Advertisements

ಒಬ್ಬ ಮಹಿಳೆಗೆ ಬುದ್ದಿ ಹೇಳಲು ಹೋಗಿ, ನೀನೇನ್ IAS ಆಫಿಸರ್ ಆ. ನಿನ್ ಮಾತನ್ನ ಯಾಕ್ ಕೇಳ್ಬೇಕು ಅನ್ನಿಸಿಕೊಂಡ ವೈದ್ಯೆ.. ನಂತರ ಈಕೆ ಏನಾದಳು ಗೊತ್ತಾ?

Kannada Mahiti

ಈಗ ನಾವು ಹೇಳ್ತಾಯಿರುವ ಕತೆ ಕೇಳಿ ನಿಮಗೆ ಶಾಕ್ ಆಗಬಹುದು, ಈತರಾನೂ ಒಬ್ಬರ ಶೈಕ್ಷಣಿಕ ಆಸಕ್ತಿ ಬದಲಾಗತ್ತಾ ಅಂತ ಪ್ರಶ್ನೆ ಮೂಡಬಹುದು, ಎಸ್ ಯಾಕಂದ್ರೆ ಇದು ಎಂಬಿಬಿಎಸ್ ಓದಿ ಡಾಕ್ಟರ್ ಆಗಿದ್ದ ಹುಡುಗಿ ಐಎಎಸ್ ಆದ ರೋಚಕ ಕತೆಯಿದು. ಹೌದು ಈ ಘ’ಟ’ನೆ ನಡೆದದ್ದು ಛತ್ತೀಸ್‌ಘಡದಲ್ಲಿ ಅಂದಹಾಗೇ ಈ ಕತೆಯ ನಾಯಕಿ ಬೇರೆಯಾರು ಅಲ್ಲ, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಲ್ಲಿರುವಂತಹ ಪ್ರಿಯಾಂಕ ಶುಕ್ಲಾ ಅವರು ಬದುಕಿನ ಕತೆಯಿದು. ಹೌದು ಪ್ರಿಯಾಂಕ ಅವರು ಲಕ್ನೋದಲ್ಲಿ ಎಂಬಿಬಿಎಸ್ ಓದ್ತಾ ಇರುತ್ತಾರೆ, ಎಂಬಿಬಿಎಸ್ ಮಾಡಿದ ಬಳಿಕ ಪ್ರಾಕ್ಟೀಸ್‌ಗಾಗಿ ಒಮ್ಮೆ ಗ್ರಾಮೀಣ ಪ್ರದೇಶಗಳಿಗೆ ಭೇಟಿ ಕೊಡುತ್ತಾರೆ..

[widget id=”custom_html-3″]

Advertisements

ಆ ವೇಳೆ ಒಮ್ಮೆ ತೀರಾ ಕುಗ್ರಾಮದ ಪ್ರದೇಶಕ್ಕೆ ಪ್ರಾಕ್ಟಿಸ್ ಮಾಡಲಿಕ್ಕೆ ಪ್ರಿಯಾಂಕ ಹೋಗ್ತಾರೆ, ಆ ಸಂದರ್ಭದಲ್ಲಿ ಅವರು ಒಬ್ಬ ಮಹಿಳೆ ಕೊಳಕಾದ ಅಶುದ್ಧವಾದ ನೀರನ್ನು ಕುಡಿಯುತ್ತಿರುವ ದೃಶ್ಯವನ್ನು ಕಾಣ್ತಾರೆ, ಜೊತೆಗೆ ಆ ಮಹಿಳೆ ತನ್ನ ಮಗುವಿಗೂ ಕೂಡ ಅದೇ ಕೊಳಕು ನೀರನ್ನು ಕುಡಿಸುತ್ತಿರುವುದನ್ನು ಪ್ರಿಯಾಂಕ ನೋಡ್ತಾರೆ, ಇದನ್ನು ನೋಡಿದ ಪ್ರಿಯಾಂಕ ತಬ್ಬಿಬ್ಬಾಗಿ ಆ ಮಹಿಳೆಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಾರೆ, ಆ ನೀರನ್ನು ಕುಡಿಯಬೇಡಿ ಆ ನೀರನ್ನು ಕುಡಿಯುವುದರಿಂದ ಆರೋಗ್ಯ ಹದೆಗೆಡುತ್ತೆ ಅಂತ ಹೇಳುವ ಪ್ರಯತ್ನ ಮಾಡಿದ್ರೂ ಸಹ ಆ ಮಹಿಳೆ ಬಹಳ ರೂಡ್ ಆಗಿ ಮಾತನಾಡುವುದರ ಜೊತೆಗೆ ನೀನೆನೂ ಐಎಎಸ್? ನಿನ್ನ ಮಾತನ್ನು ನಾನ್ಯಾಕೆ ಕೇಳಬೇಕು ಅಂತ ಮರು ಪ್ರಶ್ನಿಸ್ತಾಳೆ.

