ನಮಸ್ತೇ ಸ್ನೇಹಿತರೇ..ನಾವು ನಮ್ಮ ದಾಖಲೆಗಳಿಗಾಗಿ ಸರ್ಕಾರದ ಕಚೇರಿಗಳ ಬಳಿ ಗಂಟೆಗಟ್ಟಲೆ, ದಿನಗಟ್ಟಲೆ ಕಾಯಬೇಕಾಗುತ್ತದೆ. ಆದರೂ ನಮಗೆ ಬೇಕಾದ ದಾಖಲೆಗಳು ಸಿಗುವುದು ಕಷ್ಟ. ಆದರೆ ಈಗ ಆಗಿಲ್ಲ. ಜಗತ್ತು ಮುಂದುವರಿದಂತೆ ತಂತ್ರಜ್ನ್ಯಾನ ಕೂಡ ಮುಂದುವರೆದಿದೆ. ಎಲ್ಲವೂ ನಮ್ಮ ಕೈ ಬೆರಳ ತುದಿಯಲ್ಲಿ ಸಿಗುವಷ್ಟರ ಮಟ್ಟಿಗೆ ತಂತ್ರಜ್ನ್ಯಾನ ಮುಂದುವರೆದಿದೆ. ಇನ್ನು ಈಗಂತೂ ಬಹುತೇಕರ ಬಳಿ ಒಂದಲ್ಲ ಎರಡೆರಡು ಸ್ಮಾರ್ಟ್ ಫೋನ್ ಗಳು ಇದ್ದೆ ಇರುತ್ತವೆ. ಈ ಮೊಬೈಲ್ ನಿಂದ ಜಗತ್ತಿನಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳನ್ನ ಕೂತಲ್ಲಿಯೇ ತಿಳಿಯಬಹುದಾಗಿದೆ. ಇಷ್ಟೇ ಅಲ್ಲ ನೀವು ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಇದ್ದರೆ ಸಾಕು, ಆನ್ಲೈನ್ ಮೂಲಕ ಹಲವಾರು ದಾಖಲೆಗಳ ಮಾಹಿತಿ ಬಗ್ಗೆ ತಿಳಿಯಬಹುದಾಗಿದೆ. ಇನ್ನು ಜಮೀನಿನ ಬಗೆಗಿನ ಮಾಹಿತಿ ತಿಳಿಯಳು ಪಹಣಿ (RTC) ಅವಶ್ಯಕ. ಆದರೆ ಇದೆ ಪಹಣಿಯನ್ನ ನಾವು ಪಡೆಯಲು ಗಂಟೆಗಟ್ಟಲೆ ಕಚೇರಿಗಳ ಮುಂದೆ ಕಾಯಬೇಕು..

ಆದರೆ ಅದರ ಚಿಂತೆ ಬಿಡಿ..ಯಾವುದೇ ಊರಿನಲ್ಲಿರುವ ನಿಮ್ಮ ಆಸ್ತಿ ಹೊಲದ ಬಗೆಗಿನ ಮಾಹಿತಿಯನ್ನ ತುಂಬಾ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ನಿಮ್ಮಲ್ಲಿ ನಿಮ್ಮ ಆಸ್ತಿಗೆ ಸಂಬಂಧಪಟ್ಟ ಸರ್ವೇ ನಂಬರ್ ಇದ್ದರೆ ಸಾಕು. ನಿಮ್ಮ ಮೊಬೈಲ್ ನಲ್ಲೆ ಗೂಗಲ್ ಕ್ರೋಮ್ ಓಪನ್ ಮಾಡಿ. ಬಳಿಕ https://landrecords.karnataka.gov.in ಈ ಅಡ್ರೆಸ್ ಲಿಂಕ್ ನ್ನ ಟೈಪ್ ಮಾಡಿ..ಸರ್ಕಾರದ ಅಧಿಕೃತ ವೆಬ್ಸೈಟ್ ಆದ BHOOMI ಓಪನ್ ಆಗುತ್ತೆ.. ತದನಂತರ ಏನು ಮಾಡಬೇಕೆಂಬ ಸಂಪೂರ್ಣ ಮಾಹಿತಿಗಾಗಿ ಕೆಳಗೆಡೆ ಇರುವ ವಿಡಿಯೋದಲ್ಲಿ ಹೇಳಿರುವಂತೆ ಕ್ರಮವಾಗಿ ಅನುಸರಿಸಿ. ಇದರ ಮೂಲಕ ನಿಮ್ಮ ಜಮೀನಿನ ಸಂಪೂರ್ಣ ಮಾಹಿತಿ, ಜಮೀನಿನ ಅಳತೆ, ಮಾಲೀಕನ ಹೆಸರು ಎಲ್ಲಾ ವಿವರಗಳನ್ನ ತಿಳಿಯಬಹುದಾಗಿದೆ.