Advertisements

ಕುದಿಯುವ ಪಾಯಸಕ್ಕೆ ಕೈ ಹಾಕಿ ಈ ದೇವಿಗೆ ನೈವೇದ್ಯ! ಹುಲಿಗೆಮ್ಮ ದೇವಿಯ ಪವಾಡಗಳ ರಹಸ್ಯ..

Temples

ಪ್ರಿಯ ಓದುಗರೆ ಶ್ರೀ ರೇಣುಕಾ ಎಲ್ಲಮ್ಮನ ಮತ್ತೊಂದು ರೂಪವೇ ಈ ಹುಲಿಗೆಮ್ಮನ ಅವತಾರ. ಈ ತಾಯಿ ಹಿಂದಿನ ಕಾಲದಿಂದಲೂ ಅಪಾರ ಪವಾಡಗಳನ್ನು ನಡೆಸುತ್ತಾ ಇಂದಿಗೂ ಲಕ್ಷಾಂತರ ಭಕ್ತರನ್ನು ಹೊಂದಿದ್ದಾಳೆ. ಹಿಂದಿನಿಂದಲೂ ಕುದಿಯುವ ಪಾಯಸ ದಿಂದ ಕೈಹಾಕಿ ಪಾಯಸ ತೆಗೆದು ನೈವೇದ್ಯ ಮಾಡುತ್ತಿದ್ದು ಇಲ್ಲಿ ಪವಾಡವೇ ಸರಿ. ಹೀಗೆ ನಡೆದ ಕೆಲ ಪವಾಡಗಳ ಕುರಿತು ನಾವು ನಿಮಗೆ ಇಂದು ಹೇಳ್ತೀವಿ. ಈ ಲೇಖನವನ್ನು ಪೂರ್ತಿಯಾಗಿ ಓದಿ. ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಹುಲಿಗಿ ಗ್ರಾಮದಲ್ಲಿ ನೆಲೆಸಿದ್ದಾಳೆ ಹುಲಿಗೆಮ್ಮ ತಾಯಿ. ಈ ಗ್ರಾಮವನ್ನು ಮೊದಲು “ವ್ಯಾಗಪುರಿ” ಎಂದು ಕರೆಯುತ್ತಿದ್ಫು, ಈ ತಾಯಿಯನ್ನು ಸಹ ‘ವ್ಯಾಗೇಶ್ವರಿ’ ಅಂತಲೂ ಕರೆಯುತ್ತಿದ್ದರು. ಇದು 13ನೇ ಶತಮಾನದಲ್ಲಿ ನಿರ್ಮಾಣವಾದ ದೇವಸ್ಥಾನವಾಗಿದೆ. ಇದಕ್ಕೆ 800 ವರ್ಷಗಳ ಇತಿಹಾಸವಿದೆ. ತುಂಗಭದ್ರಾ ನದಿ ತೀರದಲ್ಲಿ ನೆಲೆನಿಂತ ಹುಲಿಗೆಮ್ಮನಿಗೆ ಭಾರತ ಹುಣ್ಣಿಮೆಯಂದು ವಿಶೇಷ ಪೂಜೆಗಳು ಸಲ್ಲುತ್ತವೆ. ಅಂದಿನಿಂದ ಆರಂಭವಾಗುವ ಒಂಬತ್ತು ದಿನಗಳ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ.

Advertisements

ಇನ್ನೊಂದು ವಿಶೇಷವೆಂದರೆ ಇಲ್ಲಿ ದೇವಿಗೆ ಭಕ್ತಾದಿಗಳು ಬಯಲಲ್ಲೇ ಒಲೆ ಹೂಡಿ ಪಾಯಸ ಮಾಡುತ್ತಾರೆ. ಈ ಕುದಿಯುವ ಪಾಯಸದಲ್ಲಿ ಕೈಹಾಕಿ ತೆಗೆದು ಪಾಯಸವನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಇದು ಇಲ್ಲಿಯ ಭಕ್ತರು ಆ ತಾಯಿಯನ್ನು ನಂಬಿದ್ದರ ಪ್ರತೀಕ ಎನ್ನಬಹುದು. ಹಾಗೆ ವಿಜಯದಶಮಿ, ಮಂಗಳವಾರ, ಶುಕ್ರವಾರದಂದು ಅಪಾರ ಭಕ್ತರು ಆಗಮಿಸಿ ಹುಲಿಗೆಮ್ಮನ ದರ್ಶನ ಪಡೆಯುತ್ತಾರೆ. ಈ ತಾಯಿ ನೆಲೆಸಿದ್ದಕ್ಕೂ ಒಂದು ಪುರಾಣ ಇತಿಹಾಸವಿದೆ. ಹೌದು.. ಹುಲಿಗಿ ಗ್ರಾಮದಲ್ಲಿ ನಾಗಜ್ಯೋತಿ ಮತ್ತು ಬಸವಜ್ಯೋತಿ ಎಂಬ ಅಣ್ಣತಮ್ಮಂದಿರು ಎಲ್ಲಮ್ಮನ ಭಕ್ತರಾಗಿದ್ದರು. ಅವರು ಪ್ರತಿ ಹುಣ್ಣಿಮೆಯಂದು ಸೌದತ್ತಿಗೆ ಹೋಗಿ ಯಲ್ಲಮ್ಮನ ದರ್ಶನ ಪಡೆಯುತ್ತಿದ್ದರು. ಆದರೆ ಒಂದು ಹುಣ್ಣಿಮೆ ಜೋರಾಗಿ ಬಂದ ಮಳೆಯಿಂದಾಗಿ ದಾರಿ ಮಧ್ಯದಲ್ಲಿ ಇವರು ಎಲ್ಲಮ್ಮನ ಧ್ಯಾನದಲ್ಲಿ ಕುಳಿತುಕೊಂಡು ಬಿಡುತ್ತಾರೆ.