[widget id=”custom_html-3″]


ಈ ಘ’ಟ’ನೆಯನ್ನು ಬಹಳ ಗಂಬೀರವಾಗಿ ಪರಿಗಣಿಸಿದ ಪ್ರಿಯಾಂಕ ಅವರು ತಾನೂ ಐಎಎಸ್ ಆಗಲೇ ಬೇಕು ಅಂತ ನಿರ್ಧರಿಸ್ತಾರೆ, ಆದರೆ ಐಎಎಸ್ ಆಗುವುದು ಅಂದ್ರೆ ಅಷ್ಟು ಸುಲಭದ ಮಾತೇನಲ್ಲ, ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಾಕಷ್ಟು ಕಷ್ಟಪಟ್ಟು ಪ್ರಿಯಾಂಕ ಅವರು ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ, ಆದರೆ ಮೊದಲನೇ ಸಲ ಪರೀಕ್ಷೆ ಬರೆದಾಗ ಪ್ರಿಯಾಂಕ ಅವರು ಉತ್ತೀರ್ಣರಾಗುವುದಿಲ್ಲ, ಮತ್ತೆ ಮರಳಿ ಯತ್ನಿಸ್ತಾರೆ. ನಂತರ ಎರಡನೇ ಬಾರೀ ಪ್ರಿಯಾಂಕ ಅವರು ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾಗ್ತಾರೆ..

[widget id=”custom_html-3″]

ನೋಡಿ ಯಾರೋ ಒಬ್ಬ ಮಹಿಳೆ ಹೇಳಿದ ಮಾತನ್ನು ಗಂಭೀರವಾಗಿ ಪರಿಗಣಿಸಿ ತನ್ನದಲ್ಲದ ವೃತ್ತಿಯನ್ನು ಕಷ್ಟಪಟ್ಟು ಸತತ ಶ್ರಮದಿಂದ ಪ್ರಿಯಾಂಕ ಪಡೆದುಕೊಂಡ ಪರಿ ನಿಜಕ್ಕೂ ಇನ್ಸ್ಪಿರೇಷನಲ್.
ಇನ್ನು ಪ್ರಿಯಾಂಕ ಶುಕ್ಲಾ ಅವರು ಕೇವಲ ವೈದ್ಯರಾಗಿರಲಿಲ್ಲ, ಐಎಎಸ್ ಆಗಿರಲಿಲ್ಲ, ಬದಲಾಗಿ ಓರ್ವ ಚಿತ್ರಕಲಾವಿದೆಯಾಗಿ, ಕವಯತ್ರಿಯಾಗಿ, ನೃತ್ಯ ಸಹ ಸಹ ಗುರುತಿಸಿಕೊಂಡಿದ್ದಾರೆ. ಜೊತೆಗೆ ರಾಷ್ಟಪತಿಗಳಿಂದ ಸಹ ಗೌರವವನ್ನು ಪಡೆದುಕೊಂಡಿದ್ದಾರೆ.
ಇಷ್ಟೆಲ್ಲ ಪ್ರತಿಭೆಗಳನ್ನು ಹೊಂದಿರುವ ಪ್ರಿಯಾಂಕ ಶುಕ್ಲಾ ಅವರ ಬಗ್ಗೆ ನಿವೇನು ಹೇಳ್ತೀರಾ..