Advertisements

ಇಡ್ಲಿಯನ್ನು ಸಾಲ ಕೇಳಿದ ಚಿಕ್ಕ ಹುಡುಗ.. ನಂತರ ಈ ಮಹಿಳೆ ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಕಳೆದ ವಾರ ಗೋವಿಂದ ಸ್ವಾಮಿ ಎಂಬ ವ್ಯಕ್ತಿ ಬೆಳಗ್ಗೆ ನಾಷ್ಟ ಮಾಡಲು ಒಂದು ಚಿಕ್ಕ ಹೋಟೆಲ್ ಗೆ ಹೋಗಿದ್ದ.. ಆಗ ಅಲ್ಲಿಗೆ ಒಬ್ಬ 10 ವರ್ಷದ ವಯಸ್ಸಿನ ಚಿಕ್ಕ ಹುಡುಗ ಒಬ್ಬ ಬಂದು ಹೋಟೆಲ್ ನಡೆಸುತ್ತಿದ್ದ ಮಹಿಳೆ ಬಳಿ ನನಗೆ 10 ಇಡ್ಲಿ ಪಾರ್ಸಲ್ ಕೊಡಿ ಹಣ ನಾಳೆ ಕೊಡ್ತೀನಿ ನಮ್ಮ ತಾಯಿ ಹೇಳಿದ್ದಾಳೆ ಎಂದು ಇಡ್ಲಿ ಸಾಲ ಕೊಡುವಂತೆ ಆ ಚಿಕ್ಕ ಹುಡುಗ ಹೋಟೆಲ್ ಮಹಿಳೆಯ ಬಳಿ ಗೋಗರೆದು ಕೇಳಿದ. ಹುಡುಗ ಸಾಲ ಕೇಳುತ್ತಿರುವುದನ್ನು ನೋಡಿದ ಆ ಹೋಟೆಲ್ ಓನರ್ ಮಹಿಳೆ ಮೊದಲೇ ನಿಮ್ಮದು ತುಂಬಾ ಹಣ ಬಾಕಿ ಇದೆ ಪರವಾಗಿಲ್ಲ, ನಿಮ್ಮ ಅಮ್ಮನ ಬಳಿ ಬಾಕಿ ಹಣ ಆದಷ್ಟು ಬೇಗ ಕೊಡುವಂತೆ ಹೇಳು, ಈಗ ಇಡ್ಲಿಯನ್ನು ತೆಗೆದುಕೊಂಡು ಹೋಗು..

Advertisements

ನೀನು ತೆಗೆದುಕೊಂಡು ಬಂದಿರುವ ಪಾತ್ರೆಯನ್ನು ಕೊಡು ಎಂದು ಹೇಳಿ ಆ ಹುಡುಗ ತಂದಿದ್ದ ಪಾತ್ರೆಯ ಹೊಳಗೆ ಸಾಂಬಾರ್ ಹಾಕಿ ಹತ್ತು ಇಡ್ಲಿಯನ್ನು ಪಾರ್ಸಲ್ ಕಟ್ಟಿ ಆ ಹುಡುಗನಿಗೆ ತೆಗೆದುಕೊಂಡು ಹೋಗುವಂತೆ ಹೋಟೆಲ್ ನಡೆಸುವ ಮಹಿಳೆ ಹೇಳಿದಳು. ಹಾಗ ಹುಡುಗ ಆಯ್ತು ನಾನು ಅಮ್ಮನ ಬಳಿ ಹೇಳ್ತೀನಿ ಎಂದು ಹೇಳಿ ಆ ಹುಡುಗ ಅಲ್ಲಿಂದ ಹೊರಟ.. ಈ ಘ’ಟನೆಯನ್ನ ಕಣ್ಣಾರೆ ನೋಡಿದ ಗೋವಿಂದಸ್ವಾಮಿ ಹೋಟೆಲ್ ನಡೆಸುತ್ತಿದ್ದ ಮಹಿಳೆಗೆ ಈ ರೀತಿ ಹೇಳಿದ. ಅಲ್ಲಾ ರೀ ನೀವು ತುಂಬಾ ಕಷ್ಟಪಟ್ಟು ಬಡತನದಲ್ಲಿ ಹೋಟೆಲ್ ನಡೆಸುತ್ತಿದ್ದೀರಾ.. ಅಂತದ್ರಲ್ಲಿ ಆ ಹುಡುಗ ಮೊದಲೇ ನಿಮಗೆ ತುಂಬಾ ಹಣ ಬಾಕಿ ಕೊಡಬೇಕು ಅಂತ ಹೇಳಿದ್ರೀ.

