Advertisements

ಈ ಮಹಿಳೆಗೆ ರಸ್ತೆಯಲ್ಲಿ ಸಿಕ್ಕ 500 ರೂಪಾಯಿಯ ನೋಟ್ ಕಂತೆಯನ್ನು ಏನು ಮಾಡಿದರು ಗೊತ್ತಾ..

Inspire

ನಮಸ್ತೆ ಸ್ನೇಹಿತರೆ, ದುಡ್ಡು ಅಂದರೆ ಹೆ’ಣ ಕೂಡ ಬಾಯಿ ಬಿಡುತ್ತೆ ಅಂತಾರೆ ಅದರಲ್ಲೂ ಕೂಡ ಈಗಿನ ಕಾಲದಲ್ಲಂತೂ ಸ್ವಂತ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಆಸ್ತಿಗಾಗಿ ಜಗಳವಾಡಿರುವ ಹಲವಾರು ಉದಾಹರಣೆಗಳನ್ನು ನಾವು ನೋಡಿರುತ್ತೇವೆ ಕೇಳಿರುತ್ತೇವೆ.. ಆದರೆ ಜಾರ್ಖಂಡ್ ನಲ್ಲಿ ಈ ಮಹಿಳೆಗೆ 500 ರೂಪಾಯಿ ನೋಟುಗಳ ಕಂತೆಗಳು ಸಿಕ್ಕಿದೆ.. ಆದರೆ ಈ ಹಣವನ್ನು ಮಹಿಳೆ ಏನು ಮಾಡಿದ್ರು ಅಂತ ತಿಳಿದರೆ ನೀವು ಕೂಡ ನಂಬೋದಿಲ್ಲ.. ಇಂತಹವರನ್ನು ನೊಡಿದರೆ ನಿಯತ್ತು ಇನ್ನೂ ಬದುಕಿದೆ ಎಂದು ಅನಿಸುತ್ತದೆ.. ಕಲಿಯುಗದಲ್ಲಿ ಮನುಷ್ಯತ್ವಕ್ಕಿಂತ, ಪ್ರೀತಿ ಸಂಬಂಧಗಳಿಗಿಂತ ದುಡ್ಡಿಗೆ ತುಂಬಾನೆ ಪ್ರಾಮುಖ್ಯತೆ ನೀಡುತ್ತಾರೆ ನಮ್ಮ ಜನರು..

Advertisements

ಸಾಮಾನ್ಯವಾಗಿ ರಸ್ತೆಗಳ ಮೇಲೆ ನಡೆದುಕೊಂಡು ಹೋಗುವಾಗ ಐದು ರೂಪಾಯಿ, ಹತ್ತು ರೂಪಾಯಿ ಒಮ್ಮೊಮ್ಮೆ ಐವತ್ತು ರೂಪಾಯಿ ಸಹ ಸಿಕ್ಕಿರುತ್ತದೆ.. ಅದನ್ನು ನಾವು ಲಕ್ಷ್ಮೀ ದೇವಿಯೇ ತಾನಾಗಿ ಹೊಲಿದು ಬಂದಿದೆ ಎಂದು ಜೋಬಲ್ಲಿ ಬಿಟ್ಟುಕೊಳ್ಳುತ್ತಾರೆ.. ಆದರೆ ಇಲ್ಲೊಬ್ಬ ಮಹಿಳೆ ಮಾಡಿದ್ದು ಆಶ್ಚರ್ಯವೇ ಸರಿ.. ರೂಪ ದೇವಿ ಎಂಬ ಮಹಿಳೆ ಜಾರ್ಖಂಡ್ ನ ರಾಂಚಿನಲ್ಲಿ ವಾಸವಿರುತ್ತಾರೆ.. ಮಂಗಳವಾರ ತನ್ನ ಮಗಳ ಜೊತೆ ಮಾರ್ಕೇಟ್ ಗೆ ಹೋಗುತ್ತಾರೆ.. ಹೋಗುವ ದಾರಿಯಲ್ಲಿ ಒಂದು ಹಸಿರು ಬಣ್ಣದ ಖಂತೆ ಕಾಣಿಸುತ್ತದೆ..‌ ಅದನ್ನು ಎತ್ತಿಕೊಂಡು ನೋಡಿದಾಗ ಎಲ್ಲವೂ ಕೂಡ 500 ರೂಪಾಯಿಗಳ ನೋಟುಗಳಾಗಿತ್ತು.. ಇನ್ನೂ ನೋಟುಗಳ ಮೇಲೆ ಬ್ಯಾಂಕ್ ಆಫ್ ಇಂಡಿಯಾದ ರಿಬ್ಬನ್ ಹಾಕಿದ್ದರು..

