Advertisements

ಬಾಯಲ್ಲಿ ನೀರೂರಿಸುವ ಸಿಂಪಲ್ ಸ್ಪೈಸಿ ಎಗ್ ಫ್ರೈ ಮಾಡೋ ವಿಧಾನ ಹೇಗೆ ನೋಡಿ

Aduge

ಚಿಕ್ಕವರಿಂದ ಹಿಡಿದು ದೊಡ್ಡವರವರಿಗೂ ತುಂಬಾ ಇಷ್ಟವಾಗುವ ಮೊಟ್ಟೆಯಲ್ಲಿ ಯಥೇಚ್ಛವಾದ ಪ್ರೊಟೀನ್ ಅಂಶಗಳು ಇವೆ. ಮೊಟ್ಟೆಯಲ್ಲಿ ವಿಭಿನ್ನವಾದ ಅಡುಗೆಗಳನ್ನ ಮಾಡಬಹುದು. ಇನ್ನು ಮನೆಯಲ್ಲಿ ಚಿಕನ್, ಮಟನ್ ಮಾಡಿದಾಗ ಅದರ ಜೊತೆಗೆ ಸ್ಪೈಸಿಯಾಗಿ ಎಗ್ ಪೆಪ್ಪರ್ ಫ್ರೈ ಮಾಡಿದ್ರೆ ಕಾಂಬಿನೇಷನ್ ಸೂಪರ್ ಆಗಿ ಇರುತ್ತೆ. ಹಾಗಾದ್ರೆ ತುಂಬಾ ಸಿಂಪಲ್ ಆಗಿ ಎಗ್ ಪೆಪ್ಪರ್ ಫ್ರೈ ಮಾಡೋದು ಹೇಗೆ ಅಂತ ನೋಡೋಣ ಬನ್ನಿ..

Advertisements

ಬೇಕಾಗುವ ಸಾಮಗ್ರಿಗಳು : ಆರು ಮೊಟ್ಟೆಗಳು, ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎರಡರಿಂದ ಮೂರೂ ಚಮಚ ಎಣ್ಣೆ, ಮೆಣಸು 2 ಸ್ಪೂನ್, ಈರುಳ್ಳಿ ೧, ಒಂದು ಚಿಟಿಕೆಯಷ್ಟು ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಜೊತೆಗೆ ಸ್ವಲ್ಪ ಕೊತ್ತಂಬರಿ ಸೊಪ್ಪು.

ಎಗ್ಗರ್ ಪೆಪ್ಪರ್ ಫ್ರೈ ಮಾಡೋ ವಿಧಾನ ಹೇಗೆ ನೋಡಿ : ಮೊದಲಿಗೆ ಮೊಟ್ಟೆಗಳನ್ನ ಒಂದು ಪಾತ್ರೆಯಲ್ಲಿ ಹಾಕಿ ನೀರಿನ ಜೊತೆಗೆ ಸ್ವಲ್ಪ ಉಪ್ಪನ್ನು ಹಾಕಿ ಬೇಯಿಸಿಕೊಳ್ಳಿ. ಬೆಂದ ನಂತರ ಮೊಟ್ಟೆಗಳ ಸಿಪ್ಪೆ ಬಿಡಿಸಿ, ಎರಡು ಭಾಗವಾಗುವಂತೆ ಕಟ್ ಮಾಡಿಕೊಳ್ಳಿ. ಬಳಿಕ ಪಾತ್ರೆಯೊಂದನ್ನ ತೆಗೆದುಕೊಂಡು ಎರಡು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಬಳಿಕ ಕಟ್ ಮಾಡಿದ ಮೊಟ್ಟೆಗಳನ್ನ ಅದರೊಳಗಡೆ ಹಾಕಿ ಒಂದು ನಿಮಿಷ ಫ್ರೈ ಮಾಡಿ. ಇದಾದ ಬಳಿಕ ಮೊಟ್ಟೆಗಳನ್ನ ಉಲ್ತಾ ಮಾಡಿ ಬ್ರೌನ್ ಕಲರ್ ಬರುವ ತನಕ ಫ್ರೈ ಮಾಡಿ. ತದನಂತರ ಆ ಮೊಟ್ಟೆಗಳನ್ನ ಒಂದು ಪ್ಲೇಟ್ ನಲ್ಲಿ ಎತ್ತಿಡಿ.

ಈಗ ಅದೇ ಪಾತ್ರೆಗೆ ಈರುಳ್ಳಿ ಹಾಕಿ ಫ್ರ್ಯ್ ಮಾಡಿ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಿಟಿಕೆ ಹರಿಶಿನ ಹಾಕಿ. ಬಳಿಕ ಅದಕ್ಕೆ ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಇದಾದ ಮೇಲೆ ಇದರ ಜೊತೆಗೆ ಮೆಣಸಿನ ಪುಡಿ ಸೇರಿಸಿ ಮಿಕ್ಸ್ ಮಾಡಿ. ಬಳಿಕ ಈ ಮೊದಲೇ ಎತ್ತಿಟ್ಟಿಕೊಂಡಿರುವ ಫ್ರೈ ಮಾಡಿದ ಮೊಟ್ಟೆಗಳನ್ನ ಹಾಕಿ, ಮೆಣಸಿನ ಪುಡಿ ಹಾಕಿ ಫ್ರೈ ಮಾಡಿ.ಕೊನೆಯದಾಗಿ ನೀವು ಈ ಮೊದಲೇ ಸಣ್ಣಗೆ ಹಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪನ್ನ ಅದರೊಳಗಡೆ ಹಾಕಿ ಮಿಕ್ಸ್ ಮಾಡಿ. ಈಗ ಸ್ಪೈಸಿಯಾದ ಎಗ್ ಪೆಪ್ಪರ್ ಫ್ರೈ ತಿನ್ನಲು ರೆಡಿ.