Advertisements

ಹೆಣ್ಣು ತನ್ನ ಗಂಡನಿಂದ ಅಪೇಕ್ಷೆ ಮಾಡುವ ಸಣ್ಣ ಪುಟ್ಟ ಆಸೆಗಳೇನು ಗೊತ್ತಾ ? ಗಂಡಸರು ತಿಳಿಯಲೇಬೇಕಾದದ್ದು..

Kannada Mahiti

ಹೆಣ್ಣುಮಕ್ಕಳ ಆಸೆಗೆ ಮಿತಿಯೇ ಎಲ್ಲ ಎಂಬ ಮಾತಿದೆ. ಅದರಲ್ಲೂ ಪ್ರತೀ ಹೆಣ್ಣು ಕೂಡ ತನ್ನ ಪತಿಯಿಂದ ಬಹಳಷ್ಟು ಆಸೆಗಳನ್ನ ನಿರೀಕ್ಷೆ ಮಾಡುವುದು ಸಾಮಾನ್ಯ. ದೊಡ್ಡ ದೊಡ್ಡ ಆಸೆಗಳನ್ನೇ ಈಡೇರಿಸಬೇಕೆಂದೇನಿಲ್ಲ. ಬಹುತೇಕ ಹೆಣ್ಣು ಮಕ್ಕಳು ಚಿಕ್ಕ ಪುಟ್ಟ ಆಸೆಗಳಿಂದಲೇ ತುಂಬಾ ತೃಪ್ತಿಪಡುವವರಿದ್ದಾರೆ. ಅದರಲ್ಲೂ ತನ್ನ ಪತಿಯಿಂದ ಈ ಸಣ್ಣ ಕನಸುಗಳು ಈಡೇರಿದ್ರೆ ಅಂತಹದರಲ್ಲೇ ಸ್ವರ್ಗ ಸುಖ ಕಾಣುತ್ತಾರೆ. ಹೀಗೆ ತನ್ನ ಗಂಡನಿಂದ ಅಪೇಕ್ಷೆ ಪಡುವ ಕೆಲವೊಂದು ಆಸೆಗಳು ಏನು ಎಂದು ನೋಡೋಣ ಬನ್ನಿ..

Advertisements

ಪ್ರತಿಯೊಂದು ಹೆಣ್ಣು ತನ್ನ ಗಂಡ ಬೆಳಿಗ್ಗೆ ಎದ್ದಾಗ ದೇವರ ಬಳಿಕ ತನ್ನ ಮುಖವನ್ನೇ ನೋಡಲಿ ಎಂದು ಇಷ್ಟಪಡುತ್ತಾರೆ. ಬೆಳಗಿನ ಟಿಫನ್ ಮಾಡುವಾಗ ಅದರಲ್ಲಿ ಒಂದು ತುತ್ತನ್ನ ನನಗಾಗಿ ಇಡಲಿ ಎಂದು, ಮನೆಯಿಂದ ಹೊರ ಹೋಗುವಾಗ ಹೋಗಿ ಬರುತ್ತೇನೆ ಎಂದು ಕಣ್ ಸನ್ನೆಯಲ್ಲಿ ಹೇಳಿದ್ರೂ ಸಾಕೆಂದು..ಒಂದು ವೇಳೆ ಹೇಳದೆ ಹೊರಟು ಬಿಟ್ಟರೆ ಯಾವುದೇ ಹೆಣ್ಣು ಕೂಡ ಆ ನೋವನ್ನ ಸಹಿಸುವುದಿಲ್ಲ..ಕೆಲಸದ ವೇಳೆ ಫೋನ್ ಮಾಡಿ ನಾ ತೊಂದರೆ ನೀಡಲು ಇಚ್ಛಿಸುವುದಿಲ್ಲ..ಆದರೆ ಊಟದ ವೇಳೆಯಾದರೂ ನನ್ನನ್ನ ಒಮ್ಮೆ ನೆನಪಿಸಿಕೊಳ್ಳಬೇಕು ಎಂಬುದನ್ನ ಮದ್ವೆಯಾಗಿರುವ ಹೆಣ್ಣು ಮಕ್ಕಳು ಅಪೇಕ್ಷೆಪಡುತ್ತಾರೆ.

