Advertisements

ಹೊಟೆಲ್ ಶೈಲಿಯ ಇಡ್ಲಿ ಸಾಂಬಾರ್ ಸಖತ್ ಈಸಿಯಾಗಿ ಮನೆಯಲ್ಲೇ ಮಾಡೋ ವಿಧಾನ

Aduge

ನಮಸ್ಕಾರ ಸ್ನೇಹಿತರೆ, ಇತೀಚೆಗಷ್ಟೇ ನಾನು ನಮ್ಮ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದೆ. ಅವರ ಮನೆಯಲ್ಲಿದ್ದಾ ಪುಟ್ಟ ಮಗನೊಬ್ಬ ಒಂದೇ ಸಮನೆ  ಹಠ ಮಾಡುತ್ತಿದ್ದ. ಆ ಪುಟ್ಟ ಹುಡುಗ ಹೇಳುತ್ತಿದ್ದ, ನಾವು ಹೋಟೆಲ್ ಗೆ  ಹೋಗಿದ್ದಾಗ  ಅಲ್ಲಿ ಇಡ್ಲಿ ಜೊತೆ ಕೊಟ್ಟಿದ್ದ ಸಾಂಬಾರ್ ಏನ್ ಸಖತ್ ಆಗಿ ಇತ್ತು. ಆದ್ರೆ ಮನೆಯಲ್ಲಿ ಮಾಡಿರೋ ಸಾಂಬರ್ ಆ ಟೇಸ್ಟೇ ಇಲ್ಲವಲ್ಲ. ಇದನ್ನ ತಿನ್ನೋಕ್ಕೆ ಬೇಜಾರುಗುತ್ತೆ ಎಂದು ಹೇಳುತ್ತಿದ್ದ. ಹೌದು, ಚಿಕ್ಕವಯಸ್ಸಿನ ಮಕ್ಕಳಿಗೆ ಈ ರೀತಿಯ ಹೋಟೆಲ್ ರುಚಿ ಹತ್ತಿದರೆ ಮನೆಯಲ್ಲಿ ಮಾಡೋ ಯಾವ ಅಡುಗೆ ಕೂಡ ಅವರ ಬಾಯಿಗೆ ರುಚಿಸುವುದಿಲ. ಇದು ಕೇವಲ ಚಿಕ್ಕ ಮಕ್ಕಳಲ್ಲದೆ ದೊಡ್ಡವರಿಗೂ ಕೂಡ. ಕೊನೆಗೆ ಆ ಹುಡುಗನಿಗೆ ಹೋಟೆಲ್ ನಿಂದಲೇ ಇಡ್ಲಿಗೆ ಬೇಕಾದ ಸಾಂಬಾರ್ ತರಿಸಿಕೊಟ್ಟರು. ಹಾಗಾದ್ರೆ ಥೇಟ್ ಹೋಟೆಲ್ ಸ್ಟೈಲಿಯ ಇಡ್ಲಿ ಸಾಂಬಾರ್ ಮನೆಯಲ್ಲೇ ಮಾಡಿದ್ರೆ ಹೇಗಿರುತ್ತೆ ? ಮಾಡೋದು ಹೇಗೆ ಅಂತ ನೋಡೋಣ ಬನ್ನಿ..

Advertisements

ಬೇಕಾದ ಸಾಮಗ್ರಿಗಳು : ಆಲೂಗಡ್ಡೆ, ಟೊಮೊಟೊ, ಹುರುಳಿಕಾಯಿ, ಕ್ಯಾರೆಟ್ ಸೇರಿದಂತೆ 1 ಕಪ್ ಹೆಚ್ಚಿದ ತರಕಾರಿ, ತೊಗರಿಬೇಳೆ 1 ಕಪ್, ಬೆಲ್ಲ 1/2 ಸ್ಪೂನ್, ಈರುಳ್ಳಿ 2, ಎಣ್ಣೆ 2 ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ, ಕರಿಬೇವು (ಉದ್ದಿನ ಬೇಳೆ 1 ಸ್ಪೂನ್, ಕಡ್ಲೆಬೇಳೆ 1 ಸ್ಪೂನ್, ಕೊಬ್ಬರಿ ತುರಿ 1 ಸ್ಪೂನ್, ದನಿಯ 2 ಸ್ಪೂನ್, ಬ್ಯಾಡಗಿ ಮೆಣಸಿನಕಾಯಿ 6  ರಿಂದ 8,  ಒಂದು ಚಿಟಕಿ ಇಂಗು, ಚಕ್ಕೆ 2, ಲವಂಗ 4 ) ಬ್ರಾಕೆಟ್ ನಲ್ಲಿರುವ ಪದಾರ್ಥಗಳನ್ನ ಹುರಿದು ಪುಡಿ ಮಾಡಿಟ್ಟುಕೊಳ್ಳಿ.

ಮಾಡುವ ವಿಧಾನ ಹೇಗೆಂದು ನೋಡೋಣ ಬನ್ನಿ ಮೊದಲಿಗೆ ತೊಗರಿಬೇಳೆಯನ್ನ ನೆನೆಸಿಟ್ಟುಕೊಂಡಿರಿ. ಬಳಿಕ ತರಕಾರಿ ಮತ್ತು ನೆನಸಿಟ್ಟ ತೊಗಾರಿಬೇಳೆಯನ್ನ ಕುಕ್ಕರ್ ನಲ್ಲಿ ಹಾಕಿ ಬೇಯಿಸಿ. ಬಳಿಕ ಸ್ಟವ್ ಮೇಲೆ ಪಾತ್ರೆ ಇಟ್ಟು, ಸ್ವಲ್ಪ ಬಿಸಿಯಾದ ನಂತರ ಎರಡು ಚಮಚ ಎಣ್ಣೆ ಹಾಕಿ ಅದು ಬಿಸಿಯಾದ ಬಳಿಕ ಕರಿಬೇವು, ಬ್ಯಾಡಗಿ ಮೆಣಸಿನಕಾಯಿಗಳನ್ನ ಅದರಲ್ಲಿ ಹಾಕಿ ಫ್ರೈ ಮಾಡಿ. ಹಾಗೆಯೆ ಸ್ವಲ್ಪ ಇಂಗು ಮತ್ತು ಹಚ್ಚಿಟ್ಟುಕೊಂಡಾ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ. ಇದೆಲ್ಲ ಆದ ಬಳಿಕ ಈಗಾಗಲೇ ಬೇಯಿಸಿಟ್ಟಿಕೊಂಡಿರುವ ತೊಗರಿ ಬೇಳೆ ಮತ್ತು ತರಕಾರಿಯನ್ನ ಅದರಲ್ಲಿ ಹಾಕಿ, ಇದರ ಹಿಂದೆಯೇ ಪುಡಿ ಮಡಿದ ಪದಾರ್ಥಗಳನ್ನ ಹಾಕಿ. ಅದಕ್ಕೆ ಬೇಕಾದಷ್ಟು ಮಾತ್ರ ನೀರು ಹಾಕಿ ಕುಡಿಯಲು ಬಿಡಿ. ಕೂಡಿದೆ ಅಂತ ನಿಮಗೆ  ಗೊತ್ತಾಗುತ್ತಿದ್ದಂತೆ ಬೆಲ್ಲ ಮತ್ತು ಹುಣಸೆ ಉಳಿ ಹಾಕಿ ಮತ್ತೆ ಕುದಿಸಿರಿ. ಈಗ ಗಮ ಗಮ ಎನ್ನುವ ಹೋಟೆಲ್ ಸ್ಟೈಲಿಯ ಇಡ್ಲಿ ಸಾಂಬಾರ್ ರೆಡಿ.