Advertisements

ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಂತ ವ್ಯಕ್ತಿನಾ ಅಸಯ್ಯವಾಗಿ ನೋಡುತ್ತಿದ್ದರು.. ಆಗ ಓನರ್ ಮಾಡಿದ ಕೆಲಸ ನೋಡಿದ್ರೆ ಶಾಕ್..

Kannada Mahiti

ನಮಸ್ತೆ ಸ್ನೇಹಿತರೆ, ಈ ಪ್ರಪಂಚದಲ್ಲಿ ಎಲ್ಲರೂ ಚೆನ್ನಾಗಿ ಓದಿ ಉತ್ತಮ ಕೆಲಸಗಳನ್ನೇ ಮಾಡಲು ಸಾಧ್ಯವಿಲ್ಲ.. ಕೆಲವರು ಮಾರ್ಕೆಟ್, ಹೋಟೆಲ್ ಗಳಲ್ಲಿ ಕಡಿಮೆ ಸಂಬಳಕ್ಕೆ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿರುತ್ತಾರೆ.. ಇದೇ ರೀತಿ ಮುರುಗನ್ ಎಂಬ ವ್ಯಕ್ತಿ ಹೋಟೆಲ್ ಕೆಲಸ ಮಾಡುತ್ತಿದ್ದು ಈತನ ಜೀವನದಲ್ಲಿ ನಡೆದಂತ ಕಥೆಯ ಬಗ್ಗೆ ತಿಳಿದುಕೊಳ್ಳೋಣ.. ಮುರುಗನ್ ಗೆ ವಿದ್ಯಾಭ್ಯಾಸ ತಲೆಗೆ ಹೋಗದ ಕಾರಣ ಚೆನ್ನೈನ ಒಂದು ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ.. ಈ ಹೋಟೆಲ್ ನ ಓನರ್ ಮುರುಗನ್ ಗೆ ನಿನಗೇನಾದ್ರೂ ಅತ್ಯವಶ್ಯಕವಾಗಿ ದುಡ್ಡು ಬೇಕಿದ್ದರೆ ಮಾತ್ರ ನಾನು ಹಣವನ್ನು ಕೊಡುತ್ತೇನೆ ಇಲ್ಲವಾದಲ್ಲಿ ನನ್ನ ಬಳಿ ನೀನು ಹಣವನ್ನು ಕೇಳಬಾರದು ಎಂದು ಕೆಲಸಕ್ಕೆ ಸೇರುವಾಗಲೇ ವಾರ್ನಿಂಗ್ ಮಾಡಿದ್ದ..

Advertisements

ಮುರುಗನ್ ಗೆ ಯಾವುದೇ ರೀತಿ ಮನೆ ಮಠ ಇಲ್ಲದಿದ್ದ ಕಾರಣ ಹೋಟೆಲ್ ನಲ್ಲೇ ಎಲ್ಲಾ ಸೌಲಭ್ಯ ಸಿಗುತ್ತದೆ ಎನ್ನುವ ಕಾರಣಕ್ಕೆ ಓನರ್ ನ ಮಾತನ್ನು ಕೇಳಿ ನಿಯತ್ತಿನಿಂದ ಕೆಲಸ ಮಾಡುತ್ತಿದ್ದ.. ಹೋಟೆಲ್ ನಲ್ಲಿ ಕಸ ಗುಡಿಸುವ ಕೆಲಸದಿಂದ ಹಿಡಿದು ಗ್ರಾಹಕರಿಗೆ ಊಟವನ್ನು ಕೊಟ್ಟು ಪ್ಲೇಟ್ ಗಳನ್ನ ತೊಳೆಯುವ ಕೆಲಸ ಮುರುಗನ್ ಮಾಡುತ್ತಿದ್ದ.. ಅಕಸ್ಮಾತ್ ಮುರುಗನ್ ಊರಿಗೆ ಹೋಗಬೇಕು ಎನ್ನುವ ಸಂದರ್ಭದಲ್ಲಿ ಹಣವನ್ನು ಕೊಡಿ ಎಂದು ಓನರ್ ಗೆ ಕೇಳಿದಾಗ ನೀನು ಊರಿಗೆ ಹೋಗಿ ಏನು ಮಾಡ್ಬೇಕು ಸುಮ್ಮನೆ ಹಣ ಖರ್ಚು ಮಾಡಬೇಡ ಇಲ್ಲೇ ಇರು ಎಂದು ಓನರ್ ಗಲಾಟೆ ಮಾಡುತ್ತಿದ್ದ.. ಈಗೆ ಮೂರು ವರ್ಷ ಕಳೆಯುತ್ತದೆ..