ಇನ್ನು ಸಾಯಂಕಾಲ ಮನೆಗೆ ಮರಳುವ ವೇಳೆ ನನಗಾಗಿ ಏನನ್ನು ತರದಿದ್ದರೂ ಸರಿಯೇ, ಆದರೆ ಲೇಟಾಗಿ ಮನೆಗೆ ಬರೋದು ಬೇಡ..ಏಕೆಂದರೆ ನಾ ನಿನಗಾಗಿ ಕಾಯುತ್ತಿರುವೆ..ಮದ್ವೆ ಸಮಾರಂಭಗಳಿಗೆ ಹೋದಾಗ ನೀ ನನ್ನ ಕೈ ಹಿಡಿಯದಿದ್ದರೂ ಪರವಾಗಿಲ್ಲ ದೂರ ಮಾತ್ರ ಹೋಗಬೇಡ..ನಾನು ನಿನ್ನವಳೆಂದು ಎಲ್ಲಿಯೂ ನೀನು ಮರೆಯಬೇಡ..ಕೇವಲ ಸುಖವ ಮಾತ್ರ ನೀಡೆಂದು ನಾನು ಕೇಳುವುದಿಲ್ಲ..ನಾನು ನಿಮ್ಮ ಕಷ್ಟಗಳಲ್ಲಿಯೂ ಜೊತೆಯಾಗಿಯೇ ಇರುವೆ..ನಾನು ತಾಯಿಯಾದಾಗ ಆ ವೇಳೆ ನಾನೆ ನಿನ್ನ ಮಗುವಾಗಿರುತ್ತೇನೆ..ಆ ಸಮಯದಲ್ಲಿ ನಿನ್ನಿಂದ ಅತಿಯಾದ ಪ್ರೀತಿಯನ್ನ ನೀರಿಕ್ಷೆ ಮಾಡುವೆ ಅಷ್ಟೇ..ಅದಕ್ಕಾಗಿ ನೀನು ನನ್ನ ಮೇಲೆ ರೇಗಬೇಡ..ಏಕೆಂದರೆ ಆ ಸಮಯ ನಾನೆ ನಿನ್ನ ಮಗುವಾಗಿರುತ್ತೇನೆ ಎಂದು..

ನಿನ್ನ ಆರೋಗ್ಯ ಹದಗೆಟ್ಟಾಗ ನಿನಗಾಗಿ ನಾನಿರುವೆ..ಅದರ ಚಿಂತೆ ನಿನಗೆ ಬೇಡ..ನಂಗು ಒಂದು ವ್ಯಕ್ತಿತ್ವ ಇದೆ. ಅದನ್ನ ರೂಪಿಸಿಕೊಳ್ಳಲು ನಿನ್ನ ಸಹಕಾರವನ್ನ ನಾನು ನೀರಿಕ್ಷೆ ಮಾಡುವೆ. ನಾನೇನೇ ಆಗಿದ್ದರೂ ರಾತ್ರಿಯ ಸಮಯ ನಿನ್ನ ತೋಳಿನ ಮೇಲೆ ಮಲಗುವ ಆಕಾಶ ನೀಡು..ಆದರೆ ನನ್ನ ಆಸೆಗಳು ನಿನಗೆ ಅತೀ ಎನಿಸಿದ್ರೆ, ನನ್ನ ಬಗ್ಗೆ ಕ್ಷಮೆ ನೀಡುವ ಕರುಣೆ ತೋರು. ನನ್ನ ಗಂಡನಾಗಿರುವ ನಿನ್ನ ಬಳಿ ನನ್ನ ಬಯಕೆ, ಆಸೆಗಳನ್ನ ಹೇಳಿಕೊಳ್ಳದೆ ಮತ್ಯಾರ ಬಳಿ ಹೇಳಿಕೊಳ್ಳಲಿ ನೀನೇ ಹೇಳು..ನೋಡಿ ಇವೆಲ್ಲಾ ಎಲ್ಲಾ ಹೆಣ್ಣುಮಕ್ಕಳು ಪಡುವ ಚಿಕ್ಕ ಪುಟ್ಟ ಆಸೆಗಳು ಅಷ್ಟೇ. ಆದರೆ ಇದು ಕೆಲವರಿಗೆ ಅತಿರೇಕ, ಕಾಮಿಡಿಯಾಗಿ ಕಾಣಬಹುದು. ಆದರೆ ಈ ತರಹದ ಚಿಕ್ಕ ಪುಟ್ಟ ಆಸೆಗಳು ಕೂಡ ನೆರವೇರದೇ ಎಷ್ಟೋ ಹೆಣ್ಣುಮಕ್ಕಳು ಕೊ’ರಗುತ್ತಾರೆ ಎನ್ನುವ ವಿಷಯ ನೆನಪಿರಲಿ..

ಈ ನಮ್ಮ ಜೀವನ ಶಾಶ್ವತವಲ್ಲ..ಏಕಂದರೆ ನಾಳಿನ ಜೀವನದ ಬೆಗ್ಗೆ ನಮಗೆ ಯಾವುದೇ ಗ್ಯಾರಂಟಿ ಇಲ್ಲ. ಇರೋಷ್ಟು ದಿನ ನಮ್ಮನ್ನ ನಂಬಿದವರನ್ನ ಖುಷಿಯಾಗಿಟ್ಟುಕೊಂಡರೆ ಅದರಿಂದ ಆಗುವ ನಷ್ಟವಾದರೂ ಏನು ಹೇಳಿ..ಇದನ್ನ ಓದುತ್ತಿರುವವರು ಯಾರೇ ಆಗಿರಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಆಸೆ, ಭಾವನೆಗಳು ಇರುತ್ತವೆ. ಅದಕ್ಕೆ ಗೌರವ ಕೊಟ್ಟು ಅವನ್ನ ಈಡೇರಿಸಿದಾಗ ಮಾತ್ರ ಸ್ವರ್ಗ ಸುಖವನ್ನ ಕಾಣಬಹುದಾಗಿದೆ.