Advertisements

ಬೊಜ್ಜಿನ ಸಮಸ್ಯೆ, ಹೆಣ್ಣುಮಕ್ಕಳ ಅರೋಗ್ಯ ಸಮಸ್ಯೆಗೆ ಈ ಧಾನ್ಯ ರಾಮಬಾಣ.

Health

ಹುರುಳಿಕಾಳು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಇದರಿಂದ ವಿದ ವಿದವಾದ ಅಡುಗೆಗಳನ್ನು ಮಾಡಿಕೊಂಡು ಸೇವಿಸುತ್ತಾರೆ. ಆದರೆ ಹಲವರಿಗೆ ತಿಳಿದಿಲ್ಲ ಹುರುಳಿಕಾಳು ಹಲವು ರೋಗಗಳಿಗೆ ರಾಮಬಾಣ ಎಂದು. ಹೌದು ಹಲವು ರೋಗಗಳನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ. ಕೆಲವು ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಹುರುಳಿಕಾಳಿನಿಂದ ಔಷಧಿ ಮಾಡಿಕೊಂಡು ಮನೆ ಮಂದಿಯ ಆರೋಗ್ಯವನ್ನು ಕಾಪಾಡಬಹುದು. ಹುರುಳಿಕಾಳು ಈ ಅರೋಗ್ಯ ಸಮಸ್ಯೆಗಳಿಗೆ ಹೇಳಿ ಮಾಡಿಸಿದ ಧಾನ್ಯ.

Advertisements

ಮೂಗು ಕಟ್ಟಿ ಕೆಮ್ಮು ಕಫ ಹೆಚ್ಚಾಗಿದ್ದರೆ ಸೂಪ್ ಮಾಡಿಕೊಂಡು ಸೇವಿಸಿ. ಕಫ ಬೇಗ ಕರಗಿ ಕೆಮ್ಮಿನ ಕಾಟ ತಪ್ಪುತ್ತದೆ. ಹಲವರಿಗೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು, ಬೊಜ್ಜಿನ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಲು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅಂತಹವರು ಈ ಟಿಪ್ಸ್ ಫಾಲೋ ಮಾಡಿ. ರಾತ್ರಿ ಒಂದು ಗ್ಲಾಸ್ ನೀರಿನಲ್ಲಿ ಹುರುಳಿಕಾಳನ್ನು ನೆನೆಸಿ ಬೆಳಗ್ಗೆ ಚೆನ್ನಾಗಿ ಬೇಯಿಸಿ ಅದಕ್ಕೆ ಉಪ್ಪು, ಸೈಂಧವ, ಕರಿಮೆಣಸಿನಕಾಯಿ ಪುಡಿ, ಜೀರಿಗೆ ಸೇರಿಸಿ ಬೆಳಗಿನ ಊಟದ ಸಮಯಕ್ಕೆ ಸೇವಿಸಿ ದೇಹದ ತೂಕ ಕಡಿಮೆಯಾಗಿ ಬೊಜ್ಜು ಕರಗುತ್ತದೆ. ಕೊಬ್ಬಿನಂಶ ಹೆಚ್ಚಾಗಿದ್ದರೆ ಹುರುಳಿಕಾಳನ್ನು ಚೆನ್ನಾಗಿ ನೆನೆಸಿ ಬೇಯಿಸದೆ ಖಾಲಿ ಹೊಟ್ಟೆಯಲ್ಲಿ ದಿನಕ್ಕೆ 2 ಬಾರಿ ಸೇವಿಸಿದರೆ ಕೊಬ್ಬಿನಾಂಶ ಕಡಿಮೆಯಾಗುತ್ತದೆ.

ಇನ್ನು ಇದೆ ನೆನಸಿದ ಹುರುಳಿಕಾಳನ್ನು ಬೆಳಗ್ಗೆ ಏನು ತೆಗೆದುಕೊಳ್ಳದೆ ಖಾಲಿ ಹೊಟ್ಟೆಗೆ ಬೇಯಿಸದೆ ಹಾಗೆ ಸೇವನೆ ಮಾಡಿದರೆ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ. ಈ ನೆನೆಸಿದ ಹುರುಳಿಕಾಳನ್ನು ಪೇಸ್ಟ್ ಮಾಡಿಕೊಂಡು ನೂವು ಮತ್ತು ಊತ ವಿರುವ ಜಾಗಗಳಿಗೆ ಅಚ್ಚಿಕೊಂಡರೆ ನೋವು ನಿವಾರಣೆಯಾಗಿ ಊತ ಬೇಗ ಕಡಿಮೆಯಾಗುತ್ತದೆ.

ಇನ್ನು ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಿಂಗಳ ಋತುಸ್ರಾವ ಸರಿಯಾಗಿ ಆಗದಿದ್ದರೆ. ಹುರುಳಿಕಾಳಿನ ಸೂಪ್ ಅಥವಾ ಸಲಾಡ್ ಅನ್ನು ಪ್ರತಿದಿನ ಸೇವಿಸಿದರೆ ಋತುಸ್ರಾವ ಸರಿಯಾಗಿ ಆಗುತ್ತದೆ. ಇನ್ನೂ ಬಿಳಿಸ್ರಾವ ಸಮಸ್ಯೆಯಿದ್ದರೆ ನೀರಿನಲ್ಲಿ ನೆನೆಸಿದ ಹುರುಳಿಕಾಳಿನ ನೀರನ್ನು ದಿನಕ್ಕೆ ಎರಡು ಮೂರೂ ಬಾರಿ ಕುಡಿದರೆ ಬಿಳಿಸ್ರಾವ ನಿವಾರಣೆಯಾಗುತ್ತದೆ.

ಕಿಡ್ನಿ ಸ್ಟೋನ್ ಸಮಸ್ಯೆಯಿದ್ದರೆ ನೆನೆಸಿ ಬೇಯಿಸಿದ ಹುರುಳಿಕಾಳನ್ನು ಪ್ರತಿನಿತ್ಯ ಸೇವಿಸಿದರೆ ಕಿಡ್ನಿ ಸ್ಟೋನ್ ಸಮಸ್ಯೆ ಗುಣಮುಖವಾಗುತ್ತದೆ. ಬಿಕ್ಕಳಿಕೆ ಪದೇ ಪದೇ ಬರುತ್ತಿದ್ದರೆ ಹುರುಳಿಕಾಳನ್ನು ಸುಡುವಾಗ ಅದರಿಂದ ಬರುವ ಹೊಗೆಯನ್ನು ಬಾಯಿಂದ ತೆಗೆದು ಕೊಂಡರೆ ಬಿಕ್ಕಳಿಗೆ ಬೇಗ ನಿಲ್ಲುತ್ತದೆ. ಈಗೆ ಕೆಲವೊಮ್ಮೆ ಕಾಡುವ ಕೆಲವು ಅರೋಗ್ಯ ಸಮಸ್ಯೆಗಳಿಗೆ ಹುರುಳಿ ಕಾಳು ಒಂದು ಉತ್ತಮ ಔಷಧಿ.