ಸ್ವಲ್ಪ ದೂರದಲ್ಲೇ ಬ್ಯಾಂಕ್ ಆಫ್ ಇಂಡಿಯಾದ ಶಾಕೆ ಕೂಡ ಇರುತ್ತದೆ.. ಆಗ ಅಲ್ಲಿಗೆ ಹೋಗಿ ಮ್ಯಾನೇಜರ್ ಗೆ ವಿಷಯವನ್ನು ತಿಳಿಸುತ್ತಾರೆ.. ಆಗ ಮ್ಯಾನೇಜರ್ ನೋಟುಗಳನ್ನು ಪರಿಶೀಲಿಸಿ ನೋಟುಗಳಲ್ಲಿದ್ದ ನಂಬರ್ ಗಳ ಮುಖಾಂತರ ತಿಳಿದು ಬಂದಿದ್ದು ಏನೆಂದರೆ ಸ್ವಲ್ಪ ಸಮಯಗಳ ಹಿಂದೆಯಷ್ಟೇ ಶಿವಸೇನ್ ಎಂಬುವ ವ್ಯಕ್ತಿ ಮನೆ ಕಟ್ಟುವುದಕ್ಕಾಗಿ ಅಕೌಂಟ್ ನಿಂದ ಮೂರು ಲಕ್ಷ ಹಣವನ್ನ ಡ್ರಾ ಮಾಡಿಕೊಂಡು ಹೋಗಿದ್ದಾರೆ.. ಅದರಲ್ಲಿ ಈ ಹೊಸ ಐವತ್ತು ಸಾವಿರ ರೂಪಾಯಿ ನೋಟಿನ ಕಂತೆಯನ್ನು ರಸ್ತೆಯ ಮಧ್ಯೆ ಬೀಳಿಸಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿತು..

ನಂತರ ಶಿವಸೇನ್ ಅವರನ್ನು ಬ್ಯಾಂಕ್ ಗೆ ಕರೆಸಿ ಈ ಹಣವನ್ನು ಕೊಡುತ್ತಾರೆ.. ಮತ್ತು ರೂಪ ದೇವಿ ಅವರಿಗೆ ತುಂಬಾನೆ ಧನ್ಯವಾದಗಳನ್ನು ಹೇಳಿ ಆ ಹಣದಲ್ಲೇ ಐದು ಸಾವಿರ ರೂಪಾಯಿಯನ್ನು ಕೊಡಲು ಮುಂದಾಗುತ್ತಾರೆ.. ಆಗ ರೂಪಾ ದೇವಿ ನನಗೆ ಹಣದ ಅವಶ್ಯಕತೆ ಇಲ್ಲಾ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾರೆ.. ಈ ವಿಷಯವನ್ನು ಬ್ಯಾಂಕ್ ಮ್ಯಾನೇಜರ್ ತಮ್ಮ ಜಾಲತಾಣದ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ.. ಈ ಕಲಿಯುಗದಲ್ಲಿ ಸಹ ಇಂತಹ ನೀತಿ ನಿಜಾಯಿತಿವುಳ್ಳ ಮನುಷ್ಯರಿಂದಲೇ ಒಳ್ಳೆಯ ಮಳೆ ಬೆಳೆ ಆಗ್ತಿರೋದು.. ರೂಪಾ ದೇವಿಯವರು ಮಾಡಿರುವ ಈ ಕೆಲಸ ನಿಮಗೆ ಇಷ್ಟ ಆಗಿದ್ರೆ ನಿಮ್ಮ ಅನಿಸಿಕೆ ತಿಳಿಸಿ..