Advertisements

ಹಾಲಿದ್ದರೆ ಸಾಕು ರುಚಿಯಾದ ಕೇಸರ್ ಬಾದಾಮ್ ಕುಲ್ಫಿ ರೆಡಿ. ಮಾಡುವ ವಿಧಾನ ನೋಡಿ!

Aduge

ಹಲವರ ಮನೆಯಲ್ಲಿ  ಬಾದಾಮ್ ಕುಲ್ಫಿ ಮಾಡಿರುತ್ತೀರಾ ಆದರೆ, ನಾವು ತಿಳಿಸಿಕೊಡುವ ಕೇಸರ್ ಬಾದಾಮ್ ಕುಲ್ಫಿ ಸ್ವಲ್ಪ ಚೇಂಜಸ್ ಇದೆ ಬಹಳ ರುಚಿಯಾಗಿ ಕೂಡ ಇರುತ್ತದೆ ಒಮ್ಮೆ ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನಿಮ್ಮ ಕುಟುಂಭದ ಜೊತೆ ಸವಿಯಿರಿ.

Advertisements

ಕೇಸರ್ ಬಾದಾಮ್ ಕುಲ್ಫಿ ಮಾಡುವ ವಿಧಾನ : ಮೊದಲಿಗೆ ಒಂದು ದೊಡ್ಡ ಕ್ಯಾರಟ್ ಅನ್ನು ತೆಗೆದುಕೊಂಡು ಸಿಪ್ಪೆಯನ್ನು ತೆಗೆಯಿರಿ ಸಿಪ್ಪೆಯನ್ನ ತೆಗೆದ ಕ್ಯಾರಟ್ ನ ಜೊತೆಗೆ ಸ್ವಲ್ಪ ಹಾಲನ್ನು ಹಾಕಿ ಕುಕ್ಕರಿನಲ್ಲಿ ಬೇಯಿಸಿ ಇದನ್ನು ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ನಂತರ ನಿಮಗೆ ಎಷ್ಟು ಬೇಕೋ ಅಷ್ಟು ಬಾದಾಮಿ, ಪಿಸ್ತಾ, 3 ಏಲಕ್ಕಿ, ಸ್ವಲ್ಪ ಕೇಸರಿ ಇಷ್ಟನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿರಿ.

 

ನಂತರ ಒಂದು ದೊಡ್ಡ ಪಾತ್ರೆಗೆ ಒಂದೂವರೆ ಲೀಟರ್ ದಪ್ಪ ಕ್ರೀಮ್ ಹಾಲನ್ನು ಕುದಿಸಿ, ಚೆನ್ನಾಗಿ ಕುದಿದ  ನಂತರ ಒಂದು ಕಪ್ ನಷ್ಟು ಸಕ್ಕರೆ ಅಥವಾ ನಿಮೆಗೆ ಸಿಹಿ ಎಷ್ಟು ಬೇಕೋ ಅಷ್ಟು ಸಕ್ಕರೆ ಹಾಕಿಕೊಳ್ಳಿ, ಅದಕ್ಕೆ ನೀವು ಪುಡಿ ಮಾಡಿಕೊಂಡ ಪಿಸ್ತಾ, ಬಾದಾಮಿ ಪುಡಿಯನ್ನು ಹಾಕಿ, ಸ್ವಲ್ಪ ಮೊದಲು ಹಾಲಿನಲ್ಲಿ ನೆನೆಸಿಟ್ಟ ಕೇಸರಿಯನ್ನು ಹಾಕಿ. ನಂತರ ಬೇಯಿಸಿಕೊಂಡ ಕ್ಯಾರಟ್ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ದಪ್ಪ ಆಗೋವವರೆಗೂ ಕುದಿಸಿ ಆರಲು ಬಿಟ್ಟುಬಿಡಿ.

ನಂತರ ಇದನ್ನು ಕುಲ್ಫಿಯ ಮೌಲ್ಡ್ ಅಥವಾ ಚಿಕ್ಕದಾದ ಲೋಟಗಳಿಗೆ ಹಾಕಿ ಫುಡ್ wrap ಅನ್ನು ಸುತ್ತಿ. deep ಫ್ರೀಜರ್ ನಲ್ಲಿಎಂಟು ಅಥವಾ ಹತ್ತು ಗಂಟೆಗಳ ಕಾಲ ಇಡಿ. ನಂತರ ನೀವು ಸುತ್ತಿರುವ wrap ಅನ್ನು ತೆಗೆದು ಐಸ್ ಕ್ರೀಮ್ ಕಡ್ಡಿಯನ್ನು ಚುಚ್ಚಿ ಐದು ನಿಮಿಷ ಬಿಟ್ಟು ದಿಮೌಲ್ಡ್ ಮಾಡಿ ತೆಗೆದು ಬಾದಾಮಿ ಪಿಸ್ತಾ ಚೂರುಗಳಿಂದ ಅಲಂಕಾರ ಮಾಡಿ ಈಗ ನಿಮ್ಮ ರುಚಿ ರುಚಿಯಾದ ಕೇಸರ್ ಬಾದಾಮ್ ಕುಲ್ಫಿ ಯನ್ನು ನಿಮ್ಮ ಕುಟುಂಭದ ಜೊತೆಯಲ್ಲಿ ಸವಿಯಲು ಸಿದ್ದರಾಗಿ.

ವಿಶೇಷ ಸೂಚನೆ : ಕ್ಯಾರೆಟ್ ಪೇಸ್ಟ್ ಅನ್ನು ಬಳಸಿ ಕುದಿಸುವುದರಿಂದ ಒಳ್ಳೆಯ ಕಲರ್ ಮತ್ತು ದಪ್ಪ ಕೊಡತ್ತೆ, ಹಾಗೂ ಇದರ ರುಚಿಯೂ ಕೂಡ ತುಂಬಾ ರುಚಿಕರವಾಗಿರುತ್ತದೆ.