಸಂಪಾದನೆ ಮಾಡಿದ ದುಡ್ಡಿನಿಂದ ತನ್ನ ಮುದ್ದಿನ ನಾಯಿಗೆ ಹಾಲು, ಊಟವನ್ನ ಕೊಂಡು ಅದಕ್ಕೆ ಇಡುತ್ತಾನೆ. ಆದರೆ ಕೆಲಸ ಮಾಡದೆ ಏನನ್ನು ಉಚಿತವಾಗಿ ತೆಗೆದುಕೊಳ್ಳುವುದಿಲ್ಲವಂತೆ. ಇನ್ನು ಇತೀಚೆಗಷ್ಟೇ ಅಂಕಿತ್ ಮತ್ತು ಆತನ ಪ್ರೀತಿಯ ನಾಯಿ ಮುಚ್ಚಿರುವ ಅಂಗಡಿಯೊಂದರ ಮುಂದೆ ಮಲಗಿರುವುದನ್ನ ನೋಡಿ ಫೋಟೋವನ್ನ ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಈ ವಿಚಾರ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಆ ಬಾಲಕನನ್ನ ಕಳೆದ ಸೋಮವಾರ ತಾನೇ ಪತ್ತೆ ಹಚ್ಚಿದ್ದು, ಸದ್ಯಕ್ಕೆ ಅವರ ಆರೈಕೆಯಲ್ಲಿ ಇದ್ದಾನೆ ಎಂದು ಹೇಳಲಾಗಿದೆ.

ಇನ್ನು ಅಧಿಕಾರಿಗಳು ಈ ಬಾಲಕನ ಫೋಟೋಗಳನ್ನ ಅಕ್ಕ ಪಕ್ಕದ ಜಿಲ್ಲೆಗಳಿಗೆ ಕಳುಹಿಸಿಕೊಟ್ಟಿದ್ದು ಈತನ ಸಂಬಂಧಿಕರು ಯಾರಾದರೂ ಸಿಗುತ್ತಾರಾ ಎಂಬುದನ್ನ ಪತ್ತೆ ಹಚ್ಚಲು ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಇವರ ಪ್ರಯತ್ನಕ್ಕೆ ಫಲ ಸಿಕ್ಕಿ ಆ ಬಾಲಕ ಆದಷ್ಟು ಬೇಗ ತನ್ನ ಸಂಬಂಧಿಕರನ್ನ ಸೇರಿಕೊಳ್ಳಲಿ ಎಂಬುದೇ ನಮ್ಮ ಆಶಯ. ಇನ್ನು ಈ ಚಿಕ್ಕ ವಯಸ್ಸಿನಲ್ಲೇ ಭಿಕ್ಷೆ ಬೇಡದೆ ದುಡಿದು ತಿನ್ನುತ್ತಿರುವ ಈ ಬಾಲಕನ ಸ್ವಾಭಿಮಾನಕ್ಕೆ ಒಂದು ಸಲಾಂ ಹೇಳಲೇಬೇಕು..