ಆಗ ರೇಣುಕಾ ಎಲ್ಲಾಮ್ಮ ಸಹೋದರರ ಧ್ಯಾನಕ್ಕೆ ಮೆಚ್ಚಿ ಪ್ರತ್ಯಕ್ಷಳಾಗುತ್ತಾಳೆ. ‘ಇನ್ನು ಮುಂದೆ ನನ್ನ ದರ್ಶನಕ್ಕೆಂದು ಪ್ರತಿ ಹುಣ್ಣಿಮೆಯಂದು ಸೌದತ್ತಿಗೆ ಬರಬೇಡಿ. ನಾನೇ ನಿಮ್ಮಲ್ಲಿಗೆ ನ್ಯೂ ಇರುವ ಗ್ರಾಮದಲ್ಲಿ ಬಂದು ನಡೆಸುತ್ತೇನೆ ಎಂದು ಹೇಳಿದಳಂತೆ.ಅದೇ ರೀತಿ ಹುಲಿಗೆಮ್ಮನಾಗಿ ಹುಲಿಗಿಯಲ್ಲಿ ರೇಣುಕಾದೇವಿ ನೆಲೆಸಿದಳು. ಹುಲಿಗೆಮ್ಮನ ದೇವಸ್ಥಾನದ ಮುಂದೆ ಮಾತಂಗಿ, ಪರಶುರಾಮ, ಸುಬ್ರಹ್ಮಣ್ಯ ಸ್ವಾಮಿ, ಪಾರ್ವತಿ, ಗಣಪತಿ ಸೇರಿದಂತೆ ನವಗ್ರಹಗಳ ದೇವಸ್ಥಾನಗಳಿವೆ. ಈ ದೇವಸ್ಥಾನವನ್ನು ಹಿಂದೆ ಚತುರ್ವೇದಿ ಭಟ್ಟನಿಗೆ ಚಾಲುಕ್ಯ ರಾಜ ವಿಕ್ರಮ ರಾಜ ಉಡುಗೊರೆಯಾಗಿ ನೀಡಿದ್ದ ಎನ್ನಲಾಗಿದೆ. 25 ಅಡಿ ಎತ್ತರದ ಧ್ವಜಸ್ತಂಭವು ಈ ದೇವಾಲಯದ ಮುಂದೆ ಇದೆ. ಇಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ಹಿಂದೆ ಟಿಪ್ಪು ಸುಲ್ತಾನ್ ದಂಡೆತ್ತಿ ಬಂದು ಹುಲಿಗೆಯನ್ನು ತಲುಪಿದ.

ಆಗ ಟಿಪ್ಪು ಸುಲ್ತಾನನಿಗೆ ಮತ್ತು ಆತನ ಸೈನಿಕರಿಗೂ ವಾಂತಿ-ಬೇಧಿ ಅನುಭವವಾಯಿತಂತೆ ಟಿಪ್ಪುಸುಲ್ತಾನನ ಕನಸಿನಲ್ಲಿ ಹುಲಿಗೆಮ್ಮ ಬಂದು ಗ್ರಾಮ ಬಿಟ್ಟು ಹೊರಡಲು ತಿಳಿಸಿದರಂತೆ. ಆಗ ಟಿಪ್ಪುಸುಲ್ತಾನ್ ದೇವಿಗೆ “ಮುತ್ತಿನ ದಂಡೆ”ಯನ್ನು ನೀಡಿ ಶರಣಾದನಂತೆ. ನಂತರ ತನ್ನ ಸೈನ್ಯದೊಂದಿಗೆ ವಾಪಸ್ ಹೋದನೆಂದು ಇತಿಹಾಸ ಹೇಳುತ್ತದೆ. ಹೀಗೆ ಅನೇಕ ಜೀವಂತ ಪವಾಡಗಳನ್ನು ಮಾಡಿದ ಹುಲಿಗೆಮ್ಮ ಇಂದು ಲಕ್ಷಾಂತರ ಭಕ್ತರನ್ನು ಹೊಂದಿದ್ದಾಳೆ. ತನ್ನನ್ನು ನಂಬಿ ಬಂದ ಭಕ್ತರನ್ನು ಕೈಹಿಡಿದು ಅವರ ತೊಂದರೆಗಳನ್ನು ದೂರ ಮಾಡುತ್ತಿದ್ದಾಳೆ. ನೀವು ಹೊಸಪೇಟೆ, ಕುಷ್ಟಗಿ, ಕೊಪ್ಪಳ ಕ್ಕೆ ಹೋದರೆ, ತಪ್ಪದೆ ಹುಲಿಗೆಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ. ದೇವಿಯ ದರ್ಶನ ಪಡೆದು ಪುನೀತರಾಗಿ.