ಈಗಿರುವಾಗ ಪುನಃ ಇಡ್ಲಿ ಸಾಲ ಯಾಕೆ ಕೊಟ್ರಿ ನೀವು ಕೊಡಬಾರದಿತ್ತು ಎಂದು ಗೋವಿಂದ ಸ್ವಾಮಿ ಆ ಹೋಟೆಲ್ ಮಹಿಳಗೆ ಹೇಳಿದ.. ಆಗ ಓನರ್ ಮಹಿಳೆ ಈ ರೀತಿ ಉತ್ತರ ಕೊಟ್ಟರು ಅಯ್ಯೋ ಊಟ ಅಲ್ವಾ ಬಿಡಿ ಅಣ್ಣ ನೀವು ಹೇಳಿದಂತೆ ನಾನು ತುಂಬಾ ಕಷ್ಟ ಪಟ್ಟು ಹೋಟೆಲ್ ನಡೆಸ್ತಿದೀನಿ.. ಆದರು ಆ ಚಿಕ್ಕ ಹುಡುಗ ಇಡ್ಲಿ ಬಂದು ಕೇಳಿದಾಗ ಅವನಿಗೆ ಇಲ್ಲಾ ಎನ್ನಲು ಮನಸ್ಸು ಬರಲಿಲ್ಲ ಸಾಲ ಕೊಟ್ಟು ಬಿಡ್ತಾರೆ. ಆದ್ರೆ ನನ್ನ ಬಾಕಿ ಹಣ ಬರುವುದು ಸ್ವಲ್ಪ ಲೇಟ್ ಆಗಬಹುದು ಅಷ್ಟೇ.. ಎಲ್ಲರಿಗೂ ಸುಲಭವಾಗಿ ಹಣ ಸಂಪಾದನೆ ಮಾಡಲು ಸಾಧ್ಯವಿಲ್ಲ, ಆ ಹುಡುಗ ಹಸಿವಿನಿಂದ ಕೇಳಿದ್ದ. ಅದಕ್ಕೆ ಅವರ ತಾಯಿ ಕಳಿಸಿದ್ದಾರೆ..

ನಾನು ಇಡ್ಲಿಯನ್ನು ಸಾಲ ಕೊಡುತ್ತೀನಿ ಎಂದು ಅವರು ನಂಬಿ ಮಗನನ್ನು ಕಳಿಸಿದ್ದಾರೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಸುಳ್ಳು ಮಾಡಲು ನನಗೆ ಇಷ್ಟವಿಲ್ಲ. ನಾನು ಕಷ್ಟಪಟ್ಟು ಸಂಪದಾನೆ ಮಾಡಿರುವ ಹಣ ಬಂದೇ ಬರುತ್ತದೆ.. ಆದರೆ ನಾನು ಈಗ ಆ ಹುಡುಗನಿಗೆ ಸಾಲ‌ ಕೊಡದೇ ಇದ್ದರೆ ಅವರ ಕುಟುಂಬ ಹಸಿವಿನಿಂದ ಆಗೆ ಇರುತ್ತಿದ್ದರು. ಈ ಮಹಿಳೆಯ ಒಳ್ಳೆ ಗುಣ ನೋಡಿ ಗೋವಿಂದಸ್ವಾಮಿ ಅವರಿಗೆ ಆಶ್ಚರ್ಯ ಮತ್ತು ಕುಷಿಯಾಗುತ್ತದೆ.. ತನಗೆ ಕಷ್ಟ ಇದ್ದರು ಮತ್ತೊಬ್ಬರಿಗೆ ಸಹಾಯ ಮಾಡಬೇಕು ಎನ್ನುವ ಆ ಹೋಟೆಲ್ ಮಹಿಳೆ ಒಳ್ಳೆಯ ಗುಣದ ಬಗ್ಗೆ ನೀವೂ ಏನು ಹೇಳ್ತೀರಾ..