ಇನ್ನು ಮುರುಗನ್ ಜೊತೆ ಕೆಲಸ ಮಾಡುತ್ತಿದ್ದ ಇತರ ಕೆಲಸಗಾರರು ನೀನು ನಿನ್ನ ಸಂಬಳವನ್ನು ಓನರ್ ಹತ್ತಿರ ಕೇಳು ನಿನಗೆ ಮದುವೆಯ ವಯಸ್ಸಾಗಿದೆ ಮದುವೆಯಾಗಬೇಕು.. ಮೂರು ವರ್ಷದಿಂದ ಕಷ್ಟಪಟ್ಟು ಕೆಲಸ ಮಾಡಿದ್ದೀಯಾ ಆದರೆ ಇದುವರೆಗೂ ಓನರ್ ಒಂದು ರೂಪಾಯಿ ಕೊಟ್ಟಿಲ್ಲ ಈಗಲಾದರೂ ಕೇಳು.. ಇಲ್ಲಾ ಬೇರೆಕಡೆ ಕೆಲಸ ನೋಡಿಕೊ ಎಂದು ತುಂಬಾ ಬಾರಿ ಹೇಳಿರುತ್ತಾರೆ ಆದರೆ ಮುರುಗನ್ ಓನರ್ ಬಳಿ ಏನು ಕೇಳುತ್ತಿರಲಿಲ್ಲ.. ಇನ್ನೂ ಹೋಟೆಲ್ ಗೆ ಬರುತ್ತಿದ್ದ ಜನಗಳು ಮುರುಗನ್ ಅವರ ವೇಷಭೂಷಣ ನೋಡಿ ವ್ಯಂಗ್ಯವಾಗಿ ಮಾತಾಡಿಸುತ್ತಿದ್ದರು.. ಮುರುಗನ್ ಅವರು ಮದುವೆ ಮಾಡಿಕೊಂಡು ಜೀವನದಲ್ಲಿ ಸೆಟಲ್ ಹಾಕಬೇಕು ಎಂದು ತುಂಬಾ ಆಸೆಯನ್ನು ಇಟ್ಟುಕೊಂಡಿದ್ದರು..

ಆದರೆ ಹೋಟೆಲ್ ನಲ್ಲಿ ಮುರುಗನ್ ಕೆಲಸ ಮಾಡುತ್ತಿದ್ದಾನೆ ಎಂಬ ವಿಷಯ ಗೊತ್ತಾಗಿ ನಿಶ್ಚಯವಾಗಿದ್ದ ಮದುವೆ ಕೂಡ ಕ್ಯಾನ್ಸಲ್ ಆಗುತ್ತಿತ್ತು.. ಮುರುಗನ್ ಜೀವನದಲ್ಲಿ ಇಷ್ಟೇಲ್ಲಾ ಕಷ್ಟಗಳನ್ನು ಅನುಭವಿಸುತ್ತಿದ್ದಾನೆ ಎಂಬ ವಿಷಯ ಹೋಟೆಲ್ ಓನರ್ ಗೆ ಗೊತ್ತಿದ್ದರೂ ಗೊತ್ತಿಲ್ಲದಂತೆ ಇರುತ್ತಾರೆ.. ಹೀಗೆ ಬರೋಬ್ಬರಿ ಎಂಟು ವರ್ಷ ಕಳೆದು ಹೋಗುತ್ತದೆ.. ಒಂದು ದಿನ ಹೋಟೆಲ್ ಓನರ್ ಮುರುಗನ್ ಅವರನ್ನು ಕರೆದುಕೊಂಡು ಹೋಗಿ ಹೊಸ ಹೋಟೆಲ್ ತೋರಿಸಿ.. ಮುರುಗನ್ ಇಲ್ಲಿ ಹೊಸದಾಗಿ ಹೋಟೆಲ್ ಓಪನ್ ಆಗ್ತಿದೆ ನೀನೆ ಮುಂದೆ ನಿಂತು ಹೋಟೆಲ್ ಗೆ ಬೇಕಾದ ಎಲ್ಲಾ ಅರೆಂಜ್ ಮೆಂಟ್ಸ್ ಮಾಡಿ ಹೊಟೆಲ್ ಅನ್ನು ಸೆಟಪ್ ಮಾಡು ದುಡ್ಡು ಎಷ್ಟು ಖರ್ಚಾದರು ಪರವಾಗಿಲ್ಲ ನಾನು ಕೊಡ್ತೀನಿ ಎಂದು ಹೇಳಿದ..

