Advertisements

ಗಂಡನಿಲ್ಲ ಮಕ್ಕಳಿಲ್ಲ, ವಯಸ್ಸು 100 ಗಡಿ ದಾಟಿದೆ.. ಈ ಅಜ್ಜಿ ಯಾರು! ಇಂತಹ ಪರಿಸ್ಥಿತಿಯಲ್ಲಿಯೂ ಕೂಡ ಈ ಅಜ್ಜಿ ಮಾಡುತ್ತಿರುವ ಕೆಲಸ ಏನು ಗೊತ್ತಾ?

Inspire Kannada Mahiti

ನಾನು ಬದುಕ್ಬೇಕು ಎನ್ನುವ ಹಠ ಒಂದಿದ್ರೆ ಸಾಕು ಏನ್ ಬೇಕಾದ್ರೂ ಸಾಧಿಸಬಹುದು ಅನ್ನೋದಕ್ಕೆ ನೂರು ವರ್ಷ ಆದ್ರೂ ಕೂಡ ಸ್ವಾವಲಂಬಿಯಾಗಿ ಜೀವನವನ್ನು ನಡೆಸುತ್ತಿರುವ ಈ ಅಜ್ಜಿ ಎಷ್ಟೋ ನಿರುತ್ಸಾಹಿ ಜನರಿಗೆ ಸ್ಪೂರ್ತಿಯಾಗಿದ್ದಾರೆ.. ಈಗ ಇಂತಹ ವಯಸ್ಸಿನಲ್ಲೂ ಕೂಡ ತಲೆಯ ಮೇಲೆ ಸೌದೆಯ ಹೊರೆಯನ್ನು ಎತ್ತಿಕೊಂಡು ಹೋಗ್ತಿರುವ ಈ ಅಜ್ಜಿಯ ಹೆಸರು ನಿಂಗಮ್ಮ.. ಕೊರಟೆಗೆರೆಯ ಬಿಡುರಗಟ್ಟೆ ಗ್ರಾಮದವರು.. ಈಗಲೂ ಕೂಡ ಈ ಅಜ್ಜಿ ಸ್ವಾವಲಂಬಿಯಾಗಿ ಬದುಕುಬೇಕು ಅಂಥ ಈ ಪುಟ್ಟ ಮನೆಯಲ್ಲಿ ತಾನು ಮತ್ತೆ 20 ಕೋಳಿಗಳ ಸಾಕಾಣಿಕೆ ಮಾಡಿಕೊಂಡು ಏಕಾಂಗಿಯಾಗಿ ಜೀವನ ನಡೆಸುಕೊಂಡು ಹೋಗ್ತಿದ್ದಾರೆ.

[widget id=”custom_html-3″]

Advertisements

ಇನ್ನೂ ನಿಂಗಮ್ಮ ಅವರಿಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲ.. ಆದರೆ ನಾಟಿ ಕೋಳಿಗಳನ್ನು ಮಾರಿ ಅದರಿಂದ ಬಂದ ಹಣದಿಂದ ಹೊಟ್ಟೆ ತುಂಬಿಸಿಕೊಂಡು ಬದುಕುತ್ತಿದ್ದಾರೆ. ಇದರ ಜೊತೆಗೆ ಇರುವ ಇನ್ನೊಂದಿಷ್ಟು ತುಂಡು ಜಮೀನಿನಲ್ಲಿ ಬೇಸಾಯ ಕೂಡ ಮಾಡಿಕೊಳ್ತಿದ್ದಾರೆ ನಿಂಗಮ್ಮ ಅಜ್ಜಿ ಅವರು. ಪ್ರತಿನಿತ್ಯ 8 ರಿಂದ 10 ಕೋಳಿ ಮೊಟ್ಟೆಗಳನ್ನ ಒಂದು ಕೋಳಿ ಮೊಟ್ಟೆಗೆ 15 ರೂಪಾಯಿಗಳಂತೆ ಮಾರುತ್ತಾ ತನ್ನ ಕೈಯಲ್ಲಿ ಆಗುವಂತಹ ಕೆಲಸಗಳನ್ನೆಲ್ಲಾ ಮಾಡಿಕೊಂಡು ಯಾರಿಗೂ ಬಾರವಾಗದೇ ರೀತಿ ಜೀವನ ನಡೆಸುತ್ತಿದ್ದಾರೆ..

[widget id=”custom_html-3″]

ನಮ್ಮ ಸಮಾಜದಲ್ಲಿ ಏನಾದ್ರು ಉಚಿತವಾಗಿ ಸಿಕ್ಕರೆ ಸಾಕು ಸರ್ಕಾರದ ಯಾವ ಯೋಜನೆಯನ್ನ ಹೇಗೆ ಪಡೆದುಕೊಳ್ಳೋದು ಎನ್ನುವ ಯೋಚನೇಯಲ್ಲೇ ಸಮಯವನ್ನು ಕಳೆದುಕೊಂಡು ಜೀವನ ತುಂಬಾ ಕಷ್ಟ ಅಂಥ ಭಾವಿಸುತ್ತಾರೆ.. ಆದರೆ ಇಂತಹವರ ನಡುವೆ ಯಾವುದೇ ವೃದ್ಧಾಪ್ಯ ವೇತನ, ವಿದವಾ ವೇತನ, ಆ ಭಾಗ್ಯ ಈ ಭಾಗ್ಯ ಅಂಥ ತಲೆ ಕೆಡಸಿಕೊಳ್ಳದೇ ನಾನು ಇರುವರೆಗೂ ತನ್ನ ಕೈಯಲ್ಲಿ ಆಗುವ ಕೆಲಸಗಳನ್ನು ಮಾಡಿಕೊಂಡು ಬದುಕುತ್ತೇನೆ ಅನ್ನುವ ಈ ನಿಂಗಮ್ಮ ಅಜ್ಜಿ ನಿಜಕ್ಕೂ ಗ್ರೇಟ್ ಅಲ್ಲವೇ..