Advertisements

ನಿಮ್ಮ ಮನೆಯ ಫ್ರಿಡ್ಜ್ ಕೆಟ್ಟ ವಾಸನೆ ಬರುತ್ತಿದೆಯಾ.? ಹೀಗೆ ಕ್ಲೀನ್ ಮಾಡಿ ನೋಡಿ ಘಮ ಘಮ ವಾಸನೆ ಬರುತ್ತೆ..

Kannada Mahiti

ತಂಗಳು ಪೆಟ್ಟಿಗೆಯೆನ್ನಲಾಗುವ ಫ್ರಿಡ್ಜ್ ನಲ್ಲಿ ತರಕಾರಿ, ಹಣ್ಣುಗಳಿಂದ ಹಿಡಿದು ಮೀನು, ಮೊಟ್ಟೆ,ಮಾಂಸ ಸೇರಿದಂತೆ ಹಾಲು, ಉಳಿದ ಊಟ ತಿಂಡಿ ಹಾಗೂ ಜ್ಯೂಸ್ ಗಳನ್ನ ಇಡಲಾಗುತ್ತದೆ. ಆದರೆ ಕರೆಂಟ್ ತುಂಬಾ ಸಮಯ ಹೋದಾಗ ಅಥ್ವಾ ಫ್ರಿಡ್ಜ್ ತುಂಬಾ ಜಾಸ್ತಿ ಗಲೀಜು ಆಗಿದ್ದರೆ ಫ್ರಿಡ್ಜ್ ನಿಂದ ಒಂದು ರೀತಿಯ ಕೆಟ್ಟ ವಾಸನೆ ಬರುತ್ತದೆ. ಆದರೆ ಈ ವಾಸನೆಯನ್ನ ತೊಲಗಿಸಿ, ಫ್ರಿಡ್ಜ್ ಕ್ಲೀನ್ ಮಾಡುವ ವಿಧಾನ ಹೇಗೆಂದು ನೋಡೋಣ ಬನ್ನಿ..

Advertisements

ನೀವು ಮೊದಲು ನಿಮ್ಮ ಫ್ರಿಡ್ಜ್ ನಲ್ಲಿ ಇಟ್ಟಿರುವ ಎಲ್ಲಾ ವಸ್ತುಗಳನ್ನ ಆಚೆ ತೆಗೆದುಬಿಡಿ. ಜೊತೆಗೆ ಸ್ಟಾಂಡ್, ಬಾಕ್ಸ್ ಗಳನ್ನ ತೆಗೆದು ತೊಳೆಯುವುದಕ್ಕೆ ಹಾಕಿ. ಬಳಿಕ ಒಂದು ಸ್ವಚ್ಛವಾದ ಬಟ್ಟೆಯನ್ನ ತೆಗೆದುಕೊಂಡು ಫ್ರಿಡ್ಜ್ ನ ಒಳಭಾಗವನ್ನ ಚೆನ್ನಾಗಿ ಉಜ್ಜಿ ಕ್ಲೀನ್ ಮಾಡಿ. ಬಳಿಕ ಒಂದು ನಿಂಬೆ ಹಣ್ಣು ಮತ್ತು ಬೇಕಿಂಗ್ ಸೋಡಾ ತೆಗೆದುಕೊಳ್ಳಿ. ಬೌಲ್ ಒಂದನ್ನ ತೆಗೆದುಕೊಂಡು ಅದಕ್ಕೆ ೨ ಚಮಚ ಬೇಕಿಂಗ್ ಸೋಡಾ ಹಾಕಿ. ಅದಕ್ಕೆ ಅರ್ಧ ನಿಂಬೆಹಣ್ಣಿನ ರಸ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.

ಬಳಿಕ ರಸ ಹಿಂಡಿದ ನಿಂಬೆಯ ಸಿಪ್ಪೆ ಇರುತ್ತೆ ಆಲ್ವಾ..ಆ ಸಿಪ್ಪೆಯ ಒಳಭಾಗಕ್ಕೆ ಮಿಕ್ಸ್ ಮಾಡಿದ ಬೇಕಿಂಗ್ ಸೋಡಾ ಮತ್ತು ನಿಂಬೆ ರಸದ ಪೇಸ್ಟ್ ನ್ನ ಅದ್ದಿಕೊಂಡು ಫ್ರಿಡ್ಜ್ ನ ಒಳಭಾಗವನ್ನ ತಿಕ್ಕಿ ಉಜ್ಜಿ. ನಂತರ ಉಗುರು ಬೆಚ್ಚಗಿನ ನೀರನ್ನ ತೆಗೆದುಕೊಂಡು ಅದಕ್ಕೆ ಒಂದು ಬಟ್ಟೆಯನ್ನ ಅದ್ದಿ ಚೆನ್ನಾಗಿ ಹಿಂಡಿದ ಬಳಿಕ ಫ್ರಿಡ್ಜ್ ನ ಒಳಭಾಗವನ್ನ ಒರೆಸಿ. ಬಳಿಕ ಒಣಗಿದ ಬಟ್ಟೆಯನ್ನ ತೆಗೆದುಕೊಂಡು ಮತ್ತೊಮ್ಮೆ ಫ್ರಿಡ್ಜ್ ನ್ನ ಒರೆಸಿ. ನೀವು ತಿಂಗಳಿಗೆ ಒಂದು ಬಾರಿಯಾದರೂ ಹೀಗೆ ಮಾಡುತ್ತಿದ್ದಲ್ಲಿ ಫ್ರಿಡ್ಜ್ ನ ವಾಸನೆ ಓಡಿಹೋಗುತ್ತದೆ.