Advertisements

ಮಹಾಮಾರಿ ಕರೋನ ಸೋಂಕಿಗೆ ಐಡಿಯಾ ಕೊಟ್ಟ ಹುಚ್ಚ ವೆಂಕಟ್ ! ಸರ್ಕಾರಕ್ಕೆ ಹೇಳಿದ್ದೇನು ಗೊತ್ತಾ?

Cinema

ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟೇಶ್ ಈಗ ಕರೋನಾ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ‘ನನ್ ಮಗಂದ್, ನನ್ ಎಕ್ಕಡ ಡೈಲಾಗ್’ನಿಂದಲೆ ಫೇಮಸ್ ಆಗಿರುವ ಹುಚ್ಚ ವೆಂಕಟ್ ಈಗ ಮಹಾಮಾರಿ ಕರೋನಾ ನಿಯಂತ್ರಣದ ಕುರಿತು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಇಡೀ ಜಗತ್ತಿನಾದ್ಯಂತ ಲಕ್ಷಾಂತರ ಜನರು ಈ ಮಹಾಮಾರಿ ಸೋಂಕಿನಿಂದಾಗಿ ಬಳಲುತ್ತಿದ್ದಾರೆ. ಇನ್ನು ಜಗತ್ತಿನ ಯಾವುದೇ ದೇಶವು ಈ ಸೋಂಕಿಗೆ ಲಸಿಕೆ ಕಂಡುಹಿಡಿಯಲು ಆಗಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಹುಚ್ಚ ವೆಂಕಟ್ ಕರೋನ ಪತ್ತೆ ಹಚ್ಚುವಿಕೆಯ ಕುರಿತು ಸರ್ಕಾರಕ್ಕೆ ಐಡಿಯಾವೊಂದನ್ನ ನೀಡಿದ್ದಾರೆ.

ಇನ್ನು ಕರೋನಾ ಕುರಿತಂತೆ ವೀಡಿಯೊ ಮಾಡಿರುವ ವೆಂಕಟ್, ನಾನು ಈಗ ಹೇಳುತ್ತಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಸರ್ ಮತ್ತು ಪ್ರಧಾನಿ ನರೇದ್ರ ಮೋದಿಯವರಿಗೆ. ಇಸ್ರೋ ವಿಜ್ನ್ಯಾನಿಗಳು ಸೇರಿದಂತೆ ಹಲವಾರು ವಿಜ್ನ್ಯಾನಿಗಳು ಹೊಸ ಹೊಸ ಆವಿಷ್ಕಾರ ಮಾಡಿದ್ದಾರೆ. ಏನೇನೋ ಕಂಡುಹಿಡಿದಿದ್ದಾರೆ. ಹೇಗೆ ಬಿಪಿಯನ್ನ ಚೆಕ್ ಮಾಡಲು ಸಣ್ಣ ಯಂತ್ರ ಇದೆಯೋ, ಅದೇ ರೀತಿ ಕರೋನಾ ಪತ್ತೆಗೆ ಒಂದು ಯಂತ್ರ ಕಂಡುಹಿಡಿಯಬೇಕು ಎಂದು ಹೇಳಿದ್ದಾರೆ.

Advertisements

ಇದರಿಂದ ಸುಲಭವಾಗಿಯೇ ನಾವು ನಮ್ಮ ನಮ್ಮ ಮನೆಗಳಲ್ಲಿಯೇ ಕುಳಿತು ಕರೋನಾ ಇದೆಯೇ ಇಲ್ಲವೋ ಎಂಬುದನ್ನ ಚೆಕ್ ಮಾಡಿಕೊಳ್ಳಬಹುದು. ಇದರಿಂದ ಸೋಂಕು ಇರುವುದು ಬೇಗ ಪತ್ತೆಯಾಗುವುದರಿಂದ ತಕ್ಷಣವೇ ಆಸ್ಪತ್ರೆಗೆ ಹೋಗಬಹುದು. ಇದರಿನ ಮಹಾಮಾರಿ ಕರೋನಾ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಹರಡುವುದು ನಿಯಂತ್ರಣಕ್ಕೆ ಬರುತ್ತದೆ. ಇಸ್ರೋ ವಿಜ್ನ್ಯಾನಿಗಳು ಹಾಗೂ ವೈದ್ಯರು ಸೇರಿ ಇಂತಹದೊಂದು ಯಂತ್ರವನ್ನ ಕಂಡುಹಿಡಿಯಬೇಕು ಎಂದು ಹುಚ್ಚ ವೆಂಕಟ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.