ನಮ್ಮ ಓನರ್ ಮತ್ತೊಂದು ಹೊಸ ಹೋಟೆಲ್ ಅನ್ನು ಓಪನ್ ಮಾಡ್ತಿದಾರೆ ಎಂದು ಖುಷಿಪಟ್ಟ ಮುರುಗನ್ ಉತ್ತಮವಾಗಿ ನಿರ್ಮಿಸಿದ.. ಮುರುಗನ್ ಗೆ ಸಹಾಯ ಮಾಡಲು ಕೆಲಸಗಾರರನ್ನು ಕೂಡ ಓನರ್ ಕಳಿಸಿದ್ದರು.. ಹೋಟೆಲ್ ಸೆಟಪ್ ಕಾರ್ಯ ಮುಗಿದು ಇನ್ನೇನು ಮೂರು ದಿನಗಳ ನಂತರ ಹೋಟೆಲ್ ಓಪನ್ ಆಗುವ ಕಾರ್ಯಕ್ರಮ ನಿಗದಿಯಾಗಿತ್ತು.. ಆಗ ಓನರ್ ಮುರುಗನ್ ಅವರನ್ನ ತನ್ನ ಬಳಿಗೆ ಕರಿಸಿಕೊಂಡು ಹೋಟೆಲ್ ನ ಸೆಟಪ್ ಕಾರ್ಯ ಹೇಗೆ ನಡೆಯುತ್ತದೆ ಎಂದು ಕೇಳುತ್ತಾರೆ ಆಗ ಮುರುಗನ್ ಎಲ್ಲಾ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳುತ್ತಾನೆ.. ಆಗ ಓನರ್ ಮುರುಗನ್ ಗೆ ಹೊಸದಾಗಿ ಓಪನ್ ಆಗುತ್ತಿರುವ ಹೋಟೆಲ್ ನ ಬೀಗದ ಕೀಗಳನ್ನು ಕೊಟ್ಟು ತಗೋ ಇನ್ನು ಮುಂದೆ ನೀನೆ ಹೊಸ ಹೋಟೆಲ್ ನ ಓನರ್ ಎಂದು ಹೆಳುತ್ತಾರೆ..

ಮುರುಗನ್ ಒಂದು ಕ್ಷಣ ಶಾಕ್ ಆಗಿ ಸರ್ ನಾನು ಓನರ್ ಹಾ ಎಂದು ಕೇಳುತ್ತಾನೆ.. ಹೌದು ಮುರುಗನ್ ನೀನು ಇನ್ನುಮುಂದೆ ಕೆಲಸಗಾರ ಅಲ್ಲ ದೊಡ್ಡ ಹೋಟೆಲ್ ನ ಮಾಲಿಕ.. ನೀನು ಇಷ್ಟು ವರ್ಷಗಳ ಕಾಲ ಕೆಲಸ ಮಾಡಿ ಸಂಬಳವನ್ನೇ ಕೇಳದಿದ್ದಕ್ಕೆ ನಾನು ನಿನಗೆ ಕೊಡುತ್ತಿರುವ ಈ ಉಡುಗೊರೆ ಎಂದು ಹೇಳಿ ಹೊಸ ಹೋಟೆಲ್ ನ ಕೀಗಳನ್ನು ಮುರುಗನ್ ಕೈಯಲ್ಲಿ ಇಡುತ್ತಾರೆ.. ಓನರ್ ಮಾಡಿದ ಈ ಸಹಾಯಕ್ಕೆ ಮುರುಗನ್ ಕಣ್ಣೀರು ಹಾಕುತ್ತಾ ಓನರ್ ನ ಕಾಲಿಗೆ ನಮಸ್ಕಾರ ಮಾಡುತ್ತಾನೆ.. ಹೊಸ ಹೋಟೆಲ್ ನ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತದೆ.. ಹೊಸ ಹೋಟೆಲ್ ಈಗ ಚೆನ್ನಾಗಿ ನಡೆಯುತ್ತಿದ್ದು ಮಾಲಿಕ ಮುರುಗನ್ ಗೆ ಈಗ ಶ್ರೀಮಂತ ಕುಟುಂಬದವರೇ ಬಂದು ಮದುವೆ ಮಾಡಿಕೊಟ್ಟಿದ್ದಾರೆ.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..