Advertisements

ಈ ತರ ಮನೇಲಿ ಚಿಕನ್ ನಾ ಪ್ರೈ ಮಾಡಿದ್ರೆ ಪ್ರತಿ ಸಲ ಇದೇ ತರ ಮಾಡಿಸಿಕೊಂಡು ತಿಂತಾರೆ

Aduge Uncategorized

ಸಾಮಾನ್ಯವಾಗಿ ಚಿಕನ್ ಬಹುತೇಕರು ಇಷ್ಟಪಡುತ್ತಾರೆ. ಇನ್ನು ಚಿಕನ್ ನಲ್ಲಿ ಹಲವಾರು ಬಗೆಯ ವಿಭಿನ್ನವಾದ ಖಾದ್ಯಗಳನ್ನ ಮಾಡಬಹುದು. ಅದರಲ್ಲೂ ಚಿಕನ್ ನಲ್ಲಿ ಮಾಡುವ ಚಿಕನ್ ಬಿರಿಯಾನಿ, ಕಬಾಬ್, ಚಿಕನ್ ಫ್ರೈ ಗಳು ಎಂದರೆ ಚಿಕನ್ ಪ್ರಿಯರಿಗೆ ತುಂಬಾ ಇಷ್ಟ. ಇನ್ನು ಬಿರಿಯಾನಿ ಜೊತೆಗೆ ಚಿಕನ್ ಫ್ರೈ ಇದ್ದಾರೆ ತುಂಬಾ ಟೇಸ್ಟಿಯಾಗಿ ಇರುತ್ತದೆ. ನೀವು ಒಂದು ಸಾರಿ ಈ ಚಿಕನ್ ಫ್ರೈ ನ್ನ ಟ್ರೈ ಮಾಡಿದ್ರೆ ಮನೆಯಲ್ಲಿರುವವರು ಮತ್ತೆ ಮತ್ತೆ ಮಾಡಿಸಿಕೊಂಡು ತಿಂತಾರೆ..ಅಷ್ಟರಮಟ್ಟಿಗೆ ಟೇಸ್ಟಿಯಾಗಿರುತ್ತೆ. ಇನ್ನು ನೀವು ಚಿಕನ್ ತಂದಾಗ ಪದೇ ಪದೇ ಒಂದೇ ತರದ ಅಡುಗೆ ಮಾಡೋದಕ್ಕಿಂತ ಈ ರೀತಿಯಾಗಿ ವಿಭಿನ್ನವಾಗಿ ಟ್ರೈ ಮಾಡಿ ನೋಡಿ.. ಹಾಗಾದರೆ ನಿಮ್ಮ ಮನೆಯಲ್ಲಿ ತುಂಬಾ ಸೂಪರ್ ಡೂಪರ್ ಆಗಿರೋ ಚಿಕನ್ ಫ್ರೈ ನ್ನ ಮನೆಯಲ್ಲಿ ಮಾಡೋದು ಹೇಗೆ ಅಂತ ಈ ವಿಡಿಯೋದಲ್ಲಿ ನೋಡೋಣ ಬನ್ನಿ..

ಇನ್ನು ಚಿಕನ್ ಬಿರಿಯಾನಿ ಪ್ರೇಮಿಗಳು ತುಂಬಾ ಇದ್ದಾರೆ. ಟೇಸ್ಟಿಯಾದ ಚಿಕನ್ ಬಿರಿಯಾನಿ ಸಿಗುತ್ತೆ ಎಂದರೆ, ಹೋಟೆಲ್, ಡಾಬಾಗಳು ಎಲ್ಲೇ ಇದ್ದರೂ ಸರಿಯೇ ಹುಡುಕಿಕೊಂಡು ಹೋಗಿ ತಿನ್ನುವವರು ತುಂಬಾ ಜನರಿದ್ದಾರೆ. ಆದರೆ ಮನೆಯಲ್ಲೇ ಸಿಂಪಲ್ ಆಗಿ ಟೇಸ್ಟಿ ಚಿಕನ್ ಬಿರಿಯಾನಿಯನ್ನ ನೀವು ಮಾಡಿಕೊಂಡು ಸವಿಯಬಹುದು. ಇನ್ನು ಬ್ಯಾಚುಲರ್ಸ್ ಕೂಡಾ ಬಿರಿಯಾನಿಯನ್ನ ಸುಲಭವಾಗಿ ಮಾಡಿಕೊಳ್ಳಬಹುದು. ಹಾಗಾದ್ರೆ ಮದ್ದೋಡು ಹೇಗೆ ಅಂತ ನೋಡೋಣ ಬನ್ನಿ..

ಚಿಕನ್ ಬಿರಿಯಾನಿ ಮಾಡಲು ಬೇಕಾದ ಪದಾರ್ಥಗಳು : ಚಿಕನ್ 1/2 kg , ಈರುಳ್ಳಿ 2, ಹಸಿ ಮೆಣಸಿನಕಾಯಿ 2, ಯಾಲಕ್ಕಿ 4, ಕರಿಮೆಣಸು 6, ಲವಂಗ 6, ಚಕ್ಕೆ 2, ಬಿ ಲೀಫ್ 1, ಮರಾಠಿ ಮೊಗ್ಗು 2, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ 1 ಚಮಚ, ಗರಂ ಮಸಾಲಾ 1/2 ಚಮಚ, ಹರಿಶಿನ 1/2 ಸ್ಪೂನ್, ಬಿರಿಯಾನಿ ಪೌಡರ್ 1 ಚಮಚ, ಪುದಿನ ಹಾಗೂ ಮೊಸರು 1/2 ಕಪ್..