Advertisements

ನಡು ರಾತ್ರಿ ನಡುರಸ್ತೆಯಲ್ಲಿ ಒಂಟಿ ಮಹಿಳೆಗೆ ಈ ದೊಡ್ಡ ವ್ಯಕ್ತಿ ಮಾಡಿದ ಕೆಲಸವೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಮಾನವೀಯತೆ ಮನುಷ್ಯರಲ್ಲಿ ಸ’ತ್ತು ಹೋಗಿದ್ದರು ಕೆಲವರು ಮಾಡುವ ಸಹಾಯಗಳಲ್ಲಿ ಇನ್ನೂ ಮಾನವೀಯತೆ ಕಾಣಿಸುತ್ತದೆ.. ಅದೇ ರೀತಿ ಒಬ್ಬ ಮಹಿಳೆ ಸಹಾಯಕ್ಕಾಗಿ ಕೇಳಿಕೊಂಡು ಬಂದಾಗ ಈ ವ್ಯಕ್ತಿ ಮಾಡಿರುವ ಕೆಲಸ ನೋಡಿದರೆ ಪ್ರತಿಯೊಬ್ಬರು ಕೂಡ ಗ್ರೇಟ್ ಎಂದು ಹೇಳುತ್ತೀರಾ.. ಅಷ್ಟಕ್ಕೂ ಈ ಮಹಿಳೆ ಯಾರು? ಆ ವ್ಯಕ್ತಿ ಮಾಡಿದಾದ್ರೂ ಏನು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ.. ತಮಿಳುನಾಡಿನ ಸೇಲಮ್ ನಿಂದ ಒಬ್ಬ ಮಹಿಳೆ ತಮ್ಮ ಸ್ವಂತ ಊರಿನ ಕನ್ಯಾಕುಮಾರಿಗೆ ಬಸ್ ನಲ್ಲಿ ಪ್ರಯಾಣ ಮಾಡ್ತಿದ್ರು.. ಇನ್ನೂ ಈ ಬಸ್ ಕನ್ಯಾಕುಮಾರಿಯವರಿಗೂ ತಲುಪುವಷ್ಟರಲ್ಲಿ ರಾತ್ರಿಯ ವೇಳೆ ಆಗಿತ್ತು..

Advertisements

ಇದೇ ಸಂದರ್ಭದಲ್ಲಿ ಈ ಮಹಿಳೆಗೆ ಹಸಿವಾಗುತ್ತಿದ್ದ ಕಾರಣ ತಿನ್ನಲು ಅಕ್ಕಪಕ್ಕ ಏನಾದರೂ ಸಿಗಬಹುದು ಎಂದು ನೋಡುತ್ತಿರುತ್ತಾರೆ.. ಆದರೆ ಎಲ್ಲಾ ಅಂಗಡಿಗಳು ಮುಚ್ಚಿದ್ದ ಕಾರಣ ತನ್ನ ಊರಿಗೆ ನಡೆದುಕೊಂಡು ಹೋಗುತ್ತಿದ್ದರು.. ಅದೇ ಸಂದರ್ಭದಲ್ಲಿ ಬೀದಿ ಬದಿಯ ವ್ಯಾಪಾರಸ್ಥನೊಬ್ಬ ತನ್ನ ಎಲ್ಲಾ ಕೆಲಸಗಳನ್ನು ಮುಗಿಸಿ ಅಂಗಡಿಯನ್ನು ಮುಚ್ಚುತ್ತಿದ್ದ.. ಆಗ ಈ ಮಹಿಳೆ ನನಗೆ ತುಂಬಾ ಹಸಿವಾಗುತ್ತಿದೆ ತಿನ್ನಲು ಎನಾದ್ರೂ ಇದೆಯಾ ಎಂದು ಕೇಳುತ್ತಾರೆ.. ಈ ವ್ಯಕ್ತಿ ಎಲ್ಲಾ ಖಾಲಿಯಾಗಿದೆ. ನನಗಾಗಿ ಕೇವಲ ಮೂರು ಚಪಾತಿ ಮಿಕ್ಕಿದೆ ಅದಕ್ಕೆ ಯಾವ ಪಲ್ಯ ಅಥವಾ ಸಾಂಬಾರ್ ಏನೂ ಕೂಡ ಉಳಿದಿಲ್ಲ ಏಂದು ಹೇಳುತ್ತಾನೆ..

ಇನ್ನೂ ಆ ಮಹಿಳೆಯ ಸ್ಥಿತಿಯನ್ನು ನೋಡಿದ ಅಂಗಡಿ ವ್ಯಕ್ತಿ ಸ್ಟೌವ್ ಹಚ್ಚಿ ಆ ಮೂರು ಚಪಾತಿಗೆ ಆಮ್ಲೇಟ್ ಗಳನ್ನು ಹಾಕಿಕೊಡುತ್ತಾನೆ.. ಆಗ ಈ ಮಹಿಳೆ ಹೊಟ್ಟೆ ತುಂಬಾ ಊಟ ಮಾಡಿ ಹಣ ಎಷ್ಟು ಎಂದು ಕೇಳುತ್ತಾರೆ.. ನಂತರ ಈ ವ್ಯಕ್ತಿ ಹಣ ಬೇಡಮ್ಮ ಒಬ್ಬಳೇ ಬೇರೆ ಹೋಗುತ್ತಿದ್ದೀರಾ ಎಚ್ಚರಿಕೆಯಿಂದ ಇರಿ ಎಂದು ಹೇಳುತ್ತಾನೆ.. ಮತ್ತೆ ಈ ಮಹಿಳೆ ನೀವು ಯಾಕೆ ಹಣ ತೆಗೆದುಕೊಳ್ಳುತ್ತಿಲ್ಲ ಎಂದು ಅಂಗಡಿ ವ್ಯಕ್ತಿಗೆ ಕೇಳುತ್ತಾರೆ.. ಆಗ ಈ ವ್ಯಕ್ತಿ.. ಈ ಊಟ ನನಗಾಗಿ ಇಟ್ಟುಕೊಂಡಿದ್ದೆ. ಆದರೆ ನೀವು ಒಬ್ಬಂಟಿಯಾಗಿ ಬೇರೆ ಇದ್ದೀರಿ ಮತ್ತು ಬೆಳಗ್ಗೆಯಿಂದ ದಣಿದಿರೋದು ನಿಮ್ಮ ಮುಖದಲ್ಲಿ ಎದ್ದು ಕಾಣಿಸುತ್ತಿದೆ ಅದಕ್ಕಾಗಿ ನಾನು ಹೀಗೆ ಮಾಡಿದೆ ಎಂದು ಹೇಳುತ್ತಾನೆ..

ಇದನ್ನು ಕೇಳಿದ ಆ ಮಹಿಳೆ ಆಶ್ಚರ್ಯ ಪಡುತ್ತಾರೆ. ನಂತರ ಅಲ್ಲಿಂದ ತನ್ನ ತಂದೆಗೆ ಪೋನ್ ಕಾಲ್ ಮಾಡಿ ಕರೆಸಿಕೊಂಡು ತನ್ನ ಊರಿಗೆ ಹೋಗುತ್ತಾರೆ.. ಈ ಮಹಿಳೆ ಮನೆಗೆ ಬಂದಮೇಲೆ ನಡೆದ ಘಟನೆ ಬಗ್ಗೆ ತಮ್ಮ ಪೇಸ್ಬುಕ್ ಖಾತೆಯಲ್ಲಿ ಈಗೆ ಹಂಚಿಕೊಳ್ಳುತ್ತಾರೆ.. ನನಗೆ ಈ ದಿನ ಹೊಟ್ಟೆ ಹಸಿದಾಗ ಯಾರೋ ಒಬ್ಬ ವ್ಯಕ್ತಿ ಅವರ ಊಟವನ್ನು ನನಗೆ ನೀಡಿದರು ಮತ್ತು ಹಣವನ್ನು ಕೂಡ ತೆಗೆದುಕೊಂಡಿಲ್ಲ.. ಮಾನವೀಯತೆ ಅನ್ನೋದು ನಮ್ಮಲ್ಲಿ ಇನ್ನೂ ಹಾಗೆ ಇದೆ ಎಂದು ಪೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